ಖಾಸಗಿ ಶಾಲಾ ಶಿಕ್ಷಕರ ಸಂಘದ ಧರಣಿ

ಮಂಗಳವಾರ, ಜೂನ್ 25, 2019
22 °C

ಖಾಸಗಿ ಶಾಲಾ ಶಿಕ್ಷಕರ ಸಂಘದ ಧರಣಿ

Published:
Updated:
Prajavani

ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ನಿಯಮಬಾಹಿರವಾಗಿ ಲೆಕ್ಕ ಅಧೀಕ್ಷಕರಿಗೆ ವಹಿಸಿದ ಪತ್ರಾಂಕಿತ ಸಹಾಯಕ ಹುದ್ದೆಯ ಪ್ರಭಾರವನ್ನು ರದ್ದುಪಡಿಸುವುದು ಸೇರಿದಂತೆ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘದ ವತಿಯಿಂದ, ಡಿಡಿಪಿಐ ಕಚೇರಿ ಎದುರು ಸೋಮವಾರ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.

ಸಂಘದ ಗೌರವ ಅಧ್ಯಕ್ಷ ಜೆ.ಡಿ.ಚೌಧರಿ ಮಾತನಾಡಿ ‘ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಖಾಲಿ ಇರುವ ಪತ್ರಾಂಕಿತ ಸಹಾಯಕರ ಹುದ್ದೆಯ ಪ್ರಭಾರವನ್ನು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಲ್ಲಿನ ಪತ್ರಾಂಕಿತ ವ್ಯವಸ್ಥಾಪಕರಲ್ಲಿ ಒಬ್ಬರನ್ನು ಅಥವಾ ಉಪ ನಿರ್ದೇಶಕರ ಕಚೇರಿಯಲ್ಲಿನ ಹಿರಿಯ ಅಧೀಕ್ಷಕರಿಗೆ ಪ್ರಭಾರ ವಹಿಸಲು ನಿಯಮದಲ್ಲಿ ಅವಕಾಶವಿದೆ.

ಆದರೆ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪ ನಿರ್ದೇಶಕರು ಈ ನಿಯಮವನ್ನು ಗಾಳಿಗೆ ತೂರಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಲೆಕ್ಕ ಅಧೀಕ್ಷಕರಿಗೆ ಪತ್ರಾಂಕಿತ ಸಹಾಯಕ ಹುದ್ದೆಯ ಪ್ರಭಾರ ವಹಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ದೂರಿದರು.

‘ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳೇ ಇಲಾಖಾ ನಿಯಮಗಳನ್ನು ಗಾಳಿಗೆ ತೂರುವುದೆಂದರೆ ಏನರ್ಥ ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ನಿಯಮಬಾಹಿರವಾಗಿ ಲೆಕ್ಕ ಅಧೀಕ್ಷಕರಿಗೆ ವಹಿಸಿದ ಪತ್ರಾಂಕಿತ ಸಹಾಯಕ ಹುದ್ದೆಯ ಪ್ರಭಾರವನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಅರವಿಂದ ಪಾಟೀಲ, ಪ್ರಧಾನ ಕಾರ್ಯದರ್ಶಿ ಪ್ರಭು ಅಳ್ಳಗಿ, ರವೂಫ್ ಅಥಣಿ, ತೌಸಿಫ್‌ ಮೌಲಾನಾ, ಆರ್.ಎಂ.ಅವಟಿ, ಎಂ.ಎನ್.ಇನಾಮದಾರ, ಎಸ್.ಎನ್.ಸ್ಥಾವರಮಠ, ಡಿ.ಎಸ್.ದಶವಂತ, ಎಸ್.ಎಂ.ಭುಯ್ಯಾರ, ಎಫ್.ಎಂ.ಹಳದಿಮಠ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !