ಜಗತ್ತು ಕೃತಕ ಬುದ್ಧಿಮತ್ತೆಯತ್ತ ಹೊರಳಿದೆ. ಸಾಮಾನ್ಯ ಮಾಹಿತಿ ತಂತ್ರಜ್ಞಾನದಿಂದ ಹಿಡಿದು, ಬಾಹ್ಯಾಕಾಶ ವಿಜ್ಞಾನದವರೆಗೆ ಎಲ್ಲವೂ ನಾವು ಊಹಿಸಲಾರದಷ್ಟು ಅಪಡೇಟ್ ಆಗುತ್ತಿದೆ. ಇಂಥ ಸನ್ನಿವೇಶದಲ್ಲಿ ಸಹಜವಾಗಿ ನಮ್ಮ ಜೀವನವೂ ಇನ್ನಷ್ಟು ಸ್ಮಾರ್ಟ್ ಆಗಬೇಕಲ್ಲವೇ? ಬದುಕು ಬದಲಾಗಬೇಕೆಂದರೆ ಅಂಥ ಬದಲಾವಣೆ ಮನೆಯಿಂದಲೇ ಆರಂಭವಾಗಬೇಕು. ಇದನ್ನು ಅರಿತೇ ಒಂದು ಹೆಜ್ಜೆ ಮುಂದೆ ಹೋಗಿದೆ ಜಾಗತಿಕ ಮುಂಚೂಣಿಯ ತಂತ್ರಜ್ಞಾನ ಕಂಪನಿ ಡ್ರೀಮ್ಟೆಕ್. ನಮ್ಮ–ನಿಮ್ಮೆಲ್ಲರ ‘ಸ್ಮಾರ್ಟ್ ಹೋಮ್‘ ಕನಸನ್ನು ನನಸಾಗಿಸಲೆಂದೇ ಮಸಾಗಸಲೆಂದೇ ಡ್ರೀಮ್ಟೆಕ್ನ ತಂತ್ರಜ್ಞರು ನಿರಂತರ ಸಂಶೋಧನೆಗಳಲ್ಲಿ ನಿರತಾಗಿದ್ದರೆ. ಅದರ ಫಲವೇ ಅದೀಗ ನಾವೀನ್ಯತೆಗಳಲ್ಲಿ ಜಾಗತಿಕವಾಗಿ ಮುಂಚೂಣಿಯ ಕಂಪನಿ ಎನಿಸಿದೆ.

ಬಹುಶಃ ಹೀಗೆ ಹೇಳಿದರೆ, ನಿಮಗೆ ಉತ್ರೇಕ್ಷೆ ಎನಿಸಿಬಹುದು. ಅದನ್ನು ಒತ್ತೊಟ್ಟಿಗೆ ಇಡಿ, ನಗರ–ಮಹಾನಗರಗಳ ಯಾಂತ್ರಿಕ ಬದುಕನ್ನೊಮ್ಮೆ ಕಲ್ಪಿಸಿಕೊಳ್ಳಿ. ಕಲ್ಪನೆಯೇನು ಬಂತು ನಮ್ಮಲ್ಲಿ ಬಹುತೇಕರು ನಿತ್ಯ ಅದನ್ನೇ ತಾನೇ ಅನುಭವಿಸುತ್ತಿರುವುದು? ಬೆಳಗಿನ ಜಾವದ ಗಡಿಬಿಡಿ, ಗಂಡ–ಹೆಂಡತಿ ಇಬ್ಬರಿಗೂ ಕಚೇರಿಗೆ ಹೋಗುವ ಅವಸರ, ಮಕ್ಕಳಿಗೆ ಸ್ಕೂಲ್ ವ್ಯಾನ್ಗೆ ಟೈಮಾಗುತ್ತಿದೆ. ಅವರನ್ನು ರೆಡಿ ಮಾಡಿ, ಡಬ್ಬಿ ಕಟ್ಟಿ ಕಳುಹಿಸಬೇಕು, ಹೀಗೆಲ್ಲ ಇರುವಾಗಲೇ ಮದುವೆಯ ಆಹ್ವಾನ ಪತ್ರಿಕೆ ನೀಡಲು ಮನೆಗೆ ಅಪರೂಪದ ನೆಂಟರು ರುವುದಾಗಿ ಫೋನ್ ಮಾಡಿಬಿಡಬೇಕೇ? ಇವೆಲ್ಲದರ ನಡುವೆ ಮನೆ ಗಲೀಜಾಗಿ ಬಿದ್ದಿದೆ. ಚೆಂದದ ಗ್ರಾನೈಟ್ ಹಾಕಿಸಿದ್ದರೂ ನೆಲ ಅಸಹ್ಯ ಕಾಣಿಸುತ್ತಿದೆ. ನೆಲವನ್ನು ಗುಡಿಸಿ, ಒರೆಸುವಷ್ಟು ಟೈಮಿಲ್ಲ. ಕಾಸ್ಟ್ಲಿ ಕಾರ್ಪೆಟ್ನ ಮೇಲೆ ಮಗಳು ಹಾಲು ಚೆಲ್ಲಿ ಕಲೆಯಾಗಿದೆ. ಇವನ್ನೆಲ್ಲ ಅರ್ಧ–ಒಮದು ಗಂಟೆಯಲ್ಲಿ ಅಚ್ಚುಕಟ್ಟಾಗಿಡುವುದು ಸುಲಭದ ಮಾತಲ್ಲ. ಇಂಥ ಸಂದರ್ಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ವೇಷದಲ್ಲಿರುವ ರೋಬೋಟ್ ಬಂದುಬಿಟ್ಟರೆ! ರೇ,,, ಏನು ಬಂತು ತೀರಾ ರಜನಿಕಾಂತ್ರಂತೆ ನೋಡಲು ಕಾಣದಿದ್ದರೂ, ಅವರ ರೋಬೋ ಪಾತ್ರದಷ್ಟೇ ಸ್ಮಾರ್ಟ್ಆಗಿ ಮನೆಯನ್ನು ೊಪ್ಪ ಓರಣ ಮಾಡುವ ‘ಡ್ರೀಮಿ L10’ ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್ ಸರಣಿ ಈಗ ಮಾರುಕಟ್ಟೆಯನ್ನು ಆಳುತ್ತಿದೆ. ನೀವು ಹೀಗಿ ರೋಬೋವನ್ನು ಮನೆಗೆ ಕರೆತರಬೇಕಷ್ಟೇ. ನೀವು ಗಡಿಬಿಡಿಯಲ್ಲಿ ಮನೆಯನ್ನೆಲ್ಲ ಹರಡಿ, ಕಸ ಹಾಕಿ, ಕಾಫಿ, ಟೀ ಅಂತ ಚೆಲ್ಲುವಾಗೆಲ್ಲ ಮನೆಯ ಒಂದು ಮೂಲೆಯಲ್ಲಿ ಸದ್ದಿಲ್ಲದೆ ಕುಳಿತು ನೋಡುವ ಈ ‘ಡ್ರೀಮಿ L10’ ರೋಬೋ, ಸಮಯಕ್ಕೆ ಸರಿಯಾಗಿ ಎದ್ದು ಬಂದು ಇಡೀ ಮನೆಯನ್ನು ಲಕಲಕ ಅಂತ ಹೊಳೆಯುವಂತೆ ಮಾಡುತ್ತದೆ.

ಅಯ್ಯೋ, ಇದೇನು ಕನಸಾ ಎನ್ನಬೇಡಿ, ನೂರಕ್ಕೆ ನೂರು ನನಸೇ. ‘ಡ್ರೀಮಿ L10’ ಕೇವಲ ಯಂತ್ರವಲ್ಲ; ಆಧುನಿಕ ಗೃಹಿಣಿಯರ ಮತ್ತು ಕೆಲಸದ ಒತ್ತಡದಲ್ಲಿರುವ ನಗರಿಗರ ನೆಚ್ಚಿನ 'ಸ್ಮಾರ್ಟ್ ಗೆಳೆಯ'. ಹೌದು, ಭಾರತದ ಮಾರುಕಟ್ಟೆಯ ರೋಬೋಟಿಕ್ ವ್ಯಾಕ್ಯೂಮ್ ಪೋರ್ಟ್ಫೋಲಿಯೊಗೆ ‘ಡ್ರೀಮಿ L10’ ಉತ್ಪನ್ನ ಮಹತ್ವದ ಕೊಡುಗೆಯೇ ಸರಿ. ಆಧುನಿಕ ಮನೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಹೊಸ ಉತ್ಪನ್ನ ಶ್ರೇಣಿಯು ಹೆಗ್ಗಳಿಕೆಗಳೆಂದರೆ ಹೆಚ್ಚಿನ ಹೀರುವ ಸಾಮರ್ಥ್ಯ, ಸ್ಮಾರ್ಟ್ ನ್ಯಾವಿಗೇಷನ್, ಆಟೋಮೆಟೆಡ್ ಮ್ಯಾಪಿಂಗ್ ಸಿಸ್ಟಮ್ಗಳು ಮತ್ತು ಅಡಚಣೆ - ತಪ್ಪಿಸುವ ತಂತ್ರಜ್ಞಾನ, ಸ್ಮಾರ್ಟ್ ಕಾರ್ಪೆಟ್ ಡಿಟೆಕ್ಷನ್, ಸೆಲ್ಫ್ - ಕ್ಲೀನಿಂಗ್ ಮತ್ತು ನಿರ್ವಹಣಾ ಸಾಮರ್ಥ್ಯ. ಪರಿಣಾಮ, ನಿಮ್ಮ ಮನೆಯ ಪ್ರತಿಯೊಂದು ಮೂಲೆ ಮೂಲೆಗಳೂ ಸ್ವಚ್ಛತೆಯೊಂದಿಗೆ ಸದಾ ಫಳಫಳಿಸುತ್ತಿರುತ್ತದೆ.

ಚತುರ ಸಂಚಾರಿ ಈತ: ಈ ರೋಬೋಟ್ಗೆ ತನ್ನ ದಾರಿ ತನಗೇ ಗೊತ್ತು. ಲಿಡಾರ್ ನ್ಯಾವಿಗೇಷನ್ ಎಂಬ 'ಕಣ್ಣು'ಗಳನ್ನು ಹೊಂದಿರುವ ಇದು, ಮನೆಯ ಪ್ರತಿಯೊಂದು ಮೂಲೆ, ಪೀಠೋಪಕರಣಗಳ ಅಡಿಭಾಗ ಮತ್ತು ಮೆಟ್ಟಿಲುಗಳ ಅಂಚನ್ನು ನಿಖರವಾಗಿ ಗುರುತಿಸುತ್ತದೆ. ಕತ್ತಲೆಯಲ್ಲೂ ದಾರಿ ತಪ್ಪದ ಚತುರ. ಅಡೆತಡೆಗಳನ್ನು ಕಂಡಾಗ ಮಗುವಿನಂತೆ ಜಾಣತನದಿಂದ ಪಕ್ಕಕ್ಕೆ ಸರಿಯುವ ಪೋರ.

ಯಾವುದೇ ಕಸಕ್ಕೂ ಕರುಣೆ ತೋರದು: ನೆಲದ ಮೇಲೆ ಬಿದ್ದ, ಬರಿಗಣ್ಣಿಗೆ ಕಾಣದ ಧೂಳಿನ ಕಣದಿಂದ ಹಿಡಿದು, ಸಾಕುಪ್ರಾಣಿಗಳ ಕೂದಲಿನವರೆಗೆ ಎಲ್ಲ ರೀತಿಯ ತ್ಯಾಜ್ಯಕ್ಕೂ ಇದು ಮೃತ್ಯುಪ್ರಾಯ. ಇದರ ಶಕ್ತಿಶಾಲಿ ಹೀರುವಿಕೆ (Suction) ಸಾಮರ್ಥ್ಯವು ಕಾರ್ಪೆಟ್ಗಳ ಆಳದಲ್ಲಿ ಅಡಗಿರುವ ಕಾಫಿ–ಟೀಗಳ ಕಠಿಣ ಕೊಳೆಯನ್ನೂ ಸಲೀಸಾಗಿ ಎಳೆದು ತೆಗೆಯುತ್ತದೆ.

ಸ್ವಾವಲಂಬಿ ಸೇವಕ: ಈ ಸರಣಿಯ 'ಅಲ್ಟ್ರಾ' ಮಾದರಿಗಳ ವೈಶಿಷ್ಟ್ಯವೆಂದರೆ, ಅವು ಕೆಲಸ ಮುಗಿದ ಮೇಲೆ ತಮ್ಮನ್ನು ತಾವೇ ಸ್ವಚ್ಛಗೊಳಿಸಿಕೊಳ್ಳುತ್ತವೆ! ಮಾಪ್ಗಳನ್ನು ಬಿಸಿನೀರಿನಲ್ಲಿ ತೊಳೆದು, ಒಣಗಿಸಿ ಮುಂದಿನ ಕೆಲಸಕ್ಕೆ ಸಜ್ಜಾಗುವ ಇದರ ಜಾಣ್ಮೆ ಕಂಡರೆ ಅಚ್ಚರಿಯಾಗದಿರದು. ಹೀಗಾಗಿ ನೀವು ಮಾಪ್ಗಳನ್ನು ತೆಗೆದು ತೊಳೆಯದಿದ್ದರೂ ಸ್ವಚ್ಛವಾಗಿಯೇ ಇರುತ್ತವೆ, ಒಂದಿನಿತೂ ವಾಸನೆ ಬೀರುವುದಿಲ್ಲ.

ನಿಮ್ಮ ಆಜ್ಞೆ ಇದಕ್ಕೆ ಶಾಸನ: ನೀವು ಆಫೀಸಿನಲ್ಲಿದ್ದರೂ ಅಥವಾ ಬೇರೆ ಊರಿನಲ್ಲಿದ್ದರೂ ಮೊಬೈಲ್ ಮೂಲಕ "ಕ್ಲೀನಿಂಗ್ ಶುರು ಮಾಡು" ಎಂದರೆ ಸಾಕು, ಮನೆ ತಲುಪುವಷ್ಟರಲ್ಲಿ ನಿಮ್ಮ ನೆಲ ಕನ್ನಡಿಯಂತೆ ಹೊಳೆಯುತ್ತಿರುತ್ತದೆ ಗೊತ್ತಾ?.

ಲಿಡಾರ್ ನ್ಯಾವಿಗೇಷನ್ (LiDAR Navigation): ಇದರಲ್ಲಿರುವ ಸುಧಾರಿತ ಲೇಸರ್ ತಂತ್ರಜ್ಞಾನವು ನಿಮ್ಮ ಮನೆಯ ಸಂಪೂರ್ಣ ನಕ್ಷೆಯನ್ನು (Mapping) ಸೆಕೆಂಡುಗಳಲ್ಲಿ ಸಿದ್ಧಪಡಿಸುತ್ತದೆ. ಇದರಿಂದಾಗಿ ಇದು ಪೀಠೋಪಕರಣಗಳಿಗೆ ಡಿಕ್ಕಿ ಹೊಡೆಯದೆ ಅಥವಾ ಮೆಟ್ಟಿಲುಗಳಿಂದ ಕೆಳಗೆ ಬೀಳದೆ ಚತುರತೆಯಿಂದ ಸಂಚರಿಸುತ್ತದೆ. ಕತ್ತಲೆಯಲ್ಲೂ ಇದು ನಿಖರವಾಗಿ ಕೆಲಸ ಮಾಡಬಲ್ಲದು.

ವ್ಯಾಕ್ಯೂಮ್ ಮತ್ತು ಮಾಪ್ - ಎರಡು ಕೆಲಸ ಒಂದೇ ಬಾರಿ: ಇದು ಕೇವಲ ಕಸ ಗುಡಿಸುವುದು ಮಾತ್ರವಲ್ಲದೆ, ನೆಲವನ್ನು ಒರೆಸುವ (Mopping) ಕೆಲಸವನ್ನೂ ಮಾಡುತ್ತದೆ. ನೆಲದ ಮೇಲಿನ ಜಿSticky ಕಲೆಗಳನ್ನು ತೆಗೆಯಲು ಇದು ನೀರಿನ ಪ್ರಮಾಣವನ್ನು ಬುದ್ಧಿವಂತಿಕೆಯಿಂದ ನಿಯಂತ್ರಿಸುತ್ತದೆ.

ಅಪ್ಲಿಕೇಶನ್ ಮತ್ತು ವಾಯ್ಸ್ ಕಂಟ್ರೋಲ್: ನೀವು ಮನೆಯಲ್ಲಿ ಇಲ್ಲದಿದ್ದರೂ 'Dreamehome' ಆಪ್ ಮೂಲಕ ಇದನ್ನು ನಿಯಂತ್ರಿಸಬಹುದು. ಅಷ್ಟೇ ಅಲ್ಲದೆ, ಅಲೆಕ್ಸಾ (Alexa) ಅಥವಾ ಗೂಗಲ್ ಅಸಿಸ್ಟೆಂಟ್ ಮೂಲಕ ನಿಮ್ಮ ಧ್ವನಿಯಿಂದಲೇ ಇದಕ್ಕೆ ಆಜ್ಞೆ ನೀಡಬಹುದು. "ಸ್ವಚ್ಛಗೊಳಿಸಲು ಪ್ರಾರಂಭಿಸು" ಎಂದು ಹೇಳಿದರೆ ಸಾಕು, ಅದು ತನ್ನ ಕೆಲಸ ಶುರು ಮಾಡುತ್ತದೆ.

ಎಲ್ಲಕ್ಕೂ, ಎಲ್ಲೆಡೆಯೂ ಸೈ: ಇದರ ವೈಶಿಷ್ಟ್ಯಪೂರ್ಣ ರಚನೆಗಳು ವಿವಿಧ ನೆಲದ ಪ್ರಕಾರಗಳಿಗೂ ಹೊಂದುವಂತಿದೆ. ವಿಶೇಷವಾಗಿ ಸಾಕುಪ್ರಾಣಿಗಳನ್ನು ಹೊಂದಿರುವ ಮನೆಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಹಿಂತೆಗೆದುಕೊಳ್ಳುವ ರಬ್ಬರ್ ಬ್ರಷ್ ಗಟ್ಟಿಯಾದ ಮಹಡಿಗಳು, ಕಾರ್ಪೆಟ್ಗಳಿಂದ ಧೂಳು ಅನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಇದು ನಿರ್ವಾತದೊಳಗೆ ಅಡೆತಡೆಗಳನ್ನು ಉಂಟುಮಾಡದೇ ಒಣ ಕಸ, ಕಾರ್ಪೆಟ್ಗಳು ಮತ್ತು ನೆಲದ ಬಿರುಕುಗಳಿಂದಲೂ ಸಹ ಪರಿಣಾಮಕಾರಿಯಾಗಿ ಶುಚಿಗೊಳಿಸುತ್ತದೆ.

ಒಟ್ಟಾರೆ ಕೆಲಸದ ನಡುವೆ ನೆಮ್ಮದಿಯ ಕ್ಷಣಗಳನ್ನು ಹುಡುಕುತ್ತಿರುವವರಿಗೆ ಈ ರೋಬೋಟ್ ಒಂದು ವರದಾನ. ಸುಂದರ ನಕ್ಷೆ, ಶಕ್ತಿಶಾಲಿ ಸ್ವಚ್ಛತೆ ಮತ್ತು ಹ್ಯಾಂಡ್ಸ್-ಫ್ರೀ ಅನುಭವ ನೀಡುವ ಡ್ರೀಮಿ L10 ಸರಣಿಯು ನಿಮ್ಮ ಮನೆಯನ್ನು ಕೇವಲ ಮನೆಯನ್ನಾಗಿ ಉಳಿಸದೆ, ಸ್ಮಾರ್ಟ್ ಸ್ವರ್ಗವನ್ನಾಗಿ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.