ಹಲ್ಲೆ: ಶಿಕ್ಷಕನ ವಿರುದ್ಧ ಶಿಕ್ಷಕಿಯಿಂದ ದೂರು

7

ಹಲ್ಲೆ: ಶಿಕ್ಷಕನ ವಿರುದ್ಧ ಶಿಕ್ಷಕಿಯಿಂದ ದೂರು

Published:
Updated:

ಚಾಮರಾಜನಗರ: ಪಟ್ಟಣದ ಖಾಸಗಿ ಶಾಲೆಯೊಂದರ ಶಿಕ್ಷಕರೊಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹರವೆಯ ಶಿಕ್ಷಕಿ ಚಾಮರಾಜನಗರ ಪಟ್ಟಣ ‌ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 ಸಂತ ಪೌಲರ ವಿದ್ಯಾಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುನೀತ್‌ ಕುಮಾರ್‌ (45) ಎಂಬುವವರ ವಿರುದ್ಧ ಶಿಕ್ಷಕಿ ದೂರು ನೀಡಿದ್ದಾರೆ ಎಂದು ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಹದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಸದ್ಯ ಹರವೆಯ ಖಾಸಗಿ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿ ಎರಡು ವರ್ಷಗಳ ಹಿಂದೆ ಪಟ್ಟಣದ ಮತ್ತೊಂದು ಖಾಸಗಿ ಶಾಲೆಯಲ್ಲಿ ಬೋಧಕರಾಗಿದ್ದರು. ಈ ಸಂದರ್ಭದಲ್ಲಿ ಪುನೀತ್‌ ಅವರ ಪರಿಚಯವಾಗಿತ್ತು.

ಪುನೀತ್‌ ಅವರ ಮಗಳ ಹುಟ್ಟುಹಬ್ಬಕ್ಕೆಮನೆಗೆ ಹೋಗಿದ್ದಾಗ ಶಿಕ್ಷಕಿಯ ‌ಫೋಟೋಗಳನ್ನು ಅವರು ತೆಗೆದಿದ್ದರು ಎಂದು ಹೇಳಲಾಗಿದೆ. ಮಗಳ ಮೂಲಕ ಶಿಕ್ಷಕಿಯ ದೂರವಾಣಿ ಸಂಖ್ಯೆಯನ್ನು ಪಡೆದು, ತನ್ನನ್ನು ಮದುವೆಯಾಗಬೇಕು ಎಂದು ಪುನೀತ್‌ ಒತ್ತಡ ಹಾಕುತ್ತಿದ್ದರು. ಇಲ್ಲದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ಗೊತ್ತಾಗಿದೆ.

ಶನಿವಾರ ಸಂಜೆ ಪಟ್ಟಣದ ಕ್ರೀಡಾಂಗಣದ ಬಳಿಯಲ್ಲಿ ಇಬ್ಬರ ನಡುವೆ ಜಗಳ ಆಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಹೋಗಿ ಜಗಳವನ್ನು ಬಿಡಿಸಿ, ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ಅದೇ ದಿನ ರಾತ್ರಿ ಪೊಲೀಸ್‌ ಠಾಣೆಗೆ ದೂರು ನೀಡಲು ಅವರು ಬಂದಿದ್ದರು. ಆದರೆ, ಅಂದು ಪ್ರಕರಣ ದಾಖಲಿಸಿರಲಿಲ್ಲ. ಹಾಗಾಗಿ, ಭಾನುವಾರ ಮತ್ತೆ ಬಂದು ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ಶಿಕ್ಷಕನ ವಿರುದ್ಧ ವಿರುದ್ಧ ಐಪಿಸಿ ಸೆಕ್ಷನ್‌ 323, 324ರ ಅಡಿಯಲ್ಲಿ (ಹಲ್ಲೆ) ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ. ತನಿಖೆ ನಡೆಸುತ್ತಿದ್ದೇವೆ’ ಎಂದು ಮಹದೇವಯ್ಯ ‘ಪ್ರಜಾವಾಣಿ’ ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !