ಬೀಜಿಂಗ್: ಚೀನಾದ ಸ್ಟಾರ್ಟ್ಅಪ್ ಡೀಪ್ಸೀಕ್ ಹೊಸ ಎ.ಐ ಮಾದರಿ ‘ಡೀಪ್ಸೀಕ್ ವಿ–4’ ಶುಕ್ರವಾರ ಬಿಡುಗಡೆ ಮಾಡಿದೆ. ಒಂದು ವರ್ಷಗಳ ಬಳಿಕ ಹೊಸ ಮಾದರಿಯನ್ನು ಡೀಪ್ಸೀಕ್ ಪರಿಚಯಿಸಿದೆ. ಇದು ಅತ್ಯಂತ ಕಡಿಮೆ ವೆಚ್ಚದ ಎ.ಐ ಮಾದರಿ ಎಂದು ಅದು ಹೇಳಿಕೊಂಡಿದೆ.
.ಆಳ–ಅಗಲ | ಡೀಪ್ಸೀಕ್ ಎಐ ಸಂಚಲನ; ದತ್ತಾಂಶ ಎಷ್ಟು ಸುರಕ್ಷಿತ?.
ಕಳೆದ ವರ್ಷ ಅಮೆರಿಕ ಎ.ಐ ಕಂಪನಿಗಳಿಗೆ ಸರಿಸಾಟಿಯಾಗಬಲ್ಲ ಕಡಿಮೆ ವೆಚ್ಚದ ಎ.ಐ ಮಾಡೆಲ್ ಪರಿಚಯಿಸಿ ಡೀಪ್ಸೀಕ್ ಜಗತ್ತನ್ನು ಬೆರಗುಗೊಳಿಸಿತ್ತು.

ಚೀನಾದ ಸಂಸ್ಥೆಗಳು ಎ.ಐ ತಂತ್ರಜ್ಞಾನವನ್ನು ಕದಿಯಲು ದೊಡ್ಡ ಪ್ರಯತ್ನ ನಡೆಸುತ್ತಿದೆ ಎಂದು ಶ್ವೇತಭವನ ಗುರುವಾರವಷ್ಟೇ ಆರೋಪ ಮಾಡಿತ್ತು. ಇದು ಆಧಾರ ರಹಿತ ಎಂದು ಚೀನಾ ಹೇಳಿತ್ತು. ಇದರ ಬೆನ್ನಲ್ಲೇ ಡೀಪ್ಸೀಕ್ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ.
.OpenAI ಖರೀದಿಗೆ ಇಲಾನ್ ಮಸ್ಕ್ ನೇತೃತ್ವದ ಹೂಡಿಕೆದಾರರು ಉತ್ಸುಕತೆ.
ಹಾಂಗ್ಝೌ ಮೂಲದ ಡೀಪ್ಸೀಕ್ ಕಳೆದ ವರ್ಷ ಜನವರಿಯಲ್ಲಿ ಎಐ ಚಾಟ್ಬಾಟ್ ಆಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಎ.ಐ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದ ಅಮೆರಿಕಕ್ಕೆ ಈ ಕಡಿಮೆ ವೆಚ್ಚದ ಎ.ಐ ಸವಾಲೆಸೆದಿತ್ತು.

ವಿ4 ಆವೃತ್ತಿಯು ಗೂಗಲ್ ಜೆಮಿನಿಗೆ ಸಮಯನಾದ ಟೋಕನ್ಗಳನ್ನು ಹೊಂದಿದೆ. ಹೊಸ ವಿ4 ಅನ್ನು 'ಡೀಪ್ಸೀಕ್-ವಿ4-ಪ್ರೊ' ಮತ್ತು 'ಡೀಪ್ಸೀಕ್-ವಿ4-ಫ್ಲ್ಯಾಶ್' ಎಂಬ ಎರಡು ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗಿದೆ.

(ಎಎಫ್ಪಿ ವರದಿ)
.ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್ನ ಮಿಥೋಸ್: ಚೀನಾ, ರಷ್ಯಾಗೆ ನಡುಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.