ಓಕ್ಲೆಂಡ್, ಕ್ಯಾಲಿಫ್: ಒಪನ್ಎಐನ ಹಾಗೂ ಸ್ಯಾಮ್ ಆಲ್ಟ್ಮನ್ ವಿರುದ್ಧ ಶತಕೋಟ್ಯಧಿಪತಿ ಇಲಾನ್ ಮಸ್ಕ್ ದಾಖಲಿಸಿದ್ದ 150 ಬಿಲಿಯನ್ ಡಾಲರ್ ಮೊತ್ತದ ಪರಿಹಾರ ಮೊಕದ್ದಮೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಎ.ಐ ವಲಯದಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗುವ ಅವರ ಬಯಕೆಗೆ ಇದು ಹಿನ್ನಡೆಯಾಗಿದೆ.
.ಎಐ ಬೆನ್ನುಬಿದ್ದ ಮಸ್ಕ್, ಆಲ್ಟ್ಮನ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದೇಕೆ ? .
ಮಸ್ಕ್ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಎರಡು ಗಂಟೆಗೂ ಕಡಿಮೆ ಅವಧಿಗೆ ವಿಚಾರಣೆ ನಡೆಸಿದ ಕ್ಯಾಲಿಫೋರ್ನಿಯಾದ ಓಕ್ಲೆಂಡ್ನಲ್ಲಿರುವ ಜಿಲ್ಲಾ ಕೋರ್ಟ್ನ 9 ಮಂದಿ ನ್ಯಾಯಾಧೀಶರ ಪೀಠ, ಮೊಕದ್ದಮೆಯನ್ನು ನಿಗದಿತ ಕಾಲಮಿತಿಯಲ್ಲಿ ಸಲ್ಲಿಸಿಲ್ಲ ಎಂದು ಹೇಳಿ ತಿರಸ್ಕರಿಸಿತು.

ಜಿಲ್ಯಾ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮಸ್ಕ್ ಅವರ ವಕೀಲರು ತಿಳಿಸಿದ್ದಾರೆ. ಇದೇ ವೇಳೆ ಓಪನ್ಎಐನ ವಕೀಲರು ಕೋರ್ಟ್ ಹಾಲ್ನಲ್ಲಿ ಸಂಭ್ರಮಿಸಿದರು. ತೀರ್ಪು ಪ್ರಕಟಿಸುವ ವೇಳೆ ಮಸ್ಕ್ ಹಾಗೂ ಆಲ್ಟ್ಮನ್ ಇಬ್ಬರೂ ಹಾಜರಿರಲಿಲ್ಲ.

ಆದೇಶ ನೀಡಿದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿರುವ ಮಸ್ಕ್, ‘ಇದು ನಾಚಿಗೇಡಿನ ತೀರ್ಪು’ ಎಂದು ಬರೆದುಕೊಂಡಿದ್ದಾರೆ.
.ಚೀನಾಗೆ ಭೇಟಿ ನೀಡಲಿರುವ ಟ್ರಂಪ್ ಅವರ ಟೆಕ್ ತಂಡದಲ್ಲಿ ಮಸ್ಕ್, ಕುಕ್.
ಈ ಆದೇಶದಿಂದಾಗಿ ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸುವ ಸಿಲಿಕಾನ್ ವ್ಯಾಲಿಯ ಪೈಪೋಟಿಯಲ್ಲಿ ಒಪನ್ಎಐಗೆ ಲಾಭ ಉಂಟು ಮಾಡಿದೆ. 2015 ರಲ್ಲಿ ಸ್ಥಾಪಿಸಲು ತಾವೇ ಸಹಾಯ ಮಾಡಿದ್ದ ಸಂಸ್ಥೆಯನ್ನು ಧ್ವಂಸಗೊಳಿಸಲು ಮಸ್ಕ್ ನಡೆಸಿದ ಪ್ರಯತ್ನಗಳು ವಿಫಲವಾಗಿವೆ.

ಲಾಭರಹಿತ ಸಂಸ್ಥೆಯಾಗಿ ಆರಂಭಗೊಂಡಿದ್ದ ಓಪನ್ಎಐ, ಶತಕೋಟಿ ಡಾಲರ್ ಹೂಡಿಕೆ ಸ್ವೀಕರಿಸುವ ಮೂಲಕ ಮೂಲ ಉದ್ದೇಶದಿಂದ ವಿಮುಖವಾಗಿದೆ. ಒಪನ್ಎಐ ಸಿಇಒ ಆಲ್ಟ್ಮನ್, ಅಧ್ಯಕ್ಷ ಗ್ರೆಗ್ ಬ್ರಾಕ್ಮನ್ ದತ್ತಿ ಸಂಸ್ಥೆಯೊಂದನ್ನು ಕದ್ದಿದ್ದಾರೆ ಎಂದು ಮಸ್ಕ್ ಆರೋಪಿಸಿದ್ದಾರೆ. ಅಲ್ಲದೆ ಲಾಭರಹಿತ ಸಂಸ್ಥೆಯ ಮೂಲಕ ಅವರು ಅನ್ಯಾಯವಾಗಿ ಶ್ರೀಮಂತರಾಗುತ್ತಿದ್ದಾರೆ ಎಂದೂ ದೂರಿದ್ದರು.

ಅಲ್ಲದೆ ಇದಕ್ಕಾಗಿ 150 ಶತಕೋಟಿ ಡಾಲರ್ ನಷ್ಟ ಪರಿಹಾರ ನೀಡಬೇಕು, ಆಲ್ಟ್ಮನ್ ಅವರನ್ನು ಓಪನ್ಎಐನ ನಿರ್ದೇಶಕರ ಮಂಡಳಿಯಿಂದ ಹೊರಹಾಕಬೇಕೆಂದು ಮಸ್ಕ್ ಆಗ್ರಹಿಸಿದ್ದರು. ಒಪನ್ಎಐನಲ್ಲಿ ಹೂಡಿಕೆ ಮಾಡಿದ್ದಕ್ಕೆ ಮೈಕ್ರೋಸಾಫ್ಟ್ ಕಂಪನಿಯನ್ನೂ ಪ್ರತಿವಾದಿಯನ್ನಾಗಿ ಮಾಡಿದ್ದರು.

(ದಿ ನ್ಯೂಯಾರ್ಕ್ ಟೈಮ್ಸ್ ವರದಿ)
.ಒಂದು ಗುರಿ, ಭಿನ್ನ ಮಾರ್ಗ: ಅಮೆರಿಕ, ಚೀನಾದ ಎ.ಐ ಓಟದಲ್ಲಿ ಗೆಲ್ಲುವವರು ಯಾರು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.