ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್ಸ್‌

Last Updated 9 ಜುಲೈ 2019, 19:30 IST
ಅಕ್ಷರ ಗಾತ್ರ

ಕ್ಲಾಸ್ ದೊಜೊ
ಈ ಆ್ಯಪ್‌ ಅನ್ನು ಶಿಕ್ಷಕರ ನೆರವಿಗಾಗಿ ರಚಿಸಲಾಗಿದೆ. ಇದರಲ್ಲಿ ಶಿಕ್ಷಕರು ತರಗತಿಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಸ್ಥಿರವಾಗಿ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳ ನಡತೆಯನ್ನು ಸುಧಾರಿಸುವ ಜೊತೆಗೆ ಪೋಷಕರ ಜೊತೆ ಸಂಪರ್ಕದಲ್ಲಿರಬಹುದು. ಇದನ್ನು ನಮ್ಮ ಸಮಯ, ಉದ್ದೇಶ ಹಾಗೂ ಆಸಕ್ತಿಯ ಆಧಾರ ಮೇಲೆ ಬಳಸಬಹುದು.

ಪಾಪ್ಲೆಟ್‌
ಇದರಲ್ಲಿ ವಿದ್ಯಾರ್ಥಿಗಳು ತಾವು ಕಲಿತ ವಿಷಯಗಳನ್ನು ಆ್ಯಪ್‌ ಸಂಘಟಕರೊಂದಿಗೆ ಹಂಚಿಕೊಳ್ಳಬಹುದು. ಜೊತೆಗೆ ಕಲಿತ ವಿಷಯಗಳನ್ನೆಲ್ಲಾ ಒಂದೆಡೆ ಸಂಗ್ರಹಿಸಲು ನೆರವಾಗುವ ಉತ್ತಮ ಆ್ಯಪ್‌. ಇದರಲ್ಲಿ ಚಿತ್ರ ಹಾಗೂ ಅಕ್ಷರಗಳನ್ನು ಬಳಸಿ ಸುಲಭವಾಗಿ ವಿಷಯಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ವೆಬ್‌ಸೈಟ್ ಮೂಲಕ ಚಿತ್ರಗಳನ್ನು ತೆಗೆದುಕೊಳ್ಳಬಹುದಾಗಿದೆ. ಮಕ್ಕಳು ತಮ್ಮ ಯೋಚನೆಗಳನ್ನು ಅಕ್ಷರ, ಚಿತ್ರ ಬಿಡಿಸುವುದು ಹಾಗೂ ಚಿತ್ರ ಸಂಗ್ರಹದ ಮೂಲಕ ಜೋಡಿಸಲು ನೆರವಾಗುವ ಹೊಸ ಹಾಗೂ ಸುಲಭವಾಗಿ ಬಳಸಬಹುದಾದ ಅವಕಾಶವನ್ನು ಆ್ಯಪ್‌ನಲ್ಲಿ ನೀಡಲಾಗಿದೆ.

ಶೋಭಿ
ಇದರ ಮೂಲಕ ಸುಲಭವಾಗಿ ಹಾಗೂ ಸರಳವಾಗಿ ಅಸೈನ್‌ಮೆಂಟ್, ಕರಪತ್ರ ಹಾಗೂ ಲಿಂಕ್‌ಗಳನ್ನು ಹಂಚಬಹುದು. ವಿದ್ಯಾರ್ಥಿಗಳು ತಾವು ಮಾಡಿದ ಕೆಲಸಗಳನ್ನು ಇದರ ಮೂಲಕ ಶಿಕ್ಷಕರಿಗೆ ನೀಡಬಹುದು. ಇದರ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಾಯ್ಸ್ ನೋಟ್ಸ್‌ ಕಳುಹಿಸಬಹುದು. ಶೋಭಿ ಮೂಲಕ ಇಬ್ಬರು, ಮೂವರು ಶಿಕ್ಷಕರು ಒಟ್ಟಿಗೆ ಕ್ಲಾಸ್ ನಡೆಸಬಹುದು. ಆ ಮೂಲಕ ವಿದ್ಯಾರ್ಥಿಗಳು ತಮ್ಮ ತರಗತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ಆ ತರಗತಿಗೆ ಶಿಕ್ಷಕರು ನೀಡಿದ ಅಸೈನ್‌ಮೆಂಟ್ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇದರಲ್ಲಿ ಶಿಕ್ಷಕರು ಅಸೈನ್‌ಮೆಂಟ್‌ನ ಕೊನೆಯ ದಿನಾಂಕ ಹಾಗೂ ಸಮಯವನ್ನು ಮೊದಲೇ ಗೊತ್ತುಪಡಿಸಬಹುದು. ಆ ಸಮಯ ಮುಗಿದ ಮೇಲೆ ಅದರಲ್ಲಿ ಅಸೈನ್‌ಮೆಂಟ್ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಶಿಕ್ಷಕರು ತಾವು ಯಾವಾಗ ಅಸೈನ್‌ಮೆಂಟ್‌ ನೋಡಬೇಕು ಎಂದು ನಿಗದಿಪಡಿಸಿಕೊಂಡಿದ್ದರೆ ಆ ಸಮಯಕ್ಕೆ ಸರಿಯಾಗಿ ಆ್ಯಪ್‌ನಲ್ಲಿ ಅಸೈನ್‌ಮೆಂಟ್ ನೋಡಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT