ಬೆಂಗಳೂರು: ಭಾರತದಲ್ಲಿ ಮೊದಲ ಎಐ ಕಾರ್ಖಾನೆಯನ್ನು ನಿರ್ಮಿಸಲು ದಯಾನಂದ ಸಾಗರ್ ವಿಶ್ವವಿದ್ಯಾಲಯವು ಎನ್ವಿಡಿಯಾದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

ಎನ್ವಿಡಿಯಾವು ಮುಂದಿನ ಪೀಳಿಗೆಯ ಎಐ ಸೂಪರ್ ಕಂಪ್ಯೂಟಿಂಗ್ ವೇದಿಕೆಯಾಗಿರುವ ‘ಬ್ಲ್ಯಾಕ್ವೆಲ್’ ಬಳಸಿಕೊಳ್ಳಲಿದೆ. ಕಡಿಮೆ ಸುಸಜ್ಜಿತ ಮೂಲಸೌಕರ್ಯ, ವಿದೇಶಿ ಎಐ ಮಾದರಿಗಳ ಬಳಕೆ, ದೇಶೀಯ ಸೂಪರ್ ಕಂಪ್ಯೂಟಿಂಗ್ ತಂತ್ರಜ್ಞಾನಗಳ ಕೊರತೆ ಮತ್ತು ಶೈಕ್ಷಣಿಕ ತರಬೇತಿ ಮತ್ತು ಉದ್ಯಮ ನಿಯೋಜನೆ ಅಗತ್ಯಗಳ ನಡುವಿನ ನ್ಯೂನತೆಗಳನ್ನು ನಿವಾರಿಸುವ ಉದ್ದೇಶವನ್ನು ಈ ಒಡಂಬಡಿಕೆ ಹೊಂದಿದೆ.

ದಯಾನಂದ ಸಾಗರ್ ವಿಶ್ವವಿದ್ಯಾಲಯವು ₹175 ಕೋಟಿ ಹೂಡಿಕೆ ಮಾಡಲಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಎಐ ಕಂಪ್ಯೂಟಿಂಗ್ ಬಳಕೆಯಾಗಲಿದೆ.

‘ಎನ್ವಿಡಿಯಾ ಜೊತೆಗಿನ ಸಹಯೋಗದಿಂದಾಗಿ ನಮ್ಮ ವಿಶ್ವವಿದ್ಯಾಲಯವು ಎಐ ಕ್ಷೇತ್ರದಲ್ಲಿ ನಾವಿನ್ಯತೆಯನ್ನು ಬಳಸಿಕೊಳ್ಳಲಿದೆ. ಎಐ ಬಳಕೆಯ ವಿಧಾನದಲ್ಲಿ ಬದಲಾವಣೆ ಉಂಟಾಗಲಿದೆ’ ಎಂದು ದಯಾನಂದ ಸಾಗರ್ ವಿಶ್ವವಿದ್ಯಾಲಯದ ಸ್ಥಾಪಕ ಡಿ. ಪ್ರೇಮಚಂದ್ರ ಸಾಗರ್ ತಿಳಿಸಿದರು.

‘ನಮ್ಮ ಕ್ಯಾಂಪಸ್ನಲ್ಲಿ ಎನ್ವಿಡಿಯಾ ಚಾಲಿತ ಎಐ ಕಾರ್ಖಾನೆ ಸ್ಥಾಪಿಸಲಾಗುವುದು. ಆ ಮೂಲಕ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಎಐ ವ್ಯವಸ್ಥೆಗಳಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಲಾಗುವುದು. ಆತ್ಮನಿರ್ಭರ ಭಾರತ, ತಂತ್ರಜ್ಞಾನ ಅಭಿವೃದ್ಧಿ, ಜವಾಬ್ದಾರಿಯುತವಾಗಿ ಎಐ ಬಳಕೆ ಸೇರಿದಂತೆ ದೀರ್ಘಕಾಲೀನ ಗುರಿಗಳನ್ನು ಹೊಂದಿದ್ದೇವೆ’ ಎಂದು ವಿವರಿಸಿದರು.

ದಯಾನಂದ ಸಾಗರ್ ವಿಶ್ವವಿದ್ಯಾಲಯವು ಆರೋಗ್ಯ, ಎಂಜಿನಿಯರಿಂಗ್, ರಕ್ಷಣೆ, ಸೈಬರ್ ಭದ್ರತೆ, ಅರೆವಾಹಕಗಳು, ಸ್ಮಾರ್ಟ್ ಚಲನಶೀಲತೆ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಕೆಪೆಕ್ಸ್ನಲ್ಲಿ ₹50 ಕೋಟಿಗೂ ಅಧಿಕ ವೆಚ್ಚದಲ್ಲಿ ಆರು ಉದ್ಯಮ-ಸಂಯೋಜಿತ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಕೇಂದ್ರಗಳು ವಿಶೇಷ ಎಐ ಸಂಶೋಧನೆ ಮತ್ತು ಅನ್ವಯಿಕಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-4-1487473386

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.