ಕಳೆದ ವರ್ಷ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಮೆರಿಕದ ವಿಸ್ಕಾನ್ಸಿನ್ ನಿವಾಸಿ 77 ವರ್ಷದ ಜುಡಿತ್ ಮಿಲ್ಲರ್ ಎಂಬುವವರು ತಮ್ಮ ವೈದ್ಯಕೀಯ ವರದಿಗಳನ್ನು ಅರ್ಥಮಾಡಿಕೊಳ್ಳಲು ಕೃತಕ ಬುದ್ದಿಮತ್ತೆಯ(ಎಐ) ಮೊರೆ ಹೋಗುತ್ತಾರೆ.

ಸಿಟಿ ಸ್ಕ್ಯಾನ್, ಎಕ್ಸ್ ರೇ, ಎಂಐಆರ್ ಸೇರಿ ಅನೇಕ ರೀತಿಯ ಪರೀಕ್ಷೆಗೆ ಒಳಗಾಗಿದ್ದ ಅವರು ತಮ್ಮ ವೈದ್ಯರನ್ನು ಭೇಟಿಯಾಗುವುದಕ್ಕೆ ಮೊದಲು ತಮಗಿರುವ ಆರೋಗ್ಯ ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳಲು ಕ್ಲಾಡ್ ಎಐಗೆ ಮೊರೆ ಹೋಗಿದ್ದಾರೆ. ಆನ್ಲೈನ್ನಲ್ಲಿ ಸಿಕ್ಕಿದ ವೈದ್ಯಕೀಯ ವರದಿಗಳನ್ನು ಕ್ಲಾಡ್ಗೆ ನೀಡಿದ ಅವರು, ಅದರಿಂದ ತಮ್ಮ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಮಿಲ್ಲರ್ ಅವರೇ ಹೇಳುವಂತೆ, ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಮುಕ್ತವಾಗಿ ಚರ್ಚಿಸಲು ಎಐ ಸಹಾಯ ಮಾಡಿದೆ. ಎಐನಿಂದ ಸಿಕ್ಕಿದ ಮಾಹಿತಿಗಳಿಂದ ನನ್ನ ಆರೋಗ್ಯ ಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಯಾವ ರೀತಿಯ ಚಿಕಿತ್ಸೆ ಪಡೆದುಕೊಳ್ಳಬೇಕೆಂಬ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿದೆ ಎಂದಿದ್ದಾರೆ.

ಇದೊಂದು ಉದಾಹರಣೆ ಅಷ್ಟೇ, ಇಂದು ಜಗತ್ತಿನ ಹೆಚ್ಚು ಜನರು ಆರೋಗ್ಯ ಸಂಬಂಧಿತ ವಿಷಯಗಳಿಗೆ ಎಐ ಸಹಾಯ ಪಡೆಯುವುದು ಸಾಮಾನ್ಯವಾಗಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಅಮೆರಿಕದ ಮೂರನೇ ಒಂದು ಭಾಗದಷ್ಟು ಜನರು ಆರೋಗ್ಯದ ಮಾಹಿತಿಗಾಗಿ ಎಐ ಮೊರೆ ಹೋಗಿದ್ದಾರೆ. ಲ್ಯಾಬ್ ವರದಿಗಳನ್ನು ಅರ್ಥಮಾಡಿಕೊಳ್ಳಲು, ರೋಗಲಕ್ಷಣಗಳನ್ನು ಪತ್ತೆಹಚ್ಚಲು, ಚಿಕಿತ್ಸೆ ಬಗ್ಗೆ ಮಾಹಿತಿ ಪಡೆಯಲು, ಔಷಧಿಗಳ ಬಗ್ಗೆ ವಿಚಾರಿಸಲು ಇವುಗಳನ್ನು ಬಳಸುತ್ತಿದ್ದಾರೆ.

ಅನೇಕ ಸಂದರ್ಭಗಳಲ್ಲಿ ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಎಐಗೆ ತಿಳಿಸಿ, ತಮಗೆ ಯಾವ ರೋಗವಿದೆ ಎಂದು ಹೇಳುವಂತೆಯೂ ಅದನ್ನು ಕೇಳುತ್ತಿದ್ದಾರೆ ಎಂಬ ಅಂಶವು ಈಗ ಚರ್ಚೆಗೆ ಕಾರಣವಾಗಿದೆ.

ರೋಗ ನಿರ್ಣಯದ ವಿಷಯದಲ್ಲಿ ಎಐ ಬಳಸುವುದು ಕೆಲವೊಮ್ಮೆ ಸಹಕಾರಿಯಾದರೆ, ಕೆಲವೊಮ್ಮೆ ಅಪಾಯಕಾರಿಯೂ ಆಗುವ ಸಾಧ್ಯತೆಯಿದೆ ಎನ್ನುತ್ತಾರೆ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವೈದ್ಯ ರಾಬರ್ಟ್ ವಾಚ್ಟರ್. ಈ ಚಾಟ್ಬಾಟ್ಗಳು ದಾರಿತಪ್ಪಿಸುವ ಅಥವಾ ತಪ್ಪಾದ ಸಲಹೆಗಳನ್ನೂ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ವಾಚ್ಟರ್ ಅವರ ಮಾತನ್ನು ಆಂಥ್ರೊಪಿಕ್ ಸಂಸ್ಥೆಯು ಒಪ್ಪಿಕೊಂಡಿದ್ದು, ‘ಕ್ಲಾಡ್ ಅನ್ನು ರೋಗನಿರ್ಣಯ ಮಾಡಲು ವಿನ್ಯಾಸಗೊಳಿಸಲಾಗಿಲ್ಲ’ ಎಂದು ಅದರ ವಕ್ತಾರರು ಹೇಳಿದ್ದಾರೆ. ‘ಜನರು ತಮ್ಮ ವೈದ್ಯರೊಂದಿಗೆ ಸಂಭಾಷಣೆ ನಡೆಸಲು ಸಿದ್ಧರಾಗಲು ಸಹಾಯ ಮಾಡುವುದೇ ಹೊರತು, ವೈದ್ಯರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ’ ಎಂದಿದ್ದಾರೆ.

ಹಲವಾರು ರೋಗಿಗಳಿಗೆ ಎಐ ವರವಾಗಿ ಪರಿಣಮಿಸಿದೆ ಎನ್ನುತ್ತಾರೆ ಆರೋಗ್ಯ ರಕ್ಷಣಾ ಕಾರ್ಯಕರ್ತ ಡೇವ್ ಡಿಬ್ರಾಂಕಾರ್ಟ್.

‘ಇಂದು ವೈದ್ಯಕೀಯ ಪರೀಕ್ಷೆಗೊಳಗಾದ ಕೆಲವೇ ಗಂಟೆಗಳಲ್ಲಿ ಅದರ ವರದಿ ಆನ್ಲೈನ್ನಲ್ಲಿ ರೋಗಿಯ ಕೈ ಸೇರುತ್ತದೆ. ಇಲ್ಲಿರುವ ಪ್ರಶ್ನೆ ಏನೆಂದರೆ, ಅದನ್ನು ಸಾಮಾನ್ಯ ಜನರು ಅರ್ಥೈಸಿಕೊಳ್ಳಲು ಸಾಧ್ಯವೇ? ಇಲ್ಲ.. ವೈದ್ಯರಿಗೆ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಅದನ್ನು ಸಿದ್ದಪಡಿಸಲಾಗುತ್ತದೆ. ವೈದ್ಯರನ್ನು ಭೇಟಿಯಾಗುವ ಮುನ್ನವೇ ಆ ವರದಿಗಳನ್ನು ನೋಡುವ ರೋಗಿಗೇ ಸಹಜವಾಗಿ ಅದರಲ್ಲಿ ಏನಿದೆಯೋ ಎಂಬ ಆತಂಕವಿರುತ್ತದೆ. ಆದರೆ ಎಐಗಳು ಈ ಸಂಕೀರ್ಣ ಪರಿಭಾಷೆಯನ್ನು ಕೆಲವೇ ಸೆಕೆಂಡುಗಳಲ್ಲಿ ಸರಳ ಭಾಷೆಗೆ ಅನುವಾದಿಸಬಲ್ಲದು. ಆ ಮೂಲಕ ಅನಗತ್ಯ ಭಯವನ್ನು ದೂರವಾಗಿಸುವ ಸಾಮರ್ಥ್ಯ ಹೊಂದಿವೆ ಎಂದು ಡಿಬ್ರಾಂಕಾರ್ಟ್ ವಿವರಿಸಿದ್ದಾರೆ.

ಇನ್ನು, ಎಐ ಅನ್ನು ಈ ರೀತಿಯಲ್ಲಿ ಬಳಸುವುದರಿಂದ ಉಂಟಾಗಬಹುದಾದ ಸಂಭಾವ್ಯ ಅಪಾಯಗಳ ಬಗ್ಗೆ ಅನೇಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಎಐಗಳು ಒದಗಿಸುವ ಮಾಹಿತಿಗಳು ತಪ್ಪಿನಿಂದ ಕೂಡಿರಬಹುದು. ಆದರೆ, ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ನಲ್ಲಿ 75 ವರ್ಷದ ವ್ಯಕ್ತಿಯೊಬ್ಬರು ಗುಣಪಡಿಸಬಹುದಾದ ಕ್ಯಾನ್ಸ್ರ್ನಿಂದ ಸಾವನ್ನಪ್ಪಿದ್ದರು. ತಮ್ಮ ರೋಗದ ಬಗ್ಗೆ ಅವರು ಎಐ ಬಳಿ ಮಾಹಿತಿ ಕೇಳಿದ್ದು, ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಎಐ ಉತ್ತರಿಸಿತ್ತು. ಇದರಿಂದ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು ಎಂದು ವರದಿಯಾಗಿದೆ.

'ನೇಚರ್ ಮೆಡಿಸಿನ್' ನಡೆಸಿದ ಸಂಶೋಧನೆಯಲ್ಲಿಯೂ ರೋಗ ನಿರ್ಣಯಕ್ಕೆ ಎಐ ಬಳಕೆ ಅಷ್ಟು ಸೂಕ್ತವಲ್ಲ ಎಂದು ಕಂಡುಬಂದಿದೆ. ಆ ಸಂಶೋಧನೆಯಲ್ಲಿ ಭಾಗಹಿಸಿದವರು, ವಿವಿಧ ಎಐ ಟೂಲ್ಗಳಿಗೆ ಕಾಯಿಲೆಗಳ ಗುಣಲಕ್ಷಣಗಳನ್ನು ಹೇಳಿ ಪತ್ತೆಹಚ್ಚಲು ಹೇಳಿದ್ದರು. ಆದರೆ ಅದರ ಫಲಿತಾಂಶ ತುಂಬಾ ಆಘಾತಕಾರಿಯಾಗಿದ್ದು, ಮೂರನೇ ಒಂದರಷ್ಟು ಮಾತ್ರ ಸರಿಯಾಗಿತ್ತು.

ಆದಾಗ್ಯೂ, ಎಚ್ಚರಿಕೆಯಿಂದ ಬಳಸಿದರೆ ವೈದ್ಯಕೀಯ ಮಾಹಿತಿ ಬಯಸುವ ಜನರಿಗೆ ಚಾಟ್ಬಾಟ್ಗಳು ಸಹಾಯಕವಾಗಬಹುದು ಎಂಬುದನ್ನು ಬಹುತೇಕ ತಜ್ಞರು ಒಪ್ಪುತ್ತಾರೆ. ‘ಜನರು ಇವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ನಾನು ಭಾವಿಸುವುದಿಲ್ಲ. ಆದರೆ, ಬಳಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು’ ಎಂದು ಓಪನ್ನೋಟ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಕೈಟ್ ಡೆಸ್ರೋಚಸ್.

ಎಐಗಳಿಂದಾಗುವ ಇನ್ನೊಂದು ಆರೋಗ್ಯಕರ ಸಮಸ್ಯೆ ಎಂದರೆ, ರೋಗಿಗಳು ಎಐನಿಂದ ಮಾಹಿತಿ ಪಡೆದುಕೊಂಡು ಅದನ್ನು ವೈದ್ಯರ ಮುಂದೆ ಚರ್ಚಿಸುತ್ತಾರೆ. ಇದು ವೈದ್ಯರ ಸಮಯವನ್ನು ಹಾಳು ಮಾಡುವ ಒಂದು ದಾರಿಯಾಗಿದೆ ಎಂದು ವೈದ್ಯ ರಾಬರ್ಟ್ ವಾಚ್ಟರ್ ಹೇಳಿದ್ದಾರೆ. ಕೆಲವೊಮ್ಮೆ ಇದು ಉತ್ತಮ ಎನಿಸಿದರೂ, ಇನ್ನು ಕೆಲವು ಬಾರಿ ಎಐ ನೀಡಿದ ತಪ್ಪು ಸಲಹೆಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ನಾವು ನಮ್ಮ ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

‘ಒಬ್ಬ ರೋಗಿಯನ್ನು ಪರೀಕ್ಷಿಸಲು 15 ನಿಮಿಷವನ್ನು ಮೀಸಲಿಡಲಾಗುತ್ತದೆ. ಎಐ ಹೇಳುವ ತಪ್ಪು ಮಾಹಿತಿಯಿಂದ ರೋಗಿಯನ್ನು ಹೊರತರಲು ಮೊದಲ 10 ನಿಮಿಷ ಹಿಡಿಯುತ್ತದೆ’ ಎಂದು ವಾಚ್ಚರ್ ಹೇಳಿದ್ದಾರೆ.

ತಮ್ಮ ಆರೋಗ್ಯ ಸ್ಥಿತಿಯನ್ನು ನಿರ್ವಹಿಸಲು ಹೆಚ್ಚಿನ ಜನರು ಚಾಟ್ಬಾಟ್ಗಳನ್ನು ಅವಲಂಬಿಸುತ್ತಿರುವುದು ಅವ್ಯಾಹತವಾಗಿದೆ. ಅದನ್ನು ತಡೆಯುವ ಬದಲು ಅದರ ಬಗ್ಗೆ ಜ್ಞಾನ ನೀಡುವುದು ಇಂದಿನ ಅಗತ್ಯವಾಗಿದೆ. ಅದರೊಂದಿಗೆ ವೈದ್ಯಕೀಯ ಬಳಕೆಗೆ ಅನುಗುಣವಾಗಿ ಎಐಗಳನ್ನು ಸುಧಾರಿಸುವುದು ಈ ಕ್ಷಣದ ತುರ್ತಾಗಿದೆ.

(ಆಧಾರ: ದಿ ನ್ಯೂಯಾರ್ಕ್ ಟೈಮ್ಸ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.