ಆ್ಯಪ್‌

ಗುರುವಾರ , ಜೂನ್ 20, 2019
26 °C

ಆ್ಯಪ್‌

Published:
Updated:
Prajavani

ಕಹೂಟ್ಶಿ

ಕ್ಷಕಸ್ನೇಹಿಯಾಗಿರುವ ಈ ಆ್ಯಪ್ ಮೂಲಕ ಶಿಕ್ಷಕರು ಮಕ್ಕಳೊಂದಿಗೆ ಪಾಠದ ಕುರಿತು ಚರ್ಚೆ ಮಾಡಲು ಹಾಗೂ ಮಕ್ಕಳ ಓದಿನ ಬಗ್ಗೆ ಸಮೀಕ್ಷೆ ಮಾಡಲು ಸಹಾಯ ಮಾಡುತ್ತದೆ. ಈ ಆ್ಯಪ್ ಮೂಲಕ ಶಿಕ್ಷಕರು ಮಕ್ಕಳಿಗೆ ಆಟದ ರೂಪದಲ್ಲಿ ಪಠ್ಯವನ್ನು ಭೋಧಿಸಬಹುದು. ಇಡೀ ತರಗತಿಯ ಮಕ್ಕಳು ಇದರಲ್ಲಿ ಪಾಲ್ಗೊಳ್ಳಬಹುದು. ಈ ಆ್ಯಪ್‌ನ ಸಹಾಯದಿಂದ ಮಕ್ಕಳು ಪ್ರೊಜೆಕ್ಟರ್‌ನಲ್ಲಿ ಕಾಣಿಸುವ ಬಹುಆಯ್ಕೆಯ ಪ್ರಶ್ನೆಗಳಿಗೆ ತಮ್ಮಲ್ಲಿರುವ ಟ್ಯಾಬ್ ಅಥವಾ ಕಂಪ್ಯೂಟರ್ ಮೂಲಕ ಕುಳಿತ ಜಾಗದಲ್ಲೇ ಉತ್ತರ ನೀಡಬಹುದು. ಇದರಿಂದ ಮಕ್ಕಳು ತಂತ್ರಜ್ಞಾನದಲ್ಲೂ ಬೆಳೆಯಬಹುದು. 

ಸಾಕ್ರಟಿವ್ ಸ್ಟೂಡೆಂಟ್‌

ಇದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಬ್ಬರಿಗೂ ನೆರವಾಗುವ ಆ್ಯಪ್‌. ಈ ಆ್ಯಪ್‌ನ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಾವು ಕಲಿತದ್ದನ್ನು ವಿನಿಮಯ ಮಾಡಿಕೊಳ್ಳಲು ಒಂದು ಸ್ನೇಹಮಯ ವಾತಾವರಣವನ್ನು ಕಲ್ಪಿಸುತ್ತದೆ. ಈ ಆ್ಯಪ್ ಬಳಸುವುದು ಕೂಡ ತುಂಬಾ ಸುಲಭ. ವಿದ್ಯಾರ್ಥಿಗಳು ಆ್ಯಪ್‌ನ ಮೂಲಕ ಶಿಕ್ಷಕರ ಜೊತೆ ಸಂವಾದವನ್ನು ನಡೆಸಬಹುದು. ಇದರಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಬಹುದು. ಜೊತೆಗೆ ಅವರ ನಡವಳಿಕೆಯ ಮೌಲ್ಯಮಾಪನವನ್ನು ಮಾಡಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ತಿಳಿವಳಿಕೆಯನ್ನು ಹೆಚ್ಚಿಸಿ, ನಡವಳಿಕೆಯನ್ನು ಸುಧಾರಿಸಲು ಈ ಆ್ಯಪ್ ಸಹಾಯ ಮಾಡುತ್ತದೆ. 

ನಿಯರ್‌ಪಾಡ್‌

ಇದು ಶಿಕ್ಷಕರಿಗೆ ನೆರವಾಗುವ ಆ್ಯಪ್. ಇದರ ಮೂಲಕ ಶಿಕ್ಷಕರು ಕೆಲವು ಸುಲಭ ತಂತ್ರಗಳನ್ನು ಯೋಜಿಸುವ ಮೂಲಕ ಪಾಠವನ್ನು ಮಕ್ಕಳಿಗೆ ತಿಳಿಸಬಹುದು. ಪಾಠವನ್ನು ಪ್ರಸ್ತುತಪಡಿಸುವುದು, ಮೌಲ್ಯಮಾಪನ ಹಾಗೂ ಡಿಜಿಟಕ್ ತಂತ್ರಜ್ಞಾನವನ್ನು ವಿವರಿಸಲು ಈ ಆ್ಯಪ್ ಸಹಕಾರಿ. ಡಿಜಿಟಲ್ ತಂತ್ರಜ್ಞಾನದ ಮೂಲಕ ಪಾಠದ ಯೋಜನೆಗಳನ್ನು ರೂಪಿಸಲು ಇದು ಸಹಾಯ ಮಾಡುತ್ತದೆ. ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಬೆಳವಣಿಗೆಯನ್ನು ಇದರಲ್ಲಿ ಗುರುತಿಸಬಹುದು. ಶಿಕ್ಷಕರು ಪಾಠ, ವಿಡಿಯೊ, ಚಿತ್ರಗಳು, ವೆಬ್‌ಸೈಟ್‌ಗಳು, ಪ್ರಶ್ನೆಗಳನ್ನು ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ತರಗತಿಯಲ್ಲೇ ಮಕ್ಕಳಿಗೆ ವಿವರಿಸಿ ಹೇಳಬಹುದು. ಇವುಗಳನ್ನು ಸ್ಲೆಡ್‌ಗಳಲ್ಲಿ ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡಬಹುದು. ಇದನ್ನು ವಿದ್ಯಾರ್ಥಿಗಳು ತಮ್ಮಲ್ಲಿರುವ ತಮ್ಮ ಉಪಕರಣಗಳ ಮೂಲಕ ನೋಡಿಯೂ ಕಲಿಯಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !