ಬಹಳ ದಿನಗಳ ತಯಾರಿ, ನಿದ್ದೆಗೆಟ್ಟು ಸಿದ್ಧಪಡಿಸಿದ ಪೋರ್ಟ್ಫೋಲಿಯೋ, ಕಷ್ಟಪಟ್ಟು ಪೂರೈಸಿದ ಅಸೈನ್ಮೆಂಟ್, ಕೊನೆಗೂ ಇಂಟರ್ವ್ಯೂನಲ್ಲಿ ಗೆದ್ದು "ನಿಮಗೆ ಕೆಲಸ ಸಿಕ್ಕಿದೆ" ಎನ್ನುವ ಇಮೇಲ್ ಬಂದಾಗ ಆಗುವ ಖುಷಿಯೇ ಬೇರೆ. ವೃತ್ತಿಜೀವನದಲ್ಲಿ ಒಂದು ಮೆಟ್ಟಿಲು ಏರಿದೆವು ಎಂದು ಬೀಗುವ ಹೊತ್ತಲ್ಲೇ ಅಸಲಿ ಕಥೆ ಶುರುವಾಗುತ್ತದೆ. ಕೆಲಸದ ಜವಾಬ್ದಾರಿಗಳ ಪಟ್ಟಿ ಕೈಗೆ ಬಂದಾಗ ಅಲ್ಲಿ ದೊಡ್ಡದೊಂದು 'ಪ್ಲಾಟ್ ಟ್ವಿಸ್ಟ್' ಕಾದಿರುತ್ತದೆ. "ನೋಡಿ, ನಮಗೆ ಒಬ್ಬ ಗ್ರಾಫಿಕ್ ಡಿಸೈನರ್ ಬೇಕು, ಆದರೆ ಆತ ವಿಡಿಯೋ ಎಡಿಟಿಂಗ್ ಕೂಡ ಮಾಡಬೇಕು, ಜೊತೆಗೆ ನಮ್ಮ ಸೋಶಿಯಲ್ ಮೀಡಿಯಾ ಪೇಜ್ಗಳನ್ನು ಕೂಡ ಹ್ಯಾಂಡಲ್ ಮಾಡಬೇಕು" ಎನ್ನುವ ಅಘೋಷಿತ ನಿಯಮಗಳು ಅಪ್ಪಳಿಸುತ್ತವೆ.
.ಟೆಕ್ ಥೆರಪಿ: ಕ್ಲರಿಕಲ್ ಕೆಲಸಗಳನ್ನು ಎಐಗೆ ಒಪ್ಪಿಸಿ, ನಾವು ಕ್ರಿಯೇಟಿವ್ ಆಗೋಣ!.
ನಾವು ಕುತೂಹಲದಿಂದ ಅಥವಾ ಅಳುಕಿನಿಂದ "ಸರಿ, ಇಷ್ಟೆಲ್ಲಾ ಕೆಲಸಕ್ಕೆ ಸ್ಯಾಲರಿ ಎಷ್ಟು?" ಎಂದು ಕೇಳಿದರೆ, ಅಲ್ಲಿ ಒಂದು ದೊಡ್ಡ ಮೌನ ಆವರಿಸುತ್ತದೆ. ಆಮೇಲೆ ಅವರು ಒಂದು ಅಂಕಿ ಹೇಳುತ್ತಾರಲ್ಲ, ಅದು ಯಾವುದೋ ಟೈಪಿಂಗ್ ಮಿಸ್ಟೇಕ್ ಇರಬಹುದೇನೋ ಅಥವಾ ಇದು ಜೋಕ್ ಇರಬಹುದೇನೋ ಎಂದು ನಮಗೆ ನಾವೇ ಕಿವುಚಿಕೊಳ್ಳುವಂತಿರುತ್ತದೆ. ಒಬ್ಬ ವ್ಯಕ್ತಿ, ಮೂರು ವಿಭಿನ್ನ ಕೆಲಸಗಳು, ಆದರೆ ಸಂಬಳ ಮಾತ್ರ ಅರ್ಧದಷ್ಟು! ಇದು ಇಂದಿನ ಕಾರ್ಪೊರೇಟ್ ಜಗತ್ತಿನ, ವಿಶೇಷವಾಗಿ ಕ್ರಿಯೇಟಿವ್ ಫೀಲ್ಡ್ನ ಅತ್ಯಂತ ಕರಾಳ ಮತ್ತು ಕಹಿ ಸತ್ಯ.

ನಮ್ಮಲ್ಲಿ ಅನೇಕ ಕಂಪನಿಗಳು ಇತ್ತೀಚೆಗೆ ಒಬ್ಬ ವ್ಯಕ್ತಿಯಲ್ಲೇ ಇಡೀ ಮಾರ್ಕೆಟಿಂಗ್ ಟೀಮ್ ಅನ್ನು ಹುಡುಕಲು ಪ್ರಯತ್ನಿಸುತ್ತಿವೆ. ಒಬ್ಬನೇ ವ್ಯಕ್ತಿ ಡಿಸೈನ್ ಮಾಡಬೇಕು, ಅವನೇ ಶೂಟ್ ಮಾಡಿ ಎಡಿಟ್ ಮಾಡಬೇಕು, ಆಮೇಲೆ ಅವನೇ ಅದಕ್ಕೆ ಕ್ಯಾಪ್ಶನ್ ಬರೆದು ಪೋಸ್ಟ್ ಮಾಡಿ ಜನರ ಪ್ರತಿಕ್ರಿಯೆಗೂ ಉತ್ತರಿಸಬೇಕು. ಇದು ಕೇವಲ ಕೆಲಸವಲ್ಲ, ಇದು ಶೋಷಣೆಯ ಹೊಸ ರೂಪ. ಒಬ್ಬ ಗ್ರಾಫಿಕ್ ಡಿಸೈನರ್ ಎಂದರೆ ಆತ ದೃಶ್ಯಗಳನ್ನು ಅಂದವಾಗಿ ಜೋಡಿಸುವ ಕಲಾವಿದ. ವಿಡಿಯೋ ಎಡಿಟರ್ ಎನ್ನುವವನು ಚಲಿಸುವ ಚಿತ್ರಗಳ ಮೂಲಕ ಕಥೆ ಹೇಳುವ ತಂತ್ರಜ್ಞ. ಇನ್ನು ಸೋಶಿಯಲ್ ಮೀಡಿಯಾ ಮ್ಯಾನೇಜರ್ ಎಂದರೆ ಕೇವಲ ಪೋಸ್ಟ್ ಹಾಕುವವನಲ್ಲ, ಆತ ಆಡಿಯನ್ಸ್ ನಾಡಿಮಿಡಿತ ಅರಿತು ಬ್ರಾಂಡ್ ಸ್ಟ್ರಾಟಜಿ ರೂಪಿಸುವ ವ್ಯಕ್ತಿ.

ಇವು ಮೂರು ಬೇರೆ ಬೇರೆ ಕೌಶಲಗಳು, ಒಂದಕ್ಕೊಂದು ಪೂರಕವಾಗಿರಬಹುದೇ ಹೊರತು ಇವು ಒಬ್ಬರಿಗೊಬ್ಬರು "ಬೈ ಒನ್ ಗೆಟ್ ಟು" ಆಫರ್ಗಳಲ್ಲ. ಗ್ರಾಫಿಕ್ ಡಿಸೈನ್ ಬರುತ್ತದೆ ಎಂದಾಕ್ಷಣ ಆತ ವಿಡಿಯೋ ಎಡಿಟಿಂಗ್ ಮಾಡಲೇಬೇಕು ಎಂದು ಒತ್ತಾಯಿಸುವುದು ಒಬ್ಬ ಡಾಕ್ಟರ್ಗೆ "ನೀವು ಸರ್ಜರಿ ಮಾಡುತ್ತೀರಲ್ಲ, ಹಾಗೆಯೇ ಸ್ವಲ್ಪ ಹೊತ್ತು ಮೆಡಿಕಲ್ ಶಾಪ್ನಲ್ಲಿ ಔಷಧಿ ಕೂಡ ಮಾರಿ" ಎಂದು ಹೇಳಿದಷ್ಟೇ ಹಾಸ್ಯಾಸ್ಪದ. ಪ್ರತಿ ಕಲೆಗೂ ತನ್ನದೇ ಆದ ಆಳ ಮತ್ತು ಅಗಲ ಇರುತ್ತದೆ. ಎಲ್ಲವನ್ನೂ ಒಬ್ಬನ ತಲೆಗೆ ಕಟ್ಟುವುದರಿಂದ ಕೊನೆಗೆ ಸಿಗುವ ಫಲಿತಾಂಶ 'ಗುಣಮಟ್ಟ'ದ್ದಾಗಿರುವುದಿಲ್ಲ, ಬದಲಾಗಿ ಅದು ಕೇವಲ 'ಕೆಲಸ ಮುಗಿಸುವ' ಪ್ರವೃತ್ತಿಯಾಗಿ ಉಳಿದುಬಿಡುತ್ತದೆ.
.ಟೆಕ್ ಥೆರಪಿ:AI ಕೊಟ್ಟದ್ದೆಲ್ಲ ಒಪ್ಪಿಕೊಂಡಾಗ ಅದು ನಮ್ಮನ್ನು ರೆಪ್ಲೇಸ್ ಮಾಡಿದಂತೆ!.
ಇತ್ತೀಚಿನ ಎಐ (AI) ಜಮಾನಾದಲ್ಲಿ ಮಾಲೀಕರಲ್ಲಿ ಒಂದು ತಪ್ಪು ಕಲ್ಪನೆ ಮನೆಮಾಡಿದೆ. "ಈಗ ಎಐ ಬಂದಿದೆಯಲ್ಲಪ್ಪ, ಎಲ್ಲವನ್ನೂ ಅದು ಕ್ಷಣಾರ್ಧದಲ್ಲಿ ಮಾಡಿಕೊಡುತ್ತೆ, ನೀನು ಕೇವಲ ಕ್ಲಿಕ್ ಮಾಡಿದರೆ ಸಾಕು" ಎಂಬುದು ಅವರ ವಾದ. ಆದರೆ ಸತ್ಯ ಏನೆಂದರೆ, ಎಐ ಕೇವಲ ಒಂದು ಉಪಕರಣ ಅಷ್ಟೇ. ಅದನ್ನು ಪರಿಣಾಮಕಾರಿಯಾಗಿ ಬಳಸಲು ಕೂಡ ಸೃಜನಶೀಲ ಮೆದುಳು ಮತ್ತು ಸಾಕಷ್ಟು ಸಮಯ ಬೇಕು. ಎಐ ಬಂದಿದೆ ಎಂದಾಕ್ಷಣ ಒಬ್ಬ ಮನುಷ್ಯನ ಸಾಮರ್ಥ್ಯ ರಾತ್ರೋರಾತ್ರಿ ಹತ್ತು ಪಟ್ಟು ಹೆಚ್ಚಾಗುವುದಿಲ್ಲ. ಎಐ ಸಾಧನಗಳನ್ನು ನಿರ್ವಹಿಸುವುದು ಕೂಡ ಒಂದು ಹೊಸ ಸ್ಕಿಲ್ ಆಗಿದೆಯೇ ಹೊರತು, ಅದು ಕೆಲಸದ ಹೊರೆಯನ್ನು ಕಡಿಮೆ ಮಾಡುವ 'ಮ್ಯಾಜಿಕ್ ವಾಂಡ್' ಅಲ್ಲ.

ಒಬ್ಬನೇ ವ್ಯಕ್ತಿ ಎಲ್ಲವನ್ನೂ ಮಾಡಬೇಕು ಎನ್ನುವ ಹಠದಿಂದ ಉದ್ಯೋಗಿಯ ಮಾನಸಿಕ ನೆಮ್ಮದಿ ಹರಾಜಾಗುತ್ತದೆ. ಆತ ನಿರಂತರವಾಗಿ ಡೆಡ್ಲೈನ್ಗಳ ಬೆನ್ನತ್ತಿ ಓಡುತ್ತಾ "ಬರ್ನ್ ಔಟ್" ಆಗುತ್ತಾನೆ. ಕ್ರಿಯೇಟಿವ್ ಕೆಲಸಗಳಿಗೆ ಯೋಚಿಸಲು ಸಮಯ ಬೇಕು, ಪ್ರಯೋಗ ಮಾಡಲು ಅವಕಾಶ ಬೇಕು. ಆದರೆ ಮಲ್ಟಿ-ಟಾಸ್ಕಿಂಗ್ ಹೆಸರಿನಲ್ಲಿ ಒತ್ತಡ ಹೇರಿದಾಗ, ಆತ ಕೇವಲ ಸತ್ತಂತಿರುವ ಕಂಟೆಂಟ್ಗಳನ್ನು ಸೃಷ್ಟಿಸಬಲ್ಲನೇ ಹೊರತು, ಒಂದು ಬ್ರಾಂಡ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಅದ್ಭುತ ಕಲಾಕೃತಿಯನ್ನಲ್ಲ. ಕಂಪನಿಗಳು ಇದು ಒಂದು ರೀತಿಯ 'ಎಫಿಷಿಯನ್ಸಿ' ಎಂದು ಭ್ರಮಿಸಿರಬಹುದು, ಆದರೆ ಇದು ವಾಸ್ತವದಲ್ಲಿ ಪ್ರತಿಭೆಯ ಹನನ.

ಸಂಸ್ಥೆಯನ್ನು ಕಟ್ಟುವ ಮಾಲೀಕರು ಬೇಡದ ವಿಷಯಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆಫೀಸಿನ ಐಷಾರಾಮಿ ಇಂಟೀರಿಯರ್, ಅದ್ದೂರಿ ಪಾರ್ಟಿಗಳು ಅಥವಾ ಬ್ರಾಂಡ್ ಪ್ರಮೋಷನ್ಗಳಿಗೆ ಹಣದ ಹೊಳೆಯನ್ನೇ ಹರಿಸುವ ಮಾಲೀಕರು, ಆ ಬ್ರಾಂಡ್ ಅನ್ನು ನಿಜವಾಗಿ ರೂಪಿಸುವ ಸ್ಕಿಲ್ಡ್ ಕೆಲಸಗಾರರ ಮೇಲೆ ಹೂಡಿಕೆ ಮಾಡಲು ಮಾತ್ರ ಜಿಪುಣತನ ತೋರುತ್ತಾರೆ. ಗೋಡೆಗೆ ಹಚ್ಚುವ ಬಣ್ಣಕ್ಕೆ ಕೊಡುವ ಬೆಲೆಯನ್ನು ಅದನ್ನು ಸೃಷ್ಟಿಸುವ ವ್ಯಕ್ತಿಯ ಕೌಶಲಕ್ಕೆ ಕೊಡುವುದಿಲ್ಲ. ಈ ಮಾನಸಿಕತೆ ಬದಲಾಗಬೇಕು. ಕಟ್ಟಡ ಎಷ್ಟು ಮುಖ್ಯವೋ, ಅದನ್ನು ಬೆಳಗುವ ಕೌಶಲಗಾರ ಕೂಡ ಅಷ್ಟೇ ಮುಖ್ಯ ಎಂಬ ಅರಿವು ಉದ್ಯಮಿಗಳಲ್ಲಿ ಮೂಡಬೇಕು.
.ಟೆಕ್ ಥೆರಪಿ: ಎಐ ಬುದ್ಧಿವಂತಿಕೆಗೆ ಬರವಿಲ್ಲ, ಆದರೆ ಬಿಲ್ ಕಟ್ಟುವವರಾರು?.
ವೃತ್ತಿಪರ ಜಗತ್ತಿನಲ್ಲಿ ಪ್ರತಿಭೆಗಳನ್ನು ಉಳಿಸಿಕೊಳ್ಳದ ಸಂಸ್ಥೆಗಳು ಕೊನೆಗೆ ಕೇವಲ "ಸರಾಸರಿ" ಕೆಲಸಗಳ ಗುಂಪಾಗಿ ಉಳಿದುಬಿಡುತ್ತವೆ. ಒಬ್ಬ ಸ್ಕಿಲ್ಡ್ ಕೆಲಸಗಾರನಿಗೆ ನೀಡುವ ಸಂಭಾವನೆಯು ಆತನ ಬದುಕಿಗೆ ನೀಡುವ ಬೆಲೆಯಷ್ಟೇ ಅಲ್ಲ, ಆತ ಬೆಳೆಸಿಕೊಂಡ ಕಲೆಗೆ ನೀಡುವ ಗೌರವ. ಈ ಮೌನ ಸಮ್ಮತಿ ಅಥವಾ "ಬೇರೆ ದಾರಿಯಿಲ್ಲ" ಎಂಬ ಅಸಹಾಯಕತೆ ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಾಗಿ ಉಳಿಯುವುದಿಲ್ಲ. ಇದು ಇಡೀ ಕ್ರಿಯೇಟಿವ್ ಮಾರುಕಟ್ಟೆಯ ಮೌಲ್ಯವನ್ನು ಕುಸಿಯುವಂತೆ ಮಾಡುತ್ತದೆ. ನಾವು ಯಾವುದೋ ಒಂದು ಹಂತದಲ್ಲಿ ತಲೆಬಾಗಿ ಒಪ್ಪಿಕೊಳ್ಳುವ ಇಂತಹ ಅನ್ಯಾಯದ ಒಪ್ಪಂದಗಳು, ನಮ್ಮ ನಂತರ ಬರುವ ಹೊಸ ಪ್ರತಿಭೆಗಳಿಗೆ ಒಂದು ಕೆಟ್ಟ ಮಾದರಿಯನ್ನು ಸೃಷ್ಟಿಸುತ್ತವೆ.

"ಕಡಿಮೆ ಸಂಬಳಕ್ಕೆ ಒಬ್ಬನೇ ಎಲ್ಲವನ್ನೂ ಮಾಡುತ್ತಾನಲ್ಲ, ಇವನಿಗೇಕೆ ಹೆಚ್ಚು ಕೊಡಬೇಕು?" ಎಂಬ ಧೋರಣೆ ಮಾಲೀಕರಲ್ಲಿ ಗಟ್ಟಿಯಾಗಲು ನಾವೇ ಕಾರಣರಾಗಬಾರದು. ನಾವು ನೀಡುವ ಪ್ರತಿಯೊಂದು 'ಸರಿ' ಎನ್ನುವ ಒಪ್ಪಿಗೆಯ ಹಿಂದೆ ನಮ್ಮ ಕೌಶಲದ ಆತ್ಮಗೌರವ ಅಡಗಿದೆ. ವೃತ್ತಿಪರತೆ ಎಂದರೆ ಕೇವಲ ಕೆಲಸ ಮಾಡುವುದಲ್ಲ, ಆ ಕೆಲಸಕ್ಕೆ ತಕ್ಕ ಮೌಲ್ಯವನ್ನು ವ್ಯವಸ್ಥೆಯಿಂದ ಕೇಳಿ ಪಡೆಯುವುದು ಕೂಡ ಹೌದು. ಗುಣಮಟ್ಟಕ್ಕಿಂತ ಸಂಖ್ಯೆಗೆ ಮನ್ನಣೆ ನೀಡುವ ಸಂಸ್ಥೆಗಳು ದೀರ್ಘಕಾಲದ ಓಟದಲ್ಲಿ ಸೋಲುತ್ತವೆ. ಏಕೆಂದರೆ, ಶ್ರೇಷ್ಠತೆಯು ಯಾವಾಗಲೂ ಏಕಾಗ್ರತೆಯಿಂದ ಬರುತ್ತದೆಯೇ ಹೊರತು ಚದುರಿಹೋದ ಗಮನದಿಂದಲ್ಲ.

ಕ್ರಿಯೇಟಿವ್ ಫೀಲ್ಡ್ನಲ್ಲಿರುವ ಪ್ರತಿಯೊಬ್ಬರಿಗೂ ಒಂದು ಮಾತು, ಇಂತಹ ಪರಿಸ್ಥಿತಿಗಳನ್ನು "ನಾರ್ಮಲೈಸ್" ಮಾಡುವುದನ್ನು ನಿಲ್ಲಿಸಿ. "ಮಾರುಕಟ್ಟೆಯಲ್ಲಿ ಕಾಂಪಿಟೇಶನ್ ಹೆಚ್ಚಿದೆ, ಹಾಗಾಗಿ ಎಲ್ಲವನ್ನೂ ಮಾಡಲೇಬೇಕು" ಎಂಬ ಸುಳ್ಳು ಸಮರ್ಥನೆಯನ್ನು ನಂಬಬೇಡಿ. ನೀವು ಒಬ್ಬ ಗ್ರಾಫಿಕ್ ಡಿಸೈನರ್ ಆಗಿದ್ದರೆ, ನಿಮ್ಮ ಕೆಲಸದಲ್ಲಿ ಪರಿಣತಿ ಸಾಧಿಸಿ. ವಿಡಿಯೋ ಎಡಿಟಿಂಗ್ ಎಂಬುದು ಒಂದು ಪ್ರತ್ಯೇಕ ಕಲೆ, ಅದಕ್ಕೆ ಅದರದ್ದೇ ಆದ ಬೆಲೆ ಇದೆ. ಪ್ರತಿಯೊಂದರಲ್ಲೂ ಕೈಹಾಕಿ ಯಾವುದನ್ನೂ ಸರಿಯಾಗಿ ಮಾಡದ 'ಜಾಕ್ ಆಫ್ ಆಲ್ ಟ್ರೇಡ್ಸ್' ಆಗುವ ಬದಲು, ಒಂದು ವಿಷಯದಲ್ಲಿ ಮಾಸ್ಟರ್ ಆಗಿರುವುದು ಇಂದಿನ ಜಗತ್ತಿನಲ್ಲಿ ಬಹಳ ಮುಖ್ಯ.

ಕಂಪನಿ ಮಾಲೀಕರು ಕೂಡ ಅರಿಯಬೇಕಾದ ಸತ್ಯವೊಂದಿದೆ: ನೀವು ಒಬ್ಬ ನುರಿತ ಕೆಲಸಗಾರನಿಗೆ ಗೌರವಯುತ ಸಂಭಾವನೆ ನೀಡುವುದು ಖರ್ಚಲ್ಲ, ಅದು ನಿಮ್ಮ ಬಿಸಿನೆಸ್ ಮೇಲಿನ ಅತ್ಯುತ್ತಮ ಹೂಡಿಕೆ. ಶೋಷಣೆಯ ಮೇಲೆ ಕಟ್ಟಿದ ಸಾಮ್ರಾಜ್ಯ ಯಾವತ್ತೂ ಸುಸ್ಥಿರವಾಗಿರುವುದಿಲ್ಲ. ಅನಗತ್ಯ ಆಡಂಬರಕ್ಕೆ ವ್ಯಯಿಸುವ ಹಣವನ್ನು ಪ್ರತಿಭಾವಂತ ಕೆಲಸಗಾರರ ಮೇಲೆ ಹೂಡಿ ನೋಡಿ, ಅದರ ಪ್ರತಿಫಲ ಹತ್ತು ಪಟ್ಟು ಹೆಚ್ಚಿರುತ್ತದೆ. ಕೌಶಲವನ್ನು ಗೌರವಿಸುವುದನ್ನು ಕಲಿಯದಿದ್ದರೆ, ಎಷ್ಟೇ ಎಐ ಬಂದರೂ ಅಥವಾ ಎಷ್ಟೇ ತಂತ್ರಜ್ಞಾನ ಮುಂದುವರಿದರೂ ನಿಮ್ಮ ಸಂಸ್ಥೆ ಒಳಗಿನಿಂದ ಬೆಳೆಯಲು ಸಾಧ್ಯವಿಲ್ಲ.
.ಟೆಕ್ ಥೆರಪಿ: ನಮ್ಮನ್ನೇ ‘ಉತ್ಪನ್ನ’ವಾಗಿಸುವ ಟೆಕ್ ದೈತ್ಯರ ಅಸಲಿಯತ್ತು ಗೊತ್ತೇ?.
ಬದಲಾವಣೆ ಎನ್ನುವುದು ಯಾವಾಗಲೂ ಕೆಳಗಿನಿಂದಲೇ ಆರಂಭವಾಗಬೇಕು. ಕೆಲಸದ ಅವಶ್ಯಕತೆ ಎಲ್ಲರಿಗೂ ಇರುತ್ತದೆ ನಿಜ, ಆದರೆ ಆ ಅವಶ್ಯಕತೆಯೇ ಶೋಷಣೆಗೆ ಅಡಿಪಾಯವಾಗಬಾರದು. ನ್ಯಾಯಯುತ ಕೆಲಸ, ನ್ಯಾಯಯುತ ವೇತನ ಮತ್ತು ಕೌಶಲಕ್ಕೆ ತಕ್ಕ ಗೌರವ – ಇವು ಇಂದಿನ ಟೆಕ್ ಲೋಕದ ಅನಿವಾರ್ಯತೆಗಳು. ನಾವು ನಮ್ಮ ಮೌಲ್ಯವನ್ನು ಎತ್ತಿ ಹಿಡಿದಾಗ ಮಾತ್ರ ಸಮಾಜವು ನಮ್ಮ ಕೌಶಲಕ್ಕೆ ತಲೆಬಾಗುತ್ತದೆ. ಮಲ್ಟಿ-ಸ್ಕಿಲ್ಡ್ ಟ್ಯಾಲೆಂಟ್ ಬೇಕು ಎಂದು ಬಯಸುವ ಕಂಪನಿಗಳು, ಮಲ್ಟಿ-ಸ್ಕಿಲ್ಡ್ ಸ್ಯಾಲರಿ ನೀಡುವ ದೊಡ್ಡ ಗುಣವನ್ನೂ ಬೆಳೆಸಿಕೊಳ್ಳಲಿ.

ಸ್ಕಿಲ್ ಎನ್ನುವುದು ಅಕ್ಷಯ ಪಾತ್ರೆಯಲ್ಲ, ಅದೂ ಕೂಡ ದಣಿಯುತ್ತದೆ, ಅದಕ್ಕೂ ವಿಶ್ರಾಂತಿ ಬೇಕು ಮತ್ತು ಅದಕ್ಕೆ ಸರಿಯಾದ ಪೋಷಣೆ (ಸಂಬಳ) ಬೇಕು. ಒಬ್ಬನೇ ಎಲ್ಲವನ್ನೂ ಮಾಡಬೇಕು ಎನ್ನುವ ಹಠ ಬಿಡಿ, ಪ್ರತಿಭೆಗೆ ತಕ್ಕ ಬೆಲೆ ಕೊಡಿ. ಈ ಮಾನಸಿಕತೆ ಮಾಲೀಕರಲ್ಲಿ ಮೂಡುವವರೆಗೂ ಮತ್ತು ಉದ್ಯೋಗಿಗಳು ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವವರೆಗೂ ಈ 'ಮಲ್ಟಿ-ಟಾಸ್ಕಿಂಗ್' ಎಂಬ ದೌರ್ಜನ್ಯ ಮುಂದುವರಿಯುತ್ತಲೇ ಇರುತ್ತದೆ. ಇದನ್ನು ತಡೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಲೇಖನ ಕೇವಲ ಆಕ್ರೋಶವಲ್ಲ, ಇದು ಇಂದಿನ ಪೀಳಿಗೆಯ ಸೃಜನಶೀಲ ಮನಸ್ಸುಗಳ ಆತ್ಮಗೌರವದ ಕರೆಯೂ ಹೌದು.
.ಟೆಕ್ ಥೆರಪಿ: ಎಲ್ಲದಕ್ಕೂ ಎಐ ಬಂದ್ರೆ ನಾವೇನ್ರೀ ಮಾಡೋಣ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.