ಬೆಂಗಳೂರು: ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿರಿಯ ವಿಜ್ಞಾನಿ ಎಸ್.ಎಸ್. ಅಯ್ಯಂಗಾರ್ ಅವರು ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಆಧಾರಿತ ಎ.ಐ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.

ಇದು ಎ.ಐ ತಂತ್ರಜ್ಞಾನದ ಮೂಲಕ ಸ್ವಯಂ ಕಲಿಕೆಗೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಎಸ್.ಎಸ್. ಅಯ್ಯಂಗಾರ್ ತಿಳಿಸಿದ್ದಾರೆ.

ಆ್ಯಪ್ ಅನ್ನು ವಾಟ್ಸ್ಆ್ಯಪ್, ಡೆಸ್ಕ್ ಟಾಪ್ಗಳಲ್ಲಿ ಬಳಕೆ ಮಾಡಬಹುದು. 1990ರಲ್ಲಿ ಅಟನಾಮಸ್ ಇಂಟೆಲಿಜೆನ್ಸ್ ರೋಬೊ ತಯಾರಿಸಲಾಯಿತು. ವಿಮಾನಯಾನದಲ್ಲಿ ಎ.ಐ.ತಂತ್ರಜ್ಞಾನ ಬಳಸಲಾಗಿದೆ. ಎ.ಐಗೆ ಲಕ್ಷಾಂತರ ಅಕ್ಷರ ಜೋಡಣೆ ಮಾಡಿ, ರಾಜ್ಯ ಶಿಕ್ಷಣ ಇಲಾಖೆಗೆ ಬಿ.ಎ. ಬಿಕಾಂ, ಬಿಎಸ್ಸಿ, ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳು ಸ್ವಯಂ ಎ.ಐ.ತಂತ್ರಜ್ಞಾನ ಕಲಿಕೆಗೆ ಪ್ರೋತ್ಸಾಹ ದೊರೆಯಲಿದೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವ ಸಮೂಹ ಎ.ಐ.ತಂತ್ರಜ್ಞಾನ ಬಳಕೆ ಮಾಡುವುದರಿಂದ ಅವರಿಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ ಎಂದು ವಿವರಿಸಿದ್ದಾರೆ.

ಎಐ ತಂತ್ರಜ್ಞಾನದ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿ ಯಾಗಲಿದೆ. ವಿದ್ಯಾರ್ಥಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ. ವಿಷಯವನ್ನು ತಂತ್ರಜ್ಞಾನದ ಮೂಲಕ ಪಡೆಯಬಹುದು ಎಂದು ಎಸ್.ಎಸ್.ಐ.ಟಿ ಶಿಕ್ಷಣ ಸಂಸ್ಥೆಯ ಹಿರಿಯ ಸಮಾಲೋಚಕ ಕೈಲಾಶ್ ಶಿವನಗಿ ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-4-1565343737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.