ಅರಮನೆ ಮೈದಾನ: ₹ 11 ಕೋಟಿ ತೆರಿಗೆ ಬಾಕಿ

7

ಅರಮನೆ ಮೈದಾನ: ₹ 11 ಕೋಟಿ ತೆರಿಗೆ ಬಾಕಿ

Published:
Updated:

ಬೆಂಗಳೂರು: ಅರಮನೆ ಮೈದಾನದಲ್ಲಿರುವ ವಿವಿಧ ಕಾರ್ಯಕ್ರಮ ಏರ್ಪಡಿಸುವ ಕಟ್ಟಡಗಳ ವಾರಸುದಾರರಿಂದ ಬಿಬಿಎಂಪಿಯು ತೆರಿಗೆ ವಸೂಲು ಮಾಡಬೇಕು ಎಂದು ನಗರದ ಹೋರಾಟಗಾರ ವಿ.ಎಂ.ನಾಯ್ಕ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 

ಮೈದಾನದಲ್ಲಿರುವ ಸುಮಾರು 23 ಕಟ್ಟಡಗಳ ಮಾಲೀಕರು ಒಟ್ಟು₹ 11.07 ಕೋಟಿ ತೆರಿಗೆ ಬಾಕಿ ಇರಿಸಿಕೊಂಡಿದ್ದಾರೆ. ಈ ಪ್ರಮಾಣದ ತೆರಿಗೆ ಬಾಕಿ ಇದ್ದರೂ ವಸೂಲು ಮಾಡದೆ ಅವರಿಗೆ ಪಾಲಿಕೆ ನೋಟಿಸ್‌ ಕೊಟ್ಟು ಸುಮ್ಮನಾಗಿದೆ. ಆದ್ದರಿಂದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ
ಕೋರಿದ್ದಾರೆ. 

ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಮೂಲಕ ಅವರು ಪಡೆದಿರುವ ಮಾಹಿತಿಯನ್ನೂ ಪತ್ರದೊಂದಿಗೆ ಲಗತ್ತಿಸಿದ್ದಾರೆ. ತೆರಿಗೆ ಬಾಕಿ ಇರಿಸಿಕೊಂಡಿರುವವರಲ್ಲಿ ಪ್ರತಿಷ್ಠಿತ ಹೋಟೆಲ್‌, ಕಲ್ಯಾಣ ಮಂಟಪ, ಪ್ರದರ್ಶನ, ಕಾರ್ಯಕ್ರಮ ನಿರ್ವಹಣಾ ಸಂಸ್ಥೆಗಳು ಸೇರಿವೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ‘ಅರಮನೆ ಮೈದಾನವು ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸು‍ಪರ್ದಿಯಲ್ಲಿದೆ. ವಿವಿಧ ಕಾರ್ಯಕ್ರಮಗಳ ಆಯೋಜಕರು ಮೈದಾನ ಬಳಕೆಗೆ ಆ ಇಲಾಖೆಯಿಂದ ಪರವಾನಗಿ ಪಡೆಯುತ್ತಾರೆ. ಇಡೀ ಮೈದಾನಕ್ಕೆ ಸಂಬಂಧಿಸಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆಯನ್ನು ಪಾವತಿಸಬೇಕು ಎಂದು ನಾವು ಪತ್ರ ಬರೆದಿದ್ದೇವೆ. ಆದರೆ, ಅವರು ಕಾರ್ಯಕ್ರಮವಾರು ತೆರಿಗೆ ಪಾವತಿಸುವುದಾಗಿ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

ಪಾಲಿಕೆ ನಿಯಮಾವಳಿ ಪ್ರಕಾರ ಅದು ಸಾಧ್ಯವಿಲ್ಲ. ಪೂರ್ಣ ಆಸ್ತಿಗೆ ತೆರಿಗೆಯನ್ನು ಪಾವತಿಸಬೇಕು. ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಅರಮನೆ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಮೈಸೂರು ರಾಜವಂಶಸ್ಥರ ನಡುವಿನ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ವಿಷಯ ಸಂಬಂಧಿಸಿ ಕಡತ ಪರಿಶೀಲನೆ ಮಾಡಿ ಪ್ರತಿಕ್ರಿಯಿಸುತ್ತೇನೆ ಎಂದು ಅವರು ಹೇಳಿದರು.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !