ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್ ದೋಷ ಪತ್ತೆ ಹಚ್ಚಿದ ಯುವಕನಿಗೆ ಫೇಸ್‌ಬುಕ್ ಗೌರವ

ಝೊನೆಲ್ ಸೌಜಿಜಮ್‌ಗೆ ಫೇಸ್‌ಬುಕ್ ‘ಹಾಲ್ ಆಫ್ ಫೇಮ್‌’
Last Updated 11 ಜೂನ್ 2019, 13:58 IST
ಅಕ್ಷರ ಗಾತ್ರ

ಇಂಫಾಲ: ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಉಂಟುಮಾಡುತ್ತಿದ್ದ ವಾಟ್ಸ್‌ಆ್ಯಪ್‌ನಲ್ಲಿದ್ದ ದೋಷವೊಂದನ್ನು ಮಣಿಪುರದ ಯುವಕ ಪತ್ತೆಹಚ್ಚಿದ್ದಾರೆ. ಇದಕ್ಕಾಗಿ ಅವರು ‘ಫೇಸ್‌ಬುಕ್ ಹಾಲ್ ಆಫ್ ಫೇಮ್–2019’ ಗೌರವಕ್ಕೆ ಪಾತ್ರರಾಗಿದ್ದಾರೆ.

ದೋಷ ಪತ್ತೆಹಚ್ಚಿದ 22 ವರ್ಷದ ಸಿವಿಲ್ ಎಂಜಿನಿಯರ್ ಝೊನೆಲ್ ಸೌಜಿಜಮ್ ಅವರಿಗೆ ಫೇಸ್‌ಬುಕ್ ಸಂಸ್ಥೆಯು ₹3.5 ಲಕ್ಷ (5 ಸಾವಿರ ಯುಎಸ್‌ಡಿ) ಬಹುಮಾನವನ್ನೂ ಘೋಷಿಸಿದೆ.

ಈ ವರ್ಷದ ಫೇಸ್‌ಬುಕ್ ಹಾಲ್‌ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ 94 ಮಂದಿಯ ಪಟ್ಟಿಯಲ್ಲಿ ಸೌಜಿಜಮ್ ಅವರಿಗೆ 16ನೇ ಸ್ಥಾನ ನೀಡಲಾಗಿದೆ.

ಏನು ದೋಷ?: ವಾಟ್ಸ್‌ಆ್ಯಪ್ ಮೂಲಕ ವಾಯ್ಸ್ ಕಾಲ್ ಮಾಡುವವರು ತಮ್ಮ ಕರೆಯನ್ನು ವಿಡಿಯೊ ಕಾಲ್‌ಗೆ ಪರಿವರ್ತಿಸಿಕೊಳ್ಳುವ ಸೌಲಭ್ಯ ಕಲ್ಪಿಸಿತ್ತು. ಆದರೆ ಕರೆ ಸ್ವೀಕರಿಸುವವರ ಅನುಮತಿ ಇಲ್ಲದೆ, ಅವರ ಅರಿವಿಗೆ ಬರದೆಯೇ ವಾಯ್ಸ್ ಕಾಲ್, ವಿಡಿಯೊ ಕಾಲ್ ಆಗಿ ಬದಲಾಗುತ್ತಿತ್ತು. ಆಗ ಕರೆ ಮಾಡಿದವರಿಗೆ, ಕರೆ ಸ್ವೀಕರಿಸಿದವರು ಏನು ಮಾಡುತ್ತಿದ್ದಾರೆ ಎಂದು ಗೊತ್ತಾಗಿಬಿಡುತ್ತಿತ್ತು. ಇದರಿಂದ ಕರೆ ಸ್ವೀಕರಿಸುವವರ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಸೌಜಿಜಮ್ ಅವರು ಹೇಳಿದ್ದರು.

ಮಾರ್ಚ್ ತಿಂಗಳಲ್ಲಿ ಈ ದೋಷ ಕಂಡುಬಂದ ಬಳಿಕ ಅವರು ಖಾಸಗಿತನಕ್ಕೆ ಧಕ್ಕೆ ತರುವ ವಿಚಾರಗಳನ್ನು ನಿರ್ವಹಿಸುವ ಫೇಸ್‌ಬುಕ್‌ನ ಬಗ್ ಬೌಂಟಿ ಪ್ರೊಗ್ರಾಮ್‌ಗೆ ಮಾಹಿತಿ ನೀಡಿದ್ದರು.

ಸೌಜಿಜಮ್ ಅವರ ಮಾಹಿತಿಯನ್ನ ಪರಿಗಣಿಸಿದ ತಾಂತ್ರಿಕ ತಂಡ, 15–20 ದಿನದೊಳಗೆ ದೋಷವನ್ನು ಸರಿಪಡಿಸಿತು. ದೋಷವನ್ನು ತೋರಿಸಿಕೊಟ್ಟಿದ್ದಕ್ಕೆ ಬಹುಮಾನ ನೀಡುತ್ತಿದ್ದೇವೆ ಎಂದು ಫೇಸ್‌ಬುಕ್ ಕಳುಹಿಸಿದ್ದ ಇ–ಮೇಲ್‌ನಲ್ಲಿ ತಿಳಿಸಿತ್ತು. ಮಾರ್ಕ್ ಜುಕರ್‌ಬರ್ಗ್‌ ಒಡೆತನದ ಫೇಸ್‌ಬುಕ್, 2014ರಲ್ಲಿ ವಾಟ್ಸ್‌ಆ್ಯಪ್ ಅನ್ನು ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT