ಬ್ರೌಸ್ ಮಾಡುವಾಗ ಇರಲಿ ಎಚ್ಚರ

7

ಬ್ರೌಸ್ ಮಾಡುವಾಗ ಇರಲಿ ಎಚ್ಚರ

Published:
Updated:

ಗೂಗಲ್ ಅಥವಾ ಬಿಂಗ್ ಸರ್ಚ್ ಎಂಜಿನ್‌ಗಳಲ್ಲಿ ಬೇರೆ ಯಾವುದೋ ವಿಷಯ ಅಥವಾ ಚಿತ್ರ ಸರ್ಚ್ ಮಾಡಿರುತ್ತೇವೆ. ಅಷ್ಟೊತ್ತಿಗೆ ಅಚಾನಕ್ ಆಗಿ ಅಶ್ಲೀಲ ವಿಷಯಗಳು ಕಾಣಿಸುತ್ತವೆ. ಹೀಗೆ ಯಾವುದೇ ಅಶ್ಲೀಲ ವಿಷಯಗಳು ಕಾಣಬಾರದು ಎಂದಾದರೆ ಬ್ರೌಸರ್ ಸೆಟ್ಟಿಂಗ್ ಬದಲಿಸಿ

ಗೂಗಲ್‌ನಲ್ಲಿ ಸೇಫ್ ಸರ್ಚ್‌  

ಗೂಗಲ್ ಡಾಟ್ ಕಾಮ್‌ನಲ್ಲಿ ಸರ್ಚ್ ಸೆಟ್ಟಿಂಗ್ಸ್‌ಗೆ ಹೋಗಿ. ಯಾವುದಾದರೊಂದು ಚಿತ್ರ ಹುಡುಕಿದಾಗ ಅಲ್ಲಿಯೇ ಕೆಳಗಡೆ ಸೆಟ್ಟಿಂಗ್ಸ್ ಎಂದು ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ ಸರ್ಚ್ ಸೆಟ್ಟಿಂಗ್ಸ್ ಆಯ್ಕೆ ಮಾಡಿ. ಅಲ್ಲಿ SafeSearch Filters ಎಂದಿರುತ್ತದೆ. ಅದನ್ನು ಆಯ್ಕೆ ಮಾಡಿ ಮಾಡಿ. ಯಾವುದಾದರೂ ಚಿತ್ರಗಳನ್ನು ಹುಡುಕುವಾಗ ಸೆಕ್ಸ್ ಸಂಬಂಧಿತ ಚಿತ್ರಗಳು ಗೋಚರಿಸದಂತೆ ಇದು ತಡೆಯುತ್ತದೆ.

ಲಾಕ್ ಸೇಫ್ ಸರ್ಚ್

ಒಂದು ವೇಳೆ ನೀವು ಬಳಸುವ ಕಂಪ್ಯೂಟರ್‌ ಅನ್ನು  ಮಕ್ಕಳು ಬಳಸುತ್ತಿದ್ದು,  ಅಶ್ಲೀಲ ವಿಷಯಗಳು ಅವರಿಗೆ ಸಿಗದಂತೆ ಮಾಡಲು ಸೇಫ್ ಸರ್ಚ್ ಲಾಕ್ ಮಾಡಿ. ಅದಕ್ಕಾಗಿ ನೀವು ಲಾಗಿನ್ ಆಗಿರಬೇಕು. SafeSearch Filters ಪಕ್ಕದಲ್ಲಿಯೇ Lock Safe search ಎಂಬ ಲಿಂಕ್ ಇದೆ. ಅದು ಕ್ಲಿಕ್ ಮಾಡಿದರೆ ಲಾಕ್ ಸೇಫ್ ಸರ್ಚ್ ಎನೇಬಲ್ ಆಗುತ್ತದೆ.ನೀವು ಸೇಫ್ ಸರ್ಚ್ ಆಫ್ ಮಾಡುವವರೆಗೆ ಅದು ಆಕ್ಟಿವ್ ಆಗಿರುತ್ತದೆ.

ಬಿಂಗ್ ಸೇಫ್ ಸರ್ಚ್ 

https://www.bing.com/ ಓಪನ್ ಮಾಡಿ. ಅಲ್ಲಿ ಎಡಬದಿಯ ಡ್ರಾಪ್ ಡೌನ್ ಮೆನುನಲ್ಲಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಅಲ್ಲಿ More ಎಂದು ಕ್ಲಿಕ್ ಮಾಡಿದ ಕೂಡಲೇ ಸೇಫ್ ಸರ್ಚ್ ಫಿಲ್ಟರ್ ಓಪನ್ ಆಗುತ್ತದೆ. ಅಲ್ಲಿ ಸೇಫ್ ಸರ್ಚ್ Moderate ಎಂದು ಡಿಫಾಲ್ಟ್ ಆಯ್ಕೆಯಾಗಿರುತ್ತದೆ. ಅದನ್ನು Strict Filtering ಎಂದು ಬದಲಿಸಿ. ಈ ರೀತಿ ಫಿಲ್ಟರ್ ಎನೇಬಲ್ ಮಾಡಿದರೆ sex ಎಂಬ ಪದ ಹುಡುಕಿದರೆ ಯಾವುದೇ ವಿಷಯ ಸರ್ಚ್ ಆಗಲ್ಲ. ಬಿಂಗ್ ಸರ್ಚ್ ಇಂಜಿನ್ ಈ ಪದ ಹೊಂದಿರುವ ಯಾವುದೇ ವಿಷಯವನ್ನು ತಡೆಯುತ್ತದೆ. ಗೂಗಲ್‍ನಲ್ಲಿ ಇರುವಂತೆ ಇದರಲ್ಲಿ ಲಾಕ್ ಇರಲ್ಲ.

ನಿಮ್ಮ ಆದ್ಯತೆ ಕ್ಲಿಕ್ ಮಾಡಿ

ನೀವು ಈ ರೀತಿ ಸೆಟ್ಟಿಂಗ್ ಬದಲಿಸಿದ Strict filter ಸೆಟ್ಟಿಂಗ್ ಸೇವ್ ಮಾಡುವುದನ್ನು ಮರೆಯಬೇಡಿ.‌

Tags: 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !