2006ರಲ್ಲಿ ರಾಷ್ಟ್ರೀಯ ಜಾಹೀರಾತುದಾರರ ಸಂಘಟನೆಯ ಒಂದು ಸಮ್ಮೇಳನ ನ್ಯೂಯಾರ್ಕ್ನ ಗ್ರ್ಯಾಂಡ್ ಹಯಾತ್ ಹೋಟೆಲ್ನಲ್ಲಿ ನಡೆದಾಗ, ಕ್ಲೈವ್ ಹಂಬಿ ಎಂಬ ಬ್ರಿಟಿಷ್ ಗಣಿತಶಾಸ್ತ್ರಜ್ಞ ಹಾಗೂ ಡೇಟಾ ಸೈನ್ಸ್ ಪರಿಣತರದ್ದೊಂದು ಉಪನ್ಯಾಸವಿತ್ತು. ಅಲ್ಲಿ ಅವರು ಜಾಹೀರಾತುದಾರರಿಗೆ ಡೇಟಾ ಅನ್ನೋದು ಎಷ್ಟು ಮುಖ್ಯ ಎಂದು ವಿವರಿಸುತ್ತಾ, ‘Data is the new oil’ಎಂಬ ಪದ ಬಳಸಿದರು.

ಅವತ್ತು ಅವರು ಹೇಳಿದ್ದು ಅಲ್ಲೇ, ಅದೇ, ಸಮ್ಮೇಳನದಲ್ಲೇ ಕುಳಿತ ಜನರ ಈ ಕಿವಿಯಿಂದ ಆ ಕಿವಿಗೆ ಹರಿದು ಹೋಯಿತು. ಆದರೆ, ನಿಧಾನಕ್ಕೆ ಜಾಹೀರಾತುದಾರರಿಗೆ ಈ ಡೇಟಾ ಅನ್ನೋದು ಎಷ್ಟು ಮುಖ್ಯ ಅನ್ನೋದು ಅರಿವಿಗೆ ಬರುತ್ತಾ ಹೋಯಿತು. 2017ರಲ್ಲಿ ದಿ ಎಕಾನಮಿಸ್ಟ್ನಲ್ಲಿ ಈ ಬಗ್ಗೆ ಅಂದರೆ ‘ಡೇಟಾ ಈಸ್ ದಿ ನ್ಯೂ ಆಯಿಲ್’ ಎಂಬ ಬಗ್ಗೆ ಒಂದು ಸುದೀರ್ಘ ಲೇಖನ ಪ್ರಕಟವಾಯಿತು. ಅಷ್ಟು ಹೊತ್ತಿಗೆ ಅಂದರೆ ಈ 11 ವರ್ಷಗಳಲ್ಲಿ ಜಾಹೀರಾತುದಾರರಿಗೆ ಡೇಟಾ ಎಷ್ಟು ಮುಖ್ಯ ಎಂದು ಅರಿವಾಗಿತ್ತು.

ಆದರೆ, ಈಗ ನೋಡಿ... ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ಯಾರೂ ಡೇಟಾವನ್ನೂ ತೈಲವನ್ನೂ ಪರಸ್ಪರ ಇಟ್ಟು ಹೋಲಿಕೆ ಮಾಡುತ್ತಿಲ್ಲ. ಬದಲಿಗೆ, ಡೇಟಾವನ್ನು ಕಚ್ಚಾತೈಲ ಎಂದು ಕರೆಯುತ್ತಿದ್ದಾರೆ!

ಹಾಗಾದರೆ, ಈ ಇಪ್ಪತ್ತು ವರ್ಷದಲ್ಲಿ ಬದಲಾದದ್ದೇನು?

ಇದನ್ನು ನೋಡಬೇಕಾದರೆ ನಾವು ಇದೇ ಡೇಟಾದ ಮೊರೆ ಹೋಗಬೇಕು! 2010ರ ಹೊತ್ತಿಗೆ ಒಂದು ಮಿಲಿಯನ್ ಗ್ರಾಹಕರ ಪ್ರೊಫೈಲ್ ಡೇಟಾ ನಿಮ್ಮ ಬಳಿ ಇತ್ತು ಎಂದಾದರೆ ನೀವು ಇಡೀ ಮಾರ್ಕೆಟ್ ಅನ್ನೇ ಆಳಬಹುದಿತ್ತು! ಇಡೀ ಮಾರುಕಟ್ಟೆಯಲ್ಲಿ ಇದ್ದಿದ್ದೇ 2 ಝೆಟಾಬೈಟ್ಸ್ನಷ್ಟು ಡೇಟಾ... ಅಂದರೆ, ನಮ್ಮ ಕಂಪ್ಯೂಟರ್ಗಳಲ್ಲಿರುವ 1 ಟಿಬಿಗೆ ಹೋಲಿಸಿದರೆ, ಇದು 1 ಬಿಲಿಯನ್ ಟಿಬಿ ಆಗುತ್ತದೆ!

ಆದರೆ, ಈಗ ಅಂದರೆ 2026ರಲ್ಲಿ ಕುಳಿತು ನೋಡಿದರೆ, ನಮ್ಮ ಇಡೀ ಮಾರುಕಟ್ಟೆಯಲ್ಲಿ ಪ್ರತಿ ವರ್ಷಕ್ಕೆ 221 ಝೆಟಾಬೈಟ್ಸ್ ಡೇಟಾ ಸಂಗ್ರಹವಾಗುತ್ತಿದೆ! ಅಂದರೆ, ಈ ಡೇಟಾ ಈಸ್ ಆಯಿಲ್ ಎಂಬ ಪದಗುಚ್ಛ ಕಟ್ಟಿದ ಕಾಲಕ್ಕೆ ಹೋಲಿಸಿದರೆ 110 ಪಟ್ಟು ಡೇಟಾ ನಮ್ಮ ಬಳಿ ಇದೆ!

ಇನ್ನೂ ಆಸಕ್ತಿಕರ ಸಂಗತಿಯೆಂದರೆ, ಈ ಪೈಕಿ ಶೇ 70ರಷ್ಟು ಭಾಗ ಡೇಟಾ ಇನ್ನೂ ಬಳಕೆಯೇ ಆಗಿಲ್ಲ! ಅಂದರೆ, ಮಾಹಿತಿಯನ್ನ ಸಂಗ್ರಹಿಸಿ, ಸಂಸ್ಕರಿಸಿ, ಶೇಖರಿಸಿಟ್ಟುಕೊಂಡಿದ್ದಾರೆ. ಆದರೆ, ಅದನ್ನು ಬಳಸಿಕೊಂಡು ಕಂಪನಿಗಳು ಒಂದು ರೂಪಾಯಿ ದುಡ್ಡನ್ನೂ ಮಾಡಿಲ್ಲ! ಅದೊಂದು ರೀತಿ ಖಾಲಿ ಬಿದ್ದಿರುವ ಹಾರ್ಡ್ ಡ್ರೈವ್ ಇದ್ದ ಹಾಗೆ! ಕೆಲವೇ ವರ್ಷಗಳ ಹಿಂದೆ ಕಂಪನಿಗಳು ಡೇಟಾ ಸಂಗ್ರಹಿಸುವುದೇ ನಮ್ಮ ಬ್ಯುಸಿನೆಸ್ನ ಒಂದು ಮಹತ್ವದ ಭಾಗ ಎಂದು ಅಂದುಕೊಳ್ಳುತ್ತಿದ್ದವು. ಆದರೆ, ಈಗ ಡೇಟಾ ಸಂಗ್ರಹ ಮಾಡುವುದರಿಂದ ನಾವು ಸುಮ್ಮನೆ ಜಂಕ್ ಡೇಟಾವನ್ನು ಸಂಗ್ರಹಿಸಿಟ್ಟುಕೊಂಡು, ಅದಕ್ಕೆ ಬೇಕಾದ ಹಾರ್ಡ್ವೇರ್ಗೆ ಸುಮ್ಮನೆ ದುಡ್ಡು ದಂಡ ಮಾಡುತ್ತಿದ್ದೇವೆ ಅನಿಸುತ್ತಿದೆ. ಇದೇ ಕಾರಣಕ್ಕೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಹೆಚ್ಚು ಚಾಲ್ತಿಗೆ ಬಂದಿದೆ. ಈ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಹೇಗೆಂದರೆ, ನಾವು ಕಳುಹಿಸಿದ ಪ್ರತಿ ಡೇಟಾವೂ ನಮ್ಮದೇ ಸಾಧನದಲ್ಲಿ ಸಂಗ್ರಹವಾಗುತ್ತದೆ. ಅದು

ಮತ್ತು... ಇದೆಲ್ಲ ಡೇಟಾ ಸಂಗ್ರಹವಾಗಿದ್ದು ಕೂಡಾ ಗೌಪ್ಯತೆ ಬಗ್ಗೆ ಕಟ್ಟುನಿಟ್ಟಾದ ನಿಯಮಗಳು ಜಾರಿ ಬಂದ ನಂತರವೇ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ. ಈ ತತ್ವ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಂತೆಯೇ ಯುರೋಪ್ ರಾಷ್ಟ್ರಗಳು ಡೇಟಾ ನಿರ್ವಹಣೆಗೆ ಎಂದು GDPR ನಿಯಮಗಳನ್ನು ಜಾರಿಗೆ ತಂದರು. ಇದರಿಂದ ಡೇಟಾ ಸಂಗ್ರಹದ ಮೇಲೆ ಒಂದು ಕಟ್ಟುನಿಟ್ಟಿನ ನಿಗಾ ಉಳಿಯಿತು.

ಈ ಡೇಟಾ ನೋಡಿದರೆ, ನಾವು ಗೌಪ್ಯತೆಯ ಬಗ್ಗೆ ಮಾಡುವ ಮಡಿವಂತಿಕೆಯೇ ತೀರಾ ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಅನ್ನಿಸುತ್ತದೆಯಲ್ಲವೇ?! ಅಷ್ಟೇ ಅಲ್ಲ, ಈಗ ಕಂಪನಿಗಳಿಗೆ ಝೆಟಾಬೈಟ್ಗಳಲ್ಲಿ ಮಾಹಿತಿ ಇಟ್ಟುಕೊಂಡು ಕುಳಿತುಕೊಳ್ಳಲೂ ಹೆದರಿಕೆಯಾಗುತ್ತಿದೆ. ಎಲ್ಲಾದರೂ, ಯಾರೋ ಒಬ್ಬ ಹ್ಯಾಕರ್ ಎಂದು ಸಣ್ಣ ತುಂಡು ಮಾಹಿತಿಯನ್ನು ಕದ್ದು ಡಾರ್ಕ್ವೆಬ್ನಲ್ಲಿ ಹಂಚಿಕೊಂಡರೆ ಈಗಿನ ಕಾನೂನುಗಳ ಪ್ರಕಾರ ಮಿಲಿಯನ್ಗಟ್ಟಲೆ ದಂಡ ತೆರಬೇಕಾಗುತ್ತದೆ. ಅದು ಈ ಡೇಟಾ ಸಂಗ್ರಹ ಮಾಡಿ, ಶೇಖರಿಸಿಟ್ಟುಕೊಂಡಿರುವ ವೆಚ್ಚಕ್ಕೂ ಹೆಚ್ಚಾಗಿಬಿಡುತ್ತದೆ! ಇದೇ ಕಾರಣಕ್ಕೆ ಕಂಪನಿಗಳು ಈ ಯಾವ ರಿಸ್ಕ್ ಇಲ್ಲದ ಸಿಂಥೆಟಿಕ್ ಡೇಟಾ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಅಂದರೆ, ಅಸಲಿ ಮಾಹಿತಿಯಂತೆಯೇ ಕಾಣುವ ಹಾಗೂ ಅದನ್ನೇ ಹೋಲುವ ನಕಲಿ ಡೇಟಾ. ಈ ಡೇಟಾ ಬಳಸುವುದರ ಅನುಕೂಲವೇನೆಂದರೆ, ಇದನ್ನು ಶುಚಿಗೊಳಿಸುವುದಕ್ಕೆ ಅಂದರೆ ವೈಯಕ್ತಿಕ ಮಾಹಿತಿಯನ್ನೆಲ್ಲ ತೆಗೆದು ಬಳಕೆಗೆ ಸೂಕ್ತ ಮಾಹಿತಿಯನ್ನಾಗಿಸಲು ಅಗತ್ಯವಿರುವ ಶ್ರಮ ಇದಕ್ಕೆ ಹಾಕಬೇಕಿಲ್ಲ. ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ಈ ಸಿಂಥೆಟಿಕ್ ಡೇಟಾವನ್ನು ಉತ್ಪಾದನೆ ಮಾಡಬಹುದು!

ಹಾಗಾದರೆ, ಈಗ ಯಾವುದು ಮುಖ್ಯ?

ಈಗ ಮುಖ್ಯವಾಗಿರುವುದು ಡೇಟಾ ಸಂಗ್ರಹದ ನಂತರದ ಹಂತ. ಅಂದರೆ, ಡೇಟಾವನ್ನು ಹೇಗೆ ಸಂಸ್ಕರಿಸುವುದು ಎಂಬುದು. ಈಗ ಡೇಟಾವನ್ನು ಪ್ರೋಸೆಸ್ ಮಾಡುವ ಸಾಮರ್ಥ್ಯ ಇದ್ದವನೇ ನಿಜವಾದ ರಾಜ!

2010 ರ ಸಮಯದಲ್ಲಿ ಒಬ್ಬ ವ್ಯಕ್ತಿಯ ಸಂಪೂರ್ಣ ಪ್ರೊಫೈಲ್ ಸಂಗ್ರಹ ಮಾಡುವುದಕ್ಕೆ 5-10 ರೂ. ತಗಲುತ್ತಿತ್ತು. ಆದರೆ, ಈಗ ಪ್ರೊಫೈಲ್ ಮಾಹಿತಿ ಬಹುತೇಕ ಉಚಿತವಾಗಿ ಅಥವಾ ತೀರಾ ಕೆಲವೇ ಪೈಸೆಗಳಲ್ಲಿ ಸಿಗುತ್ತದೆ. ಆದರೆ, ಅದನ್ನು ಪ್ರೋಸೆಸ್ ಮಾಡುವುದಕ್ಕೆ ಈಗ ಅಪಾರ ಹಣ ಬೇಕಾಗುತ್ತಿದೆ.

ಅಂದರೆ, ನಮ್ಮ ಬಳಿ ಈಗ ಬೇಕಾದಷ್ಟು ತೈಲ ಇದೆ. ಆದರೆ, ಅದನ್ನು ಬಳಸುವುದಕ್ಕೆ ಬೇಕಾದ ಇಂಜಿನ್ಗಳ ಸಂಖ್ಯೆ ಸಾಕಷ್ಟಿಲ್ಲ! ಅಥವಾ ಇದನ್ನು ಹೀಗೂ ಹೇಳಬಹುದು. ನಮ್ಮ ಬಳಿ ಕಚ್ಚಾತೈಲ ಬೇಕಾದಷ್ಟಿದೆ. ಆದರೆ, ಅದನ್ನು ಬಳಕೆಗೆ ಬೇಕಿರುವ ಪೆಟ್ರೋಲ್ ಅಥವಾ ಡೀಸೆಲ್ ಅನ್ನಾಗಿ ಪರಿವರ್ತಿಸುವುದಕ್ಕೆ ನಮ್ಮ ಬಳಿ ಸಾಕಷ್ಟು ಸಂಪನ್ಮೂಲವಿಲ್ಲ. ಇದೊಂದು ರೀತಿ ವೆನೆಜುವೆಲಾದ ಕಥೆ!

ನಾವು ಒಂದು ಬಾರಿ ಗೂಗಲ್ ಸರ್ಚ್ನಲ್ಲಿ ಒಂದು ಪ್ರಶ್ನೆ ಕೇಳಿ ಅದು ಉತ್ತರ ಹೇಳುವುದಕ್ಕೆ ತೆಗೆದುಕೊಳ್ಳುತ್ತಿದ್ದ ಕಂಪ್ಯೂಟಿಂಗ್ ಪವರ್ಗೆ ಹೋಲಿಸಿದರೆ 10 ಪಟ್ಟು ಹೆಚ್ಚು ಎನರ್ಜಿ ಈ ಎಐಯಲ್ಲಿ ಒಂದು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸಲು ಬೇಕಾಗುತ್ತದೆ! ಇಡೀ ಜಗತ್ತಿನ ಡೇಟಾ ಸೆಂಟರ್ಗಳೆಲ್ಲ ಸೇರಿ ಖರ್ಚು ಮಾಡುವ ವಿದ್ಯುತ್ಗೆ ಹೋಲಿಸಿದರೆ ಇಡೀ ಜರ್ಮನಿ ದೇಶ ರನ್ ಆಗುವುದಕ್ಕೆ ಬಳಸುವ ವಿದ್ಯುತ್ಗೆ ಸಮ! ಸುಮಾರು 500 ಟೆರಾವ್ಯಾಟ್ ಗಂಟೆಗಳಷ್ಟು ವಿದ್ಯುತ್ತನ್ನು ಈ ಡೇಟಾ ಸೆಂಟರ್ಗಳೇ ಬಳಕೆ ಮಾಡುತ್ತಿವೆ. ಇನ್ನು 4 ವರ್ಷದಲ್ಲಿ, ಅಂದರೆ 2030 ರ ಹೊತ್ತಿಗೆ ಈ ಡೇಟಾ ಬಳಕೆ ದುಪ್ಪಟ್ಟಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ನೋಡಿದರೆ, ಈಗ ಡೇಟಾ ಇಟ್ಟುಕೊಂಡವ ನಿಷ್ಪ್ರಯೋಜಕ! ಬದಲಿಗೆ, ಆ ಡೇಟಾವನ್ನು ಬಳಸಿಕೊಳ್ಳುವ ಶಕ್ತಿ ಇರುವವನೇ ನಿಜವಾದ ಜಾಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.