ತನ್ನ ಹೊಸ ಎ.ಐ ಮಾದರಿ ‘ಮಿಥೋಸ್’ ಪತ್ತೆ ಮಾಡಿರುವ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿನ ದೋಷಗಳನ್ನು ಆಂಥ್ರೋಪಿಕ್ ಸಂಸ್ಥೆಯು ಹಣಕಾಸು ಸ್ಥಿರತೆ ಸಂಸ್ಥೆಗೆ (ಎಫ್ಎಸ್ಬಿ) ವರದಿ ನೀಡಲಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಹೇಳಿದೆ.
.ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್ನ ಮಿಥೋಸ್: ಚೀನಾ, ರಷ್ಯಾಗೆ ನಡುಕ.
ಎಫ್ಎಸ್ಬಿ ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಕೇಂದ್ರ ಬ್ಯಾಂಕ್ಗಳ ಜೊತೆಗೆ ಮಿಥೋಸ್ನ ಸಾಮರ್ಥ್ಯಗಳನ್ನು ಮನದಟ್ಟು ಮಾಡಿಕೊಡಲೂ ಆಂಥ್ರೋಪಿಕ್ ಮುಂದಾಗಿದೆ. ಈಗಾಗಲೇ ಬ್ಯಾಂಕ್ ಆಫ್ ಇಂಗ್ಲೆಂಡ್ನ ಗವರ್ನರ್ ಮಿಥೋಸ್ ಒದಗಿಸಬೇಕು ಎಂದು ಆಂಥ್ರೋಪಿಕ್ಗೆ ಕೋರಿಕೆ ಸಲ್ಲಿಸಿದ್ದಾರೆ.

ಜಿ20 ದೇಶಗಳ ಹಣಕಾಸು ನಿಯಮಗಳನ್ನು ಸಂಘಟಿಸುವ ಜವಾಬ್ದಾರಿ ಎಫ್ಎಸ್ಬಿಯದ್ದು. ಬ್ಯಾಂಕ್ ಆಫ್ ಇಂಗ್ಲೆಂಡ್ನ ಗವರ್ನರ್ ಆ್ಯಂಡ್ಯೂ ಬೈಲಿ ಇದರ ಹಾಲಿ ಮುಖ್ಯಸ್ಥರು.

ವೆಬ್ ಬ್ರೌಸರ್ಗಳು, ಮೂಲಸೌಕರ್ಯ ಮತ್ತು ಸಾಫ್ಟ್ವೇರ್ಗಳಲ್ಲಿ ದಶಕಗಳಷ್ಟು ಹಳೆಯದಾದ ದೋಷಗಳನ್ನು ಮಿಥೋಸ್ ಪತ್ತೆ ಮಾಡುತ್ತದೆ ಎಂದು ಆಂಥ್ರೋಪಿಕ್ ಹೇಳಿದೆ. ಆದರೆ ಇದು ಸೈಬರ್ ದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸಬಹುದು ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ. ಹಳೆಯ ತಂತ್ರಜ್ಞಾನ ವ್ಯವಸ್ಥೆಗಳನ್ನು ಅವಲಂಬಿಸಿರುವ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದೂ ಅವರು ಹೇಳಿದ್ದಾರೆ.
.ಆಂಥ್ರೋಪಿಕ್ನಲ್ಲಿ 25 ಶತಕೋಟಿ ಡಾಲರ್ ಹೂಡಿಕೆಗೆ ಅಮೆಜಾನ್ ಸಜ್ಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.