ಧಾರವಾಡ: ‘ಮನುಷ್ಯನ ಬುದ್ಧಿಶಕ್ತಿ, ಮೌಲ್ಯಪ್ರಜ್ಞೆ ಮತ್ತು ವಿವೇಚನಾಯುಕ್ತ ನಿರ್ಣಯಗಳು ಕೃತಕ ಬುದ್ಧಿಮತ್ತೆಯ (ಎಐ) ಬಳಕೆಯನ್ನು ನಿರ್ದೇಶಿಸಿ ಮುನ್ನಡೆಸಬೇಕು. ಬದುಕಿನ ಮೇಲೆ ಪರಿಣಾಮ ಬೀರುವಂತಹ ಸಮಸ್ಯೆಗಳಿಗೆ ಎಐ ನೆರವಿನಿಂದ ಪರಿಹಾರ ಲಭ್ಯವಾಗಿಸುವಲ್ಲಿ ಪಾರದರ್ಶಕತೆ ಮುಖ್ಯವಾಗುತ್ತದೆ’ ಎಂದು ನವದೆಹಲಿಯ ಐಐಟಿ ನಿರ್ದೇಶಕ ಪ್ರೊ.ರಂಗನ್ ಬ್ಯಾನರ್ಜಿ ಹೇಳಿದರು.

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಐಟಿ) ಶನಿವಾರ ನಡೆದ ಎಂಟನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಮಾಹಿತಿ ತಂತ್ರಜ್ಞಾನ, ಗಣಕ ವಿಜ್ಞಾನ ಕ್ಷೇತ್ರ ಅಗಾಧವಾಗಿ ಬೆಳೆದಿದೆ. ಎಐ, ಕ್ವಾಂಟಮ್, ರೊಬೊಟಿಕ್ಸ್, ನ್ಯಾನೊಟೆಕ್ನಾಲಜಿ, ತಳಿವಿಜ್ಞಾನ ಮೊದಲಾದವು ಭವಿಷ್ಯದ ದೈನಂದಿನ ಬದುಕಿನಲ್ಲಿ ಬಹಳಷ್ಟು ಪರಿವರ್ತನೆ ತರಲಿವೆ’ ಎಂದರು.

‘ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳು, ಕ್ಷಿಪ್ರ ಬೆಳವಣಿಗೆ ಪೂರಕವಾಗಿದೆಯೇ ಎಂದು ಅವಲೋಕಿಸಬೇಕು. ಹಸಿವು, ಬಡತನ, ಶುದ್ಧ ಇಂಧನ, ಆರೋಗ್ಯ ರಕ್ಷಣೆ, ಸುರಕ್ಷತೆ ಸಮಸ್ಯೆಗಳು ಪರಿಹಾರವಾಗಿಲ್ಲ. ಹಸಿರು ಮನೆ ಅನಿಲಗಳು ಭೂಮಿ ಉಷ್ಣತೆಯ ವ್ಯತ್ಯಯಕ್ಕೆ ಕಾರಣವಾಗಿವೆ’ ಎಂದು ಅವರು ಹೇಳಿದರು.

‘ಇಂಗಾಲದ ಪ್ರಮಾಣ ಹೆಚ್ಚಳವಾಗಿದೆ. ಬಿಸಿ ಗಾಳಿ, ಸಮುದ್ರಮಟ್ಟ ಏರಿಕೆ, ಹವಾಮಾನ ವೈಪರೀತ್ಯ, ಪ್ರವಾಹ ಉಂಟಾಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುಸ್ಥಿರ ಶಕ್ತಿ ಸಂಪನ್ಮೂಲ ಬಳಕೆಗೆ ಒತ್ತು ನೀಡಬೇಕು. ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು, ಜಾಗರೂಕರಾಗಿರಬೇಕು’ ಎಂದರು.

‘ಶೈಕ್ಷಣಿಕ ಪದವಿ ಪಡೆದ ಬಳಿಕ ಕಲಿಕೆ ಅಂತ್ಯ ಆಗುವುದಿಲ್ಲ. ಜೀವನದಲ್ಲಿ ಕಲಿಕೆ ನಿರಂತರವಾಗಿರಬೇಕು. ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕು. ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಗುರಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಐಐಐಟಿ ನಿರ್ದೇಶಕ ಪ್ರೊ.ಮಹದೇವ ಪ್ರಸನ್ನ, ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ,ಧಾರವಾಡ ಐಐಟಿ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ, ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-24-1943241717

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.