ನ್ಯೂಯಾರ್ಕ್: ಸಾಂಸ್ಥಿಕ ಪುನಾರಚನೆಯ ಭಾಗವಾಗಿ 8 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ಮೆಟಾ ಮುಂದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
.ಎಐ ತಂತ್ರಜ್ಞಾನದಲ್ಲಿ ಅಪಾರ ಹೂಡಿಕೆ: 8 ಸಾವಿರ ಸಿಬ್ಬಂದಿ ಕಡಿತಕ್ಕೆ ಮುಂದಾದ ಮೆಟಾ.
ಉದ್ಯೋಗ ಕಡಿತದ ಜೊತೆಗೆ, ಸುಮಾರು 7 ಸಾವಿರ ಉದ್ಯೋಗಿಗಳನ್ನು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಹೊಸದಾಗಿ ರಚಿಸಲಾದ ತಂಡಗಳಿಗೆ ಸ್ಥಳಾಂತರಿಸಲಾಗುತ್ತದೆ

ಮೇ 20 ರಂದು ಉದ್ಯೋಗ ಕಡಿತ ನಡೆಯಲಿದೆ. ಈ ಬಗ್ಗೆ ಉದ್ಯೋಗಿಗಳಿಗೆ ಕಳುಹಿಸಲಾದ ಆಂತರಿಕ ಮೆಮೊದಲ್ಲಿ ಹೇಳಲಾಗಿದೆ.

ವ್ಯವಸ್ಥಾಪಕ ದರ್ಜೆಯ ಹುದ್ದೆಗಳನ್ನು ಕಡಿತಗೊಳಿಸಲಾಗುವುದು ಹಾಗೂ 7 ಸಾವಿರ ಉದ್ಯೋಗಿಗಳನ್ನು ಎ.ಐಗೆ ಸಂಬಂಧಿಸಿದ ಹೊಸ ತಂಡಗಳಿಗೆ ವರ್ಗಾಯಿಸಲಾಗುವುದು ಎಂದು ಮೆಟಾದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜನೆಲ್ಲೆ ಗೇಲ್ ತಿಳಿಸಿದ್ದಾರೆ

ಬದಲಾವಣೆಯ ಭಾಗವಾಗಿ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಣ್ಣ ತಂಡಗಳನ್ನು ರಚಿಸಲಾಗುತ್ತದೆ ಎಂದು ಮೆಮೊದಲ್ಲಿ ತಿಳಿಸಲಾಗಿದೆ.
.ಎಐ ಬೆನ್ನುಬಿದ್ದ ಮಸ್ಕ್, ಆಲ್ಟ್ಮನ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದೇಕೆ ? .
ವಜಾಗೊಳಿಸುವಿಕೆ ಹಾಗೂ ವರ್ಗಾವಣೆ ಕಂಪನಿಯ ಸುಮಾರು ಶೇ 20ರಷ್ಟು ನೌಕರರ ಮೇಲೆ ಪರಿಣಾಮ ಬೀರಲಿದೆ. ಕೆಲವು ವರ್ಗಾವಣೆಗಳು ಈಗಾಗಲೇ ನಡೆದಿವೆ. ಇನ್ನು ಕೆಲವು ಉದ್ಯೋಗಿಗಳಿಗೆ ಬುಧವಾರದಂದು ಮಾಹಿತಿ ನೀಡಲಾಗುವುದು ಎಂದು ಗೇಲ್ ಮೆಮೊದಲ್ಲಿ ತಿಳಿಸಿದ್ದಾರೆ. ಉತ್ತರ ಅಮೆರಿಕಾದಲ್ಲಿರುವ ಉದ್ಯೋಗಿಗಳಿಗೆ ಬುಧವಾರದಂದು ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.

ಎ.ಐ ಏಜೆಂಟ್ಗಳನ್ನು ಕೇಂದ್ರವಾಗಿರಿಸಿ ಮೆಟಾ ಭಾರಿ ಹೂಡಿಕೆ ಮಾಡುತ್ತಿದೆ.

ಭರ್ತಿಯಾಗದೆ ಉಳಿದಿದ್ದ 6,000 ಉದ್ಯೋಗಾವಕಾಶಗಳನ್ನು ಮುಚ್ಚಿದೆ ಎಂದು ಅವರು ಈ ಹಿಂದಿನ ಮೆಮೊದಲ್ಲಿ ಉದ್ಯೋಗಿಗಳಿಗೆ ತಿಳಿಸಿದ್ದರು. ಕಂಪನಿಯ ದಾಖಲೆಗಳ ಪ್ರಕಾರ, ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ಉದ್ಯೋಗಿಗಳ ಸಂಖ್ಯೆ 77,986.

(ರಾಯಿಟರ್ಸ್ ವರದಿ)
.ಒಂದು ಗುರಿ, ಭಿನ್ನ ಮಾರ್ಗ: ಅಮೆರಿಕ, ಚೀನಾದ ಎ.ಐ ಓಟದಲ್ಲಿ ಗೆಲ್ಲುವವರು ಯಾರು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.