ಸಮಾಜ ಸೇವೆಗಾಗಿ ಕೈ ರುಚಿ

7

ಸಮಾಜ ಸೇವೆಗಾಗಿ ಕೈ ರುಚಿ

Published:
Updated:
Prajavani

ಖಾಸಗಿ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯಡಿ ದೇಣಿಗೆ ನೀಡುವುದು, ಸಾಮಾಜಿಕ ಕಾಳಜಿ ತೋರುವುದು ಹೊಸತೇನಲ್ಲ. ಕಂಪನಿಯೇನೋ ತನ್ನ ಲಾಭದಲ್ಲಿ ಇಂತಿಷ್ಟು ಎಂದು ಸಾಮಾಜಿಕ ಕಾರ್ಯಗಳಿಗೆ ಹಣ ನೀಡುತ್ತದೆ. ಆದರೆ, ಅದರಲ್ಲಿ ಸಿಬ್ಬಂದಿಯ ಹೊಣೆಗಾರಿಕೆ ಏನು? ಅವರೂ ಆ ಹೊಣೆಗಾರಿಕೆಯ ಭಾಗವಾಗಬೇಕಲ್ಲವೇ? ಹೀಗೆ ಯೋಚಿಸಿದ ಕಂಪನಿಯೊಂದು ಸಿಬ್ಬಂದಿ ಸಹಭಾಗಿತ್ವದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಇನ್ನಷ್ಟು ಜವಾಬ್ದಾರಿಯಿಂದ ನಿಭಾಯಿಸುತ್ತಿದೆ.

ವೈಟ್‌ಫೀಲ್ಡ್‌ನ ಇಂಟರ್‌ನ್ಯಾಷನಲ್‌ ಟೆಕ್‌ ಪಾರ್ಕ್‌ (ಐಟಿಪಿಎಲ್‌)ನಲ್ಲಿರುವ ‘ಅಪ್ಲೈಡ್‌ ಮಟೀರಿಯಲ್ಸ್‌ ಇಂಡಿಯಾ’ ಕಂಪನಿ ತಮ್ಮ ಸಿಬ್ಬಂದಿಗೆ ವಿಶೇಷ ಅಧಿಕಾರವೊಂದನ್ನು ನೀಡಿದೆ. ಸಂಸ್ಥೆಯ ಸಿಬ್ಬಂದಿ ‘ಫುಡ್‌ ಡ್ರೈವ್‌’ ಮೂಲಕ ಆಹಾರ ಪದಾರ್ಥ ಮಾರಿ ಹಣ ಸಂಗ್ರಹಿಸಬಹುದು. ಸಂಗೀತ ಕಾರ್ಯಕ್ರಮ ಆಯೋಜಿಸಿ, ಸ್ಪರ್ಧೆಗಳನ್ನು ನಡೆಸಿ, ಆಟಗಳನ್ನು ಆಯೋಜಿಸಿ ಹಣ ಸಂಗ್ರಹಿಸುವ ಅವಕಾಶ ಕಲ್ಪಿಸಿದೆ. ಪ್ರತಿ ವರ್ಷ ಡಿಸೆಂಬರಿನಲ್ಲಿ ಸಿಬ್ಬಂದಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಹೀಗೆ ಸಂಗ್ರಹಿಸಿದ ಹಣದಷ್ಟೇ ಮೊತ್ತವನ್ನು ಕಂಪೆನಿಯು ಭರಿಸುತ್ತದೆ. ಕಂಪನಿಯು 2013ರಿಂದ ಫುಡ್‌ ಡ್ರೈವ್‌ ಯೋಜನೆ ಜಾರಿಗೊಳಿಸಿದೆ. ಇದು ಕಚೇರಿಗಳ ನಡುವೆ ಆರೋಗ್ಯಕರ ಸ್ಪರ್ಧೆಗೂ ಕಾರಣವಾಗಿದೆ. ಸಿಬ್ಬಂದಿ ತಮ್ಮ ಮನೆಯಲ್ಲಿಯೇ ಆಹಾರ ತಯಾರಿಸಿ ತಂದು ಮಾರಾಟ ಮಾಡುತ್ತಾರೆ. ಬಟ್ಟೆ, ಆಟಿಕೆ ಮತ್ತಿತರ ವಸ್ತುಗಳನ್ನು ಮಾರುತ್ತಾರೆ. 

2017ರಲ್ಲಿ ಸಿಬ್ಬಂದಿ ಸಂಗ್ರಹಿಸಿದ ₹28 ಲಕ್ಷಕ್ಕೆ ಕಂಪೆನಿಯೂ ಅಷ್ಟೇ ಸೇರಿಸಿ ₹56 ಲಕ್ಷ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿದೆ. 2018ರ ನವೆಂಬರ್ 26ರಿಂದ ಡಿಸೆಂಬರ್ 21ರವರೆಗೆ ನಡೆದ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಸುಮಾರು 3000 ಸಿಬ್ಬಂದಿ ಭಾಗವಹಿಸಿದ್ದರು. ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಕೂಟ, ರಸಪ್ರಶ್ನೆ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಲ್ಲದೇ ತಾವೇ ಮಳಿಗೆ ತೆರೆದು ಉಪಾಹಾರ, ಊಟ, ಕರಿದ ತಿಂಡಿಗಳನ್ನು ವ್ಯಾಪಾರ ಮಾಡಿದರು. ಆಟಿಕೆಗಳನ್ನು ಮಾರಿದರು. ಐಟಿಪಿಎಲ್‌ನಲ್ಲಿರುವ ವಿವಿಧ ಸಂಸ್ಥೆಗಳ ಸಿಬ್ಬಂದಿಯೂ ಭಾಗವಹಿಸಿ ನಿಧಿ ಸಂಗ್ರಹಕ್ಕೆ ನೆರವಾದರು.

ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ರಕ್ತದಾನ ಶಿಬಿರ, ಸ್ಟೆಮ್‌ಸೆಲ್‌ ದಾನ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ನಡೆಸಿದೆ. ಯುನೈಟೆಡ್‌ ವೇ ಆಫ್ ಬೆಂಗಳೂರು ಜೊತೆ ಸೇರಿ 18 ಹಳ್ಳಿಗಳನ್ನು ದತ್ತು ಸ್ವೀಕಾರ ಮಾಡಿದೆ. ವಿದ್ಯಾರ್ಥಿವೇತನ, ಮಹಿಳಾ ಸಬಲೀಕರಣಕ್ಕಾಗಿ ಕಿರುಸಾಲ ಯೋಜನೆ, ಟೈಲರಿಂಗ್‌ ಗೆ ನೆರವು ನೀಡುತ್ತಿದೆ. 105 ಮನೆಗಳಿಗೆ ಮಳೆ ನೀರಿನ ಕೊಯ್ಲು ಘಟಕ ಅಳವಡಿಸಿದೆ.  

‘ಅಪ್ಲೈಡ್ ಮೆಟೀರಿಯಲ್ಸ್ ಸಾಮಾಜಿಕ ಹೊಣೆಗಾರಿಕೆಯಡಿ ದೀರ್ಘ ಕಾಲದಿಂದ ಕಾರ್ಯ ನಿರ್ವಹಿಸುತ್ತಿದೆ. ನೌಕರರ ಜನೋಪಯೋಗಿ ಕಾರ್ಯಗಳಿಗೆ ಸಂಸ್ಥೆ ಸದಾ ಪ್ರೋತ್ಸಾಹ ನೀಡುತ್ತದೆ. ಫುಡ್‌ಡ್ರೈವ್‌ ಕಾರ್ಯಕ್ರಮ ದೇಶದಲ್ಲಿರುವ ನಮ್ಮ ಎಲ್ಲ ಶಾಖೆಗಳ ಸಿಬ್ಬಂದಿಯನ್ನು ಒಗ್ಗೂಡಿಸುತ್ತದೆ. ನಾವು ದತ್ತು ಪಡೆದ ಹಳ್ಳಿಗಳ 300ಕ್ಕೂ ಹೆಚ್ಚು ಬಡ ಮಕ್ಕಳಿಗೆ ಈ ಹಣ ವಿನಿಯೋಗವಾಗಲಿದೆ’ ಎಂದು ಸಂಸ್ಥೆಯ ಅಧಿಕಾರಿ ಮಾಗೇಶ್‌ ಸುಬ್ರಹ್ಮಣ್ಯನ್‌ ಹೇಳುತ್ತಾರೆ. 

‘ಸಾಮಾಜಿಕ ಹೊಣೆಗಾರಿಕೆಯಡಿ ನಮ್ಮ ಸಿಬ್ಬಂದಿಯ ಬದ್ಧತೆ ಶ್ಲಾಘನೀಯ. ಕಂಪನಿ ಹೂಡಿಕೆ ಮಾಡುವ ಹಲವು ಕಾರ್ಯಕ್ರಮಗಳಿದ್ದರೂ, ಅದರಲ್ಲಿ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿರುತ್ತದೆ. ಇದನ್ನು ಸಂಸ್ಥೆ ಸದಾ ಪ್ರೋತ್ಸಾಹಿಸುತ್ತದೆ’ ಎಂದು ಸಂಸ್ಥೆಯ ಮಾಹಿತಿ ವಿಭಾಗದ ಮುಖ್ಯಸ್ಥೆ ಅರುರೋಪಾ ಪಿರೇರಾ ಹೇಳುತ್ತಾರೆ.

*****

ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಏನೆಂದು ತಿಳಿಯುವುದು ಈ ಯೋಜನೆಯ ಮುಖ್ಯ ಉದ್ದೇಶ. ನಮ್ಮ ಸಿಬ್ಬಂದಿ ಸಮಾಜಕ್ಕೆ ಕೊಡುಗೆ ನೀಡಲು ಬದ್ಧರಾಗಿದ್ದಾರೆ. ಸಾಮಾಜಿಕ ಹೊಣೆಗಾರಿಕೆಯಡಿ ನಾವು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಫುಡ್‌ ಡ್ರೈವ್‌ ಕಾರ್ಯಕ್ರಮವನ್ನು ಚೆನ್ನೈ, ಮುಂಬೈ, ದೆಹಲಿ ಶಾಖೆಗಳಲ್ಲಿಯೂ ನಡೆಸುತ್ತಿದ್ದೇವೆ. ನಮ್ಮ ಸಿಬ್ಬಂದಿಯ ಔದಾರ್ಯ ಮತ್ತು ಪ‍್ರೋತ್ಸಾಹ ದತ್ತು ಪಡೆದ ಹಳ್ಳಿಗಳ ಮಕ್ಕಳ ಅಭಿವೃದ್ಧಿಗೆ ನೆರವಾಗಲು ಸಹಾಯವಾಗುತ್ತಿದೆ.

– ಶ್ರೀನಿವಾಸ ಸತ್ಯ, ಅಪ್ಲೈಡ್‌ ಮಟೀರಿಯಲ್ಸ್‌ ಇಂಡಿಯಾ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !