ಬೆಂಗಳೂರು: ನಗರದಲ್ಲಿ ನೀರಿನ ಕಳವು ಮತ್ತು ಸೋರಿಕೆ ತಡೆಗೆ ‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ’ಯು ಕೃತಕ ಬುದ್ಧಿಮತ್ತೆ ಹಾಗೂ ರೋಬೊಟಿಕ್ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ.

‘ಸ್ಮಾರ್ಟ್ ಟೆರ್ರಾ’ ಮತ್ತು ‘ಸೊಲಿನಾಸ್’ ನವೋದ್ಯಮಗಳು ಜಲಮಂಡಳಿಗೆ ಶೂನ್ಯ ವೆಚ್ಚದಲ್ಲಿ ಹೊಸ ತಂತ್ರಜ್ಞಾನ ನೀಡುತ್ತಿದ್ದು, ಅವುಗಳಿಗೆ ಟೈಟಾನ್ ಕಂಪನಿಯು ನೆರವಾಗಿದೆ. ಈ ನವೋದ್ಯಮಗಳು ಜಂಟಿ ಪ್ರಾಯೋಗಿಕ ಪರೀಕ್ಷೆ ಮತ್ತು ಅಧ್ಯಯನಕ್ಕೆ ಮುಂದಾಗಿವೆ. ಅದಕ್ಕೆ ಮುಕ್ತ ಅವಕಾಶವನ್ನು ಮಂಡಳಿ ಕಲ್ಪಿಸಿದೆ.

ನೀರಿನ ಕಳವು, ಲೆಕ್ಕಕ್ಕೆ ಸಿಗದ ನೀರು (ಯುಎಫ್ಡಬ್ಲ್ಯು), ಆದಾಯ ತರದ ನೀರಿನ (ಎನ್ಆರ್ಡಬ್ಲ್ಯು) ಪ್ರಮಾಣ ವನ್ನು ತಗ್ಗಿಸಲು ನವೋದ್ಯಮಗಳು ಜಲಮಂಡಳಿಗೆ ಜೊತೆಯಾಗಿದ್ದು, ಟೈಟಾನ್ ಡಿಸೈನ್ ಇಂಪ್ಯಾಕ್ಟ್ ಅವಾರ್ಡ್ ಯೋಜನೆಯ ಅನುದಾನದಡಿ ಅಧ್ಯಯನ ನಡೆಸಲಿವೆ. ಅಧ್ಯಯನ ನಡೆಯುವ ವರ್ಷದ ಅವಧಿಯಲ್ಲಿ ಯಾವುದೇ ಆರ್ಥಿಕ ವೆಚ್ಚವನ್ನು ಮಂಡಳಿಯು ಭರಿಸ ಬೇಕಿಲ್ಲ. ಪೈಪ್ಗಳ ದುರಸ್ತಿ, ಬದಲಿ ಪೈಪ್ ಅಳವಡಿಕೆ ಸೇರಿದಂತೆ ಸಿವಿಲ್ ಕಾಮಗಾರಿ ಗಳ ವೆಚ್ಚವನ್ನು ಮಾತ್ರ ನೀಡಬೇಕಿದೆ.

ಗಮನಾರ್ಹ ಬದಲಾವಣೆ: ‘ಆವಿಷ್ಕಾರ ಗೊಂಡ ಹೊಸ ತಂತ್ರಜ್ಞಾನಗಳನ್ನು ಅನುಷ್ಠಾನಗೊಳಿಸುವ ಅವಕಾಶವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ನವೋದ್ಯಮಗಳಿಗೆ ನೀಡಲಾಗಿದೆ. ದತ್ತಾಂಶ ಆಧರಿಸಿ ಜಾರಿಗೊಳಿಸುವ ವೈಜ್ಞಾನಿಕ ಕ್ರಮಗಳು ನಗರದ ನೀರು ನಿರ್ವಹಣೆಯಲ್ಲಿ ಗಮನಾರ್ಹ ಬದಲಾವಣೆ ತರಬಲ್ಲವು’ ಎಂದು ಜಲಮಂಡಳಿ ಅಧ್ಯಕ್ಷ ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-663586143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.