ರೋಬೋಟ್ಗಳು ಇಂದು ಮನುಷ್ಯ ಮಾಡುವಂತಹ ಹತ್ತಾರು ಕೆಲಸಗಳನ್ನು ಏಕಕಾಲದಲ್ಲಿ ಮತ್ತು ವೇಗವಾಗಿ ಮಾಡಿ ಮುಗಿಸುತ್ತವೆ. ಹಾಗಾಗಿ ಕೈಗಾರಿಕಾ ವಲಯಗಳಿಂದ ಹಿಡಿದು ಮನೆಯ ಕೆಲಸದವರೆಗೆ ಸಾಕಷ್ಟು ರೋಬೋಟ್ಗಳು ಕೆಲಸ ಮಾಡುತ್ತಿವೆ. ಆದರೆ ಇತ್ತೀಚಿಗೆ ಚೀನಾದಲ್ಲಿ ಮೋಯಾ ಎಂಬ ಹೊಸ ರೋಬೋಟ್ ಪರಿಚಯಿಸಲಾಗಿದೆ. ಏನಿದರ ವಿಶೇಷ ಎಂಬುದನ್ನು ನೋಡೋಣ.

ಶಾಂಘೈ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯಾದ ಹುಮನಾಯ್ಡ್ ಈ ವಿಶೇಷ ರೋಬೋಟ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ವಿಶ್ವದ ಮೊದಲ ಸಂಪೂರ್ಣ ಬಯೋಮಿಮೆಟಿಕ್ ಸಾಕಾರಗೊಳಿಸಿದ ಬುದ್ಧಿವಂತ ರೋಬೋಟ್ ಇದಾಗಿದೆ. ಹೈಡ್ರಾಲಿಕ್ ಅಥವಾ ಎಲೆಕ್ಟ್ರಿಕ್ ಸರ್ವೋ ತಂತ್ರಜ್ಞಾನ ಬಳಸಿ ಮೋಯಾ ರೋಬೋಟ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಮೋಯಾ ಇತರೆ ಎಲ್ಲಾ ರೋಬೋಟ್ಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಇದರ ರಚನೆ, ಕಾರ್ಯವೈಖರಿ ಎಲ್ಲವೂ ಹೊಸತು. ಮನುಷ್ಯನಂತೆಯೇ ಕೈ–ಕಾಲುಗಳುಳ್ಳ ಅಸ್ತಿಯ ರಚನೆಯನ್ನು ಹೊಂದಿದೆ. ಮನುಷ್ಯನಂತೆಯೇ ಸಹಜವಾಗಿ ಬಾಗುವುದು, ಓಡಾಡುವುದು, ಕಣ್ಣಿನ ಸಂಪರ್ಕ, ತಲೆ ತಿರುಗಿಸುವುದು, ಅಗತ್ಯಕ್ಕೆ ತಕ್ಕಂತೆ ಚಲನೆ ಮಾಡುತ್ತದೆ.

ಮೋಯಾ ರೋಬೋಟ್ಗೆ ಸ್ವಾಭಾವಿಕ ಚಲನೆ ನೀಡಲು ನ್ಯೂಮ್ಯಾಟಿಕ್ ತಂತ್ರಜ್ಞಾನದ ಮೂಲಕ ಕೃತಕ ಸ್ನಾಯುಗಳನ್ನು ತಯಾರಿಸಲಾಗಿದೆ. ಒತ್ತಡದ ಗಾಳಿಯ ಮೂಲಕ ಇವು ಕೆಲಸ ಮಾಡುತ್ತವೆ. ಮಾನವನ ಮೂಳೆಯ ಮಿತಿಗೆ ಅನುಗುಣವಾಗಿಯೇ ಮೋಯಾಗೆ ಕೃತಕ ಮೂಳೆ ತಯಾರಿಸಲಾಗಿದೆ ಎಂದು ತಂತ್ರಜ್ಞರು ಹೇಳುತ್ತಾರೆ.

ಮೋಯಾ ಎಲ್ಲೆಲ್ಲಿ ಕೆಲಸ ಮಾಡಬಹುದು

ಮಾನವ ಮಾಡುವ ಬಹುತೇಕ ಕೆಲಸಗಳನ್ನು ಮೋಯಾ ಮಾಡುತ್ತದೆ. ಕಾರ್ಖಾನೆಯಲ್ಲಿ ಕೆಲಸ ಮಾಡಬಲ್ಲದು. ಉದಾಹರಣೆಗೆ ಬೋಲ್ಟ್ಗಳನ್ನು ಬಿಗಿಗೊಳಿಸುವುದು, ವೇಲ್ಡಿಂಗ್ನಂತಹ ಕೆಲಸಗಳನ್ನು ಮಾಡುತ್ತದೆ. ಇದರ ಮತ್ತೊಂದು ವಿಶೇಷವೆಂದರೆ, ಯಾವುದೇ ವಸ್ತುಗಳನ್ನು ಬಿಗಿಯಾಗಿ ಹಿಡಿದು ಪುಡಿ ಮಾಡುವುದಿಲ್ಲ. ಇತರೆ ಕೆಲಸಗಳಾದ ವೃದ್ದರ ಆರೋಗ್ಯ ನೋಡಿಕೊಳ್ಳಲು, ಶಿಕ್ಷಣ ಮತ್ತು ವೈಯಕ್ತಿಕ ಸಂವಹನದಲ್ಲಿ ಸಹಕಾರಿಯಾಗಲಿದೆ.

ಮೋಯಾ 1.6 ಮೀ ಎತ್ತರ ಹಾಗೂ 32 ಕೆ.ಜಿ. ತೂಕವಿದೆ. ಮೋಯಾ ಮಧ್ಯಮ ವಯಸ್ಸಿನ ಮನುಷ್ಯನಂತೆ ಕಾಣಿಸುತ್ತದೆ. ಇದರ ದೇಹದ ಉಷ್ಣಾಂಶ ಸರಾಸರಿಯಾಗಿ 36° ಇರಲಿದೆ. ಸಿಲಿಕೋನಿಕ್ನಿಂದ ಇದರ ಚರ್ಮಾವನ್ನು ತಯಾರಿಸಲಾಗಿದೆ. ಬಳಕೆದಾರರ ಆದ್ಯತೆಗಳಿಗೆ ಅನುಗುಣವಾಗಿ ಸಂವಹನ ನಡೆಸುತ್ತದೆ.

ಸದ್ಯ ಈ ರೋಬೋಟ್ನ ಮೊದಲ ಪ್ರಯೋಗ ನಡೆದಿದ್ದು, ಇನ್ನಷ್ಟು ಬದಲಾವಣೆ ಮಾಡಬೇಕು ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.