ಗುರುವಾರ , ಏಪ್ರಿಲ್ 15, 2021
21 °C
27ರ ವರೆಗೆ ನಡೆಯಲಿದೆ ಅಭಿಯಾನ: 95,891 ಮನೆಗಳನ್ನು ಭೇಟಿ ಮಾಡುವ ಗುರಿ

ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರವು ಜಿಲ್ಲೆಯಾದ್ಯಂತ ಕ್ಷಯರೋಗ ಪತ್ತೆ ಆಂದೋಲನ ಆರಂಭಿಸಿದೆ. 15ರಿಂದ ಆರಂಭವಾಗಿದ್ದು 27ರವರೆಗೆ ನಡೆಯಲಿದೆ. 

ಜಿಲ್ಲೆಯಲ್ಲಿ ಗಿರಿಜನ ಹಾಡಿಗಳು, ನಗರ ಕೊಳಚೆ ಪ್ರದೇಶ, ಎಚ್‌ಐವಿ ಸೋಂಕಿತರು, ಮಧುಮೇಹ, ಅಪೌಷ್ಟಿಕತೆ, ಗುಡ್ಡಗಾಡು ಪ್ರದೇಶ, ತಂಬಾಕು ಸೇವನೆ ಮಾಡುವವರು, ಗಣಿಗಾರಿಕೆ ಪ್ರದೇಶ ಒಳಗೊಂಡಂತೆ 296 ಪ್ರದೇಶಗಳನ್ನು ಗಂಭೀರ ಎಂದು ಗುರುತಿಸಲಾಗಿದೆ. ನಿಯಂತ್ರಣ ಕೇಂದ್ರದ ಸಿಬ್ಬಂದಿ ಈ ಪ್ರದೇಶಗಳ 95,891 ಮನೆಗಳಿಗೆ ಭೇಟಿ ನೀಡಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಕ್ಷಯರೋಗ ಲಕ್ಷಣಗಳ ಇರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಉಚಿತವಾಗಿ ಚಿಕಿತ್ಸೆ ನೀಡಲಿದ್ದಾರೆ.

ಇದಕ್ಕಾಗಿ 324 ತಂಡಗಳನ್ನು ರಚಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಇದರಲ್ಲಿದ್ದಾರೆ. 

ಕೇಂದ್ರ ಸರ್ಕಾರದ ಆರ್‌ಎನ್‌ಟಿಸಿ ಕಾರ್ಯಕ್ರಮದ ಅಡಿಯಲ್ಲಿ 2025ರ ವೇಳೆಗೆ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. 11,30,499 ಜನಸಂಖ್ಯೆ ಇರುವ ಜಿಲ್ಲೆಯಲ್ಲಿ 4,27,119 ಮಂದಿಯನ್ನು ಗುರಿಯಾಗಿಸಿಕೊಂಡು ಆಂದೋಲನ ನಡೆಯಲಿದೆ. ಒಟ್ಟಾರೆ 95,891 ಮನೆಗಳಲ್ಲಿ ತಪಾಸಣೆ ನಡೆಸಲಾಗುವುದು ಎಂದು  ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎನ್.ಮಹದೇವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.