ಸಂಬಳ ಬೇಡವೆಂದ ಸಿ.ಎಂ. ತಾಂತ್ರಿಕ ಸಲಹೆಗಾರ

7

ಸಂಬಳ ಬೇಡವೆಂದ ಸಿ.ಎಂ. ತಾಂತ್ರಿಕ ಸಲಹೆಗಾರ

Published:
Updated:

ಬೆಂಗಳೂರು: ರಾಜ್ಯ ಸಚಿವರಿಗೆ ಸಿಗುವ ವೇತನ ಸೇರಿದಂತೆ ಎಲ್ಲ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಮುಖ್ಯಮಂತ್ರಿ ಅವರ ತಾಂತ್ರಿಕ ಸಲಹೆಗಾರ ಎಂ.ಕೆ.ವೆಂಕಟರಾಮು ನಿರಾಕರಿಸಿದ್ದಾರೆ.

ಅವರನ್ನು ತಾಂತ್ರಿಕ ಸಲಹೆಗಾರರನ್ನಾಗಿ ಈ ವರ್ಷದ ಜೂನ್‌ 21ರಂದು ನೇಮಿಸಿ ಆದೇಶ ಹೊರಡಿಸಲಾಗಿದೆ. ತಾಂತ್ರಿಕ ಸಲಹೆಗಾರರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿದೆ. ವೇತನ ಸೇರಿದಂತೆ ಇತರ ಭತ್ಯೆಗಳ ಮೊತ್ತವೇ ತಿಂಗಳಿಗೆ ₹3 ಲಕ್ಷ ದಾಟುತ್ತದೆ. ಅವರು ಈ ಸವಲತ್ತುಗಳನ್ನು ನಿರಾಕರಿಸಿ ₹101 ಮಾತ್ರ ಪಡೆಯಲು ನಿರ್ಧರಿಸಿದ್ದಾರೆ. ಉಳಿದ ಆರ್ಥಿಕ ಸೌಲಭ್ಯಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಆಗಸ್ಟ್‌ 14ರಂದು ಪತ್ರ ಬರೆದಿದ್ದಾರೆ. ಪ್ರವಾಸ ಮಾಡಿದ ಸಂದರ್ಭಗಳಲ್ಲಿ ಮಾತ್ರ ಪ್ರವಾಸಭತ್ಯೆ ಹಾಗೂ ದಿನಭತ್ಯೆ ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !