ಸೋಮವಾರ, ನವೆಂಬರ್ 18, 2019
23 °C
ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿಮತ

‘ರಾಧಾಕೃಷ್ಣನ್‌ ವಿಚಾರಧಾರೆ ಎಲ್ಲರಿಗೂ ತಲುಪಲಿ’

Published:
Updated:
Prajavani

ಮೈಸೂರು: ‘ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ವಿಚಾರಧಾರೆಗಳು, ಕೊಡುಗೆ, ಸಂದೇಶ, ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ತಪ್ಪದೇ ನಡೆಯಬೇಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

ನಗರದ ಕಲಾಮಂದಿರದಲ್ಲಿ ಗುರುವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ಅಂತರಾಳದಲ್ಲಿ ಗುರುವನ್ನು ಪೂಜಿಸಿದವನು ಸತ್ಪ್ರಜೆಯಾಗಿ ರೂಪುಗೊಳ್ಳುತ್ತಾನೆ’ ಎಂದರು.

‘ಸೈನಿಕರು, ಶಿಕ್ಷಕರು ದೇಶದ ಸಂಪತ್ತು. ಕಲುಷಿತವಾಗದ ಸಂಪತ್ತು ಶಿಕ್ಷಣ ಇಲಾಖೆಯಾಗಿದೆ. ನಮ್ಮ ಇಂದಿನ ಸ್ಥಿತಿಗೆ ಕಾರಣರಾದ ಶಿಕ್ಷಕರನ್ನು ನೆನೆಯುವುದು ಪ್ರತಿಯೊಬ್ಬರ ಕರ್ತವ್ಯ. ಇದೊಂದು ಭಾವನೆ ಹಂಚಿಕೊಳ್ಳುವ ಕಾರ್ಯಕ್ರಮ’ ಎಂದು ಹೇಳಿದರು.

‘ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ದಿ.ಗೋವಿಂದೇಗೌಡ ಅವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಮೂಲ್ಯವಾದುದು. ಭ್ರಷ್ಟಾಚಾರದಲ್ಲಿ ಭಾಗಿಯಾಗದ ಸಚಿವ ಎಂದರೇ ಗೋವಿಂದೇಗೌಡರು’ ಎಂದು ಸೋಮಣ್ಣ ನೆನಪಿಸಿಕೊಂಡರು.

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದ ಸಚಿವರು, ಇದೇ ಸಂದರ್ಭ ನಿವೃತ್ತ ಶಿಕ್ಷಕರನ್ನು ಅಭಿನಂದಿಸಿದರು.

ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶಾಸಕರಾದ ಎಲ್‌.ನಾಗೇಂದ್ರ, ಎಸ್‌.ಎ.ರಾಮದಾಸ್‌, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳ ಶ್ಯಾಂ, ಸಿಇಓ ಕೆ.ಜ್ಯೋತಿ ಉಪಸ್ಥಿತರಿದ್ದರು.

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು: ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ವೈ.ಎಂ.ಸುಹಾಸಿನಿ (ಕಾಳನಹುಂಡಿ, ಸರಗೂರು ತಾ.), ಜೆನೆಟ್ ವಿಲೆಂಜಲಿನ್ (ಎನ್.ಜಿ.ಕೆ ಬ್ಲಾಕ್ ಶಾಂತಿನಗರ, ಮೈಸೂರು), ಭಾಸ್ಕರ (ಅಡಿಗನಹಳ್ಳಿ, ಕೆ.ಆರ್.ನಗರ ತಾ.), ಕೆ.ಎಸ್.ಹರೀಶ್‍ಕುಮಾರ್ (ಚಿಲಕನಹಳ್ಳಿ, ನಂಜನಗೂಡು), ಆರ್.ಸಾಕಮ್ಮ (ಮುಮ್ಮಡಿ ಕೊಪ್ಪಲು, ಪಿರಿಯಾಪಟ್ಟಣ ತಾ.), ಸುಬ್ಬಶೆಟ್ಟಿ (ಧರ್ಮಯ್ಯನಹುಂಡಿ, ತಿ.ನರಸೀಪುರ ತಾ).

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ರಿಚರ್ಡ್ ಜಾನ್ಸನ್ (ಹೆಬ್ಬಾಳು, ಹುಣಸೂರು ತಾ.), ಎಂ.ಎಸ್.ಸರೋಜಾ (ಉದಯಗಿರಿ, ಮೈಸೂರು), ಎಚ್.ಎಸ್.ಜಮುನಾ (ಶಾರದ ವಿಲಾಸ ಕನಕಗಿರಿ, ಮೈಸೂರು), ಎಸ್.ಜೆ.ಗಣೇಶ (ಹುಯಿಲಾಳು, ಮೈಸೂರು ತಾ.), ಎಸ್.ಎಂ.ಗಾಯತ್ರಿ (ಕುಪ್ಪರವಳ್ಳಿ, ನಂಜನಗೂಡು ತಾ.), ಕೆ.ಎಸ್.ಸತೀಶ (ಮುಂಡೂರು, ಕೆ.ಆರ್.ನಗರ ತಾ.), ಎಂ.ಆರ್.ಸತ್ಯವತಿ (ಗರ್ಗೇಶ್ವರಿ, ತಿ.ನರಸಿಪುರ ತಾ.), ಬಿ.ಎಂ.ಮಲ್ಲೇಶ (ಬಿಡಗಲು, ಎಚ್.ಡಿ.ಕೋಟೆ ತಾ.), ಎಂ.ಆರ್.ಬಿಂದು (ಅಬ್ಬೂರು, ಪಿರಿಯಪಟ್ಟಣ ತಾ.).

ಪ್ರೌಢಶಾಲಾ ವಿಭಾಗ: ಎನ್.ಆರ್.ನಿರ್ಮಲ (ಬಿಳಿಕೆರೆ, ಹುಣಸೂರು ತಾ.), ಎನ್.ಅರುಣಾ (ಬನ್ನಿಮಂಟಪ ಬಡಾವಣೆ, ಕೆ.ಆರ್.ನಗರ ತಾ.), ಷಹೆದಾ ಬಾನು (ವರುಣಾ ಮೈಸೂರು ತಾ.), ಎನ್.ನಾಗರಾಜು (ರೈಲ್ವೆ ಕಾರ್ಯಗಾರ ಕಾಲೊನಿ, ಮೈಸೂರು), ಎಚ್.ಎಸ್.ಸಿರಿದೇವಿ (ಬನ್ನೂರು, ಟಿ.ನರಸೀಪುರ), ಬಸವರಾಜು (ಒಂಟಿಕೊಪ್ಪಲು, ಮೈಸೂರು), ಎಸ್.ಡಿ.ಶಿವಣ್ಣ (ಪಂಚವಳ್ಳಿ, ಪಿರಿಯಪಟ್ಟಣ ತಾ.).

ಪ್ರತಿಕ್ರಿಯಿಸಿ (+)