ಸ್ಮಾರ್ಟ್ಫೋನ್ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿವೆ. ಬ್ಯಾಂಕಿಂಗ್ನಿಂದ ಹಿಡಿದು ಸಾಮಾಜಿಕ ಮಾಧ್ಯಮ, ವೈಯಕ್ತಿಕ ಫೋಟೊಗಳವರೆಗೆ ನಮಗೆ ಬೇಕಾದ ಎಲ್ಲವೂ ಈ ಒಂದೇ ಸಾಧನದಲ್ಲಿದೆ. ಆದರೆ, ಇದೇ ಫೋನ್ಗಳು ಹಳೆಯದಾದಾಗ ಮತ್ತು ಅಪ್ಡೇಟ್ ಸ್ವೀಕರಿಸದಿದ್ದಾಗ ದುರ್ಬಲವಾಗಬಹುದು. ಸೈಬರ್ ಭದ್ರತಾ ತಜ್ಞರ ಪ್ರಕಾರ, ಅಂತಹ ಸ್ಮಾರ್ಟ್ಫೋನ್ಗಳು ಹ್ಯಾಕರ್ಗಳಿಗೆ ಸುಲಭವಾದ ಗುರಿಯಾಗುತ್ತವೆ.

ಫೋನ್ ಸ್ವಿಚ್ ಆಫ್ ಮಾಡಿದಾಗ ಮಾತ್ರ ಅದು ನಿಷ್ಪ್ರಯೋಜಕ ಎಂದು ಹಲವರು ಭಾವಿಸುತ್ತಾರೆ. ಆದರೆ, ಕಂಪನಿಯು ಸ್ಮಾರ್ಟ್ಫೋನ್ಗೆ ಸಾಫ್ಟ್ವೇರ್ ಮತ್ತು ಸೆಕ್ಯುರಿಟಿ ಅಪ್ಡೇಟ್ಗಳನ್ನು ಒದಗಿಸುವುದನ್ನು ನಿಲ್ಲಿಸಿದಾಗ ನಿಜವಾದ ಅಪಾಯ ಶುರುವಾಗುತ್ತದೆ. ಅಪ್ಡೇಟ್ ಬರುವುದು ನಿಂತ ನಂತರ, ಫೋನ್ನ ಭದ್ರತೆ ಕ್ರಮೇಣ ದುರ್ಬಲಗೊಳ್ಳುತ್ತದೆ. ಈ ಸಂದರ್ಭ ಫೋನ್ನಲ್ಲಿ ಕಾಣಿಸಿಕೊಂಡ ತೊಂದರೆಗಳು ಸರಿಯಾಗದೆ ಹಾಗೇ ಉಳಿದುಬಿಡುತ್ತವೆ. ಆಗ ಈ ದುರ್ಬಲತೆಗಳು ಸೈಬರ್ ಅಪರಾಧಿಗಳಿಗೆ ಬಾಗಿಲು ತೆರೆಯುತ್ತವೆ.

ಹಳೆಯ ಫೋನ್ ಹ್ಯಾಕ್ ಆದಲ್ಲಿ, ಹ್ಯಾಕರ್ಗಳು ಅದನ್ನು ಸುಲಭವಾಗಿ ಸಂಪೂರ್ಣವಾಗಿ ನಿಯಂತ್ರಿಸಬಹುದು. ಅವರು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರವೇಶಿಸಬಹುದು. ನಿಮ್ಮ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನ್ನು ತಮ್ಮ ವಶಕ್ಕೆ ಪಡೆಯಬಹುದು. ನಿಮ್ಮ ಬ್ಯಾಂಕಿಂಗ್ ಅಪ್ಲಿಕೇಶನ್ಗಳ ಮೇಲೂ ಅವರ ಕಣ್ಣು ಬೀಳುತ್ತದೆ. ನಿಮ್ಮ ಫೋನ್ಗೆ ಬಂದ ಒಟಿಪಿ ಅವರ ಕೈಗೆ ಸಿಕ್ಕರೆ ಅದು ಅತ್ಯಂತ ದೊಡ್ಡ ಅಪಾಯಕಾರಿ. ಇದು ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಲು ಅವರಿಗೆ ತುಂಬಾ ಸುಲಭವಾಗುತ್ತದೆ.

ಇದು ಕೇವಲ ಹಣದ ಬಗ್ಗೆ ಅಲ್ಲ, ನಿಮ್ಮ ವೈಯಕ್ತಿಕ ಜೀವನವೂ ಅಪಾಯದಲ್ಲಿರಬಹುದು. ಹ್ಯಾಕರ್ಗಳು ನಿಮ್ಮ ಫೋನ್ನ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನ್ನು ಕೂತಲ್ಲಿಂದಲೇ ಪ್ರವೇಶಿಸಬಹುದು. ಇವರು ನಿಮ್ಮ ಚಟುವಟಿಕೆಗಳನ್ನು ಕೂತಲ್ಲಿಂದಲೇ ತಿಳಿದುಕೊಳ್ಳುತ್ತಾರೆ. ಹೀಗಾದಾಗ ಡೇಟಾ ಕಳ್ಳತನ, ಬೇಹುಗಾರಿಕೆ ಮತ್ತು ಬ್ಲ್ಯಾಕ್ಮೇಲ್ನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

3ರಿಂದ 4 ವರ್ಷ ಹಳೆಯದಾದ ಮತ್ತು ದೀರ್ಘಕಾಲದವರೆಗೆ ಭದ್ರತಾ ನವೀಕರಣಗಳನ್ನು ಪಡೆಯದ ಸ್ಮಾರ್ಟ್ಫೋನ್ಗಳನ್ನು ಹೊಂದಿರುವ ಬಳಕೆದಾರರು ಈ ಅಪಾಯಕ್ಕೆ ಗುರಿಯಾಗುತ್ತಾರೆ. ನಿರ್ದಿಷ್ಟವಾಗಿ ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ಗಳು ಬೇಗನೆ ಹಳೆಯದಾಗುತ್ತವೆ. ಅವುಗಳ ಭದ್ರತಾ ಅಪಾಯವನ್ನು ಹೆಚ್ಚಿಸುತ್ತವೆ. ನಿಮ್ಮ ಫೋನ್ ಇತ್ತೀಚಿನ ಭದ್ರತಾ ಪ್ಯಾಚ್ಗಳನ್ನು ಸ್ವೀಕರಿಸದಿದ್ದರೆ, ಅವು ಸುರಕ್ಷಿತವಾಗಿಲ್ಲ ಎಂಬುದರ ಸ್ಪಷ್ಟ ಸಂಕೇತ.

ಈ ಅಪಾಯವನ್ನು ತಪ್ಪಿಸಲು, ನಿಮ್ಮ ಫೋನ್ ಅನ್ನು ನಿಯಮಿತವಾಗಿ ಅಪ್ಡೇಟ್ ಮಾಡುವುದು ಬಹಳ ಮುಖ್ಯ. ನಿಮ್ಮ ಸಾಧನವು ನವೀಕರಣಗಳನ್ನು ಬೆಂಬಲಿಸದಿದ್ದರೆ, ಹೊಸ ಫೋನ್ ಖರೀದಿಸುವುದು ಉತ್ತಮ. ಅಲ್ಲದೆ, ವಿಶ್ವಾಸಾರ್ಹ ಅಪ್ಲಿಕೇಶನ್ಗಳನ್ನು ಮಾತ್ರ ಇನ್ಸ್ಟಾಲ್ ಮಾಡಿ ಮತ್ತು ಯಾವುದೇ ಅನುಮಾನಾಸ್ಪದ ಲಿಂಕ್ಗಳು ಅಥವಾ ಫೈಲ್ಗಳ ಮೇಲೆ ಕ್ಲಿಕ್ ಮಾಡುವುದು ತಪ್ಪಿಸಿ. ಇವುಗಳ ಜೊತೆಗೆ ನಿಮ್ಮ ಸ್ಮಾರ್ಟ್ಫೋನ್ ಹಳೆಯದಾಗಿದೆ ಎಂದು ತಿಳಿಯಲು ಇನ್ನೂ ಕೆಲ ಟ್ರಿಕ್ಗಳಿವೆ.

ಫೋನ್ ಆಗಾಗ್ಗೆ ಹ್ಯಾಂಗ್ ಆಗುತ್ತಿದ್ದರೆ ಅಥವಾ ತುಂಬಾ ನಿಧಾನವಾಗುತ್ತಿದ್ದರೆ ಇದು ಸ್ಮಾರ್ಟ್ಫೋನ್ ಅವಧಿ ಮುಗಿಯಲಿದೆ ಎಂದು ಸೂಚಿಸುತ್ತದೆ. ಹಾಗೆಯೇ ನಿಮ್ಮ ಫೋನ್ ಶೇಕಡ 100ರಷ್ಟು ಚಾರ್ಜ್ ಆಗಿ, ಕೆಲವು ಗಂಟೆಗಳಲ್ಲಿ ಶೇಕಡ 20ರಿಂದ 30ಕ್ಕೆ ಇಳಿದರೆ, ಅಥವಾ ಅದು ಇದ್ದಕ್ಕಿದ್ದಂತೆ ಆಫ್ ಆದಲ್ಲಿ, ಬ್ಯಾಟರಿ ತನ್ನ ಶಕ್ತಿಯನ್ನು ಕಳೆದುಕೊಂಡಿದೆ ಎಂದರ್ಥ. ಫೋನ್ ಬ್ಯಾಟರಿಗಳು ಸಾಮಾನ್ಯವಾಗಿ 500ರಿಂದ 800 ಚಾರ್ಜಿಂಗ್ ಸರ್ಕಲ್ಗಳನ್ನಷ್ಟೆ ಹೊಂದಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.