ಬಿಡದಿ: ಆಧುನಿಕ ವಾಹನಗಳಲ್ಲಿ ತಂತ್ರಾಂಶ(ಸಾಫ್ಟ್ವೇರ್) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಕಾರುಗಳು ಈಗ ಕೇವಲ ಯಂತ್ರಗಳಾಗಿ ಉಳಿಯದೆ 'ಚಕ್ರಗಳ ಮೇಲಿರುವ ಗಣಕಯಂತ್ರಗಳಾಗಿ' ರೂಪಾಂತರಗೊಂಡಿವೆ ಎಂದು ಟೊಯೋಟಾ ಕಂಪನಿಯ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಗಂಗರಂಗಯ್ಯ ತಿಳಿಸಿದರು.

ಬಿಡದಿ ಅಮೃತ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಸೈನ್ಸ್ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಅಮೃತೋತ್ಸವದಲ್ಲಿ ಮಾತನಾಡಿದರು.

ಪ್ರಸ್ತುತ ವಾಹನೋದ್ಯಮದಲ್ಲಿ ಸಿಎಎಸ್ಸಿ (ಸಂಪರ್ಕ, ಸ್ವಯಂಚಾಲಿತ ವ್ಯವಸ್ಥೆ, ಹಂಚಿಕೆಯ ಮತ್ತು ವಿದ್ಯುತ್ ಚಾಲಿತ) ತತ್ವದಡಿ ಕ್ರಾಂತಿಕಾರಿ ಬದಲಾವಣೆ ಸಂಭವಿಸಲಿವೆ. ವಾಹನೋದ್ಯಮದ ಶೇಕಡಾ 90ರಷ್ಟು ತಂತ್ರಜ್ಞಾನ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಾಂಶದ ಮೇಲೆ ಅವಲಂಬಿತವಾಗಲಿವೆ ಎಂದರು.

ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಪ್ರತಿದಿನ ಬದಲಾಗುತ್ತಿರುವ ತಂತ್ರಜ್ಞಾನ ವಿಸ್ತರಿಸಿಕೊಳ್ಳುವತ್ತ ಗಮನಹರಿಸಿಬೇಕು. ತಾಂತ್ರಿಕ ಜ್ಞಾನವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಿಕೊಳ್ಳಬೇಕು. ನಿರಂತರ ಕಲಿಕೆ ಮತ್ತು ತಂಡದೊಂದಿಗೆ ಕೆಲಸ ಮಾಡುವ ಕೌಶಲ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅತಿ ಅವಶ್ಯಕ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಸಂತೋಷ್ ಎಂ. ಮುರನಾಳ ಮತ್ತು ಶೈಕ್ಷಣಿಕ ಮುಖ್ಯಸ್ಥ ಡಾ.ರಾಜೇಶ್ವರ ಕಾಡದೇವಮಠ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ವೀರೇಶ್ ಪಾಟೀಲ, ಡಾ.ಶ್ರೀಧರ್, ಡಾ. ಬಿ.ಜಿ.ಡಿ. ಕುಮಾರ್, ಡಾ. ಮಂಜುನಾಥ್ ಎಸ್., ಪ್ರೊ.ರುದ್ರಮೂರ್ತಿ, ಪ್ರೊ.ಶ್ರೇಯಸ್ ಎಸ್. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಕುಮಾರ್ ಹೆಗಡೆ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-14-618151230

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.