ಸೆಲ್ಫಿ ಕ್ಲಿಕ್ಕಿಸಿ ಇಮೋಜಿ ಮಾಡಿ

7

ಸೆಲ್ಫಿ ಕ್ಲಿಕ್ಕಿಸಿ ಇಮೋಜಿ ಮಾಡಿ

Published:
Updated:

ನಿಮ್ಮ ಸೆಲ್ಫಿ ಕ್ಲಿಕ್ಕಿಸಿ ಅದನ್ನೇ ಇಮೋಜಿ ಮಾಡುವ ಹೊಸ ಫೀಚರ್ ಅನ್ನು ಜಿ ಬೋರ್ಡ್ ಪರಿಚಯಿಸಿದೆ. ನಿಮ್ಮ ಮುಖದ ಹಾವ ಭಾವಗಳಿಗೆ ತಕ್ಕಂತೆ ಈ ಇಮೋಜಿಗೆ ನೀವೇ ರೂಪ ಕೊಡಬಹುದು. ಆಂಡ್ರಾಯ್ಡ್ ಮತ್ತು iOS ನಲ್ಲಿ ಈ ಫೀಚರ್ ಗಳು ಲಭ್ಯ. ಪರಿಷ್ಕೃತ ಜಿಬೋರ್ಡ್ ಕೀಬೋರ್ಡ್ ನಲ್ಲಿ ಮಾತ್ರ ಇಮೋಜಿ ಮಿನಿ ಸ್ಟಿಕ್ಕರ್ ಪ್ಯಾಕ್ ಲಭ್ಯವಿದ್ದು, ಎರಡು ರೀತಿಯ ಇಮೋಜಿಗಳಿವೆ.

ಇಮೋಜಿ ಮಾಡುವುದು ಹೇಗೆ?

*ಗೂಗಲ್ ಪ್ಲೇ ಸ್ಟೋರ್ ನಿಂದ ಗೂಗಲ್ ಜಿ ಬೋರ್ಡ್ ಆ್ಯಪ್ ಡೌನ್ ಲೋಡ್ ಮಾಡಿ. ಈಗಾಗಲೇ ಜಿ ಬೋರ್ಡ್ ಬಳಕೆದಾರರಾಗಿದ್ದರೆ ಜಿ ಬೋರ್ಡ್ ಅಪ್ಲಿಕೇಷನ್ ಅಪ್ ಡೇಟ್ ಮಾಡಿ. ಜಿಬೋರ್ಡ್ ಕೀಬೋರ್ಡ್ ಎನೇಬಲ್ ಮಾಡಿಕೊಳ್ಳಿ. ನಿಮ್ಮ ಇಮೇಲ್ ಅಥವಾ ವಾಟ್ಸ್ ಅಪ್ ಚಾಟ್ ಓಪನ್ ಮಾಡಿ. ಜಿಬೋರ್ಡ್ ಕೀಬೋರ್ಡ್ ಬಳಸುವಾಗ ಕೆಳಗೆ ಸ್ಟಿಕ್ಕರ್‌ಗಳು ಕಾಣುತ್ತವೆ. ಅದರ ಪಕ್ಕವೇ ಇಮೋಜಿ ಮಿನಿ ಐಕಾನ್ ಇದೆ. ಅದನ್ನು ಕ್ಲಿಕ್ ಮಾಡಿ.

ಕ್ರಿಯೇಟ್ ಆಪ್ಶನ್ ಕ್ಲಿಕ್ ಮಾಡಿದ ಕೂಡಲೇ ಫ್ರಂಟ್ ಕ್ಯಾಮೆರಾ ಓಪನ್ ಆಗುತ್ತದೆ. ಈಗ ಸೆಲ್ಫಿ ಕ್ಲಿಕ್ಕಿಸಿ. ಯಾವ ರೀತಿಯ ಇಮೋಜಿ ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು.ಆ ಇಮೋಜಿಗಳು ನಿಮ್ಮ ಮುಖದ ಭಾವಗಳನ್ನು ಹೋಲುತ್ತಿರುತ್ತವೆ. ತ್ವಚೆಯ ಬಣ್ಣ, ಹುಬ್ಬುಗಳನ್ನು, ಕೂದಲಿನ ಬಣ್ಣವನ್ನು ನಿಮಗೆ ಬೇಕಾದಂತೆ ಬದಲಿಸಲೂ ಇಲ್ಲಿ ಆಯ್ಕೆಗಳಿವೆ. ನಿಮಗೆ ಬೇಕಾದಂತೆ ಇಮೋಜಿಗಳಿಗೆ ರೂಪ ನೀಡಿದ ಮೇಲೆ ಸೇವ್ ಮಾಡಿ. ಒಂದು ಬಾರಿ ಇಮೋಜಿ ಕ್ರಿಯೇಟ್ ಮಾಡಿದ್ದರೆ, ಮುಂದಿನ ಬಾರಿ ಕ್ರಿಯೇಟ್ ಮಾಡುವಾಗ ನಿಮ್ಮ ಮುಖದ ಭಾವಗಳು ಅಲ್ಲಿ ಸೇವ್ ಆಗಿರುವ ಕಾರಣ , ಇಮೋಜಿ ಕ್ರಿಯೇಟ್ ಮಾಡುವುದು ಮತ್ತಷ್ಟು ಸುಲಭ ಆಗಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !