ನ್ಯೂಜಿಲೆಂಡ್‌: ಕ್ರೈಸ್ಟ್‌ಚರ್ಚ್‌ ಮಸೀದಿಯಲ್ಲಿ ದಾಳಿ ಬಳಿಕ ಮೊದಲ ಬಾರಿ ಪ್ರಾರ್ಥನೆ

ಸೋಮವಾರ, ಏಪ್ರಿಲ್ 22, 2019
29 °C

ನ್ಯೂಜಿಲೆಂಡ್‌: ಕ್ರೈಸ್ಟ್‌ಚರ್ಚ್‌ ಮಸೀದಿಯಲ್ಲಿ ದಾಳಿ ಬಳಿಕ ಮೊದಲ ಬಾರಿ ಪ್ರಾರ್ಥನೆ

Published:
Updated:

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ನಗರದ ಅಲ್‌ನೂರ್‌ ಮತ್ತು ಲಿನ್‌ವುಡ್‌ ಮಸೀದಿಗಳಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ಮತ್ತೆ ಪ್ರಾರ್ಥನೆ ನಡೆಯಿತು.  

ಿಇದೇ 15ರಂದು  ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಮಸೀದಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದ ಆಸ್ಟ್ರೇಲಿಯಾದ ಬ್ರೆಂಟನ್‌ ಟೆರ‍್ರಂಟ್‌ 50 ಜನರ ಸಾವಿಗೆ ಕಾರಣವಾಗಿದ್ದ. ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು ಭದ್ರತೆಯ ಕಾರಣ ಅಲ್‌ನೂರ್ ಮಸೀದಿಯನ್ನು ವಶಕ್ಕೆ ಪಡೆದಿದ್ದರು.  

ಶನಿವಾರ ಮಸೀದಿಯನ್ನು ಸ್ಥಳೀಯ ಮುಸ್ಲಿಮರಿಗೆ ಮರಳಿಸಿದ್ದು, ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು.

‘ಮಸೀದಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಒಮ್ಮೆಲೆ 15 ಜನರಿಗಷ್ಟೇ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ’  ಎಂದು ಮಸೀದಿಯ ಸ್ವಯಂಸೇವಕ ಸಯ್ಯದ್‌ ಹಸೀನ್‌ ಹೇಳಿದ್ದಾರೆ.  ದಾಳಿಯ ನಂತರ ಮೊದಲಿಗೆ ಮಸೀದಿ ಪ್ರವೇಶಿಸಿದವರಲ್ಲಿ ಗುಂಡಿನ ದಾಳಿ ವೇಳೆ ಬದುಕುಳಿದ ವೊಹ್ರಾ ಮೊಹಮ್ಮದ್‌ ಹುಝೆಫ್‌ ಸಹ ಒಬ್ಬರಾಗಿದ್ದಾರೆ.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !