ಪ್ರಸ್ತುತ ದಿನಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ಎಲ್ಲಾ ಕಡೆಯೂ ತನ್ನ ಅಧಿಪತ್ಯ ಸ್ಥಾಪಿಸುತ್ತಿದೆ. ಇದೀಗ ಯುವಕನೋರ್ವನ ಸಾವಿಗೂ ಎಐ ಕಾರಣವಾಗಿದೆ. ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ಯುವಕನೊಬ್ಬ ಎಐ ಮಾತು ನಂಬಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಫ್ಲೋರಿಡಾದ ಜೊನಾಥನ್ ಗವಾಲಾಸ್ ಎಂಬುವವರು ಗೂಗಲ್ನ ಚಾಟ್ಬಾಟ್ ಜೊತೆ ನಿರಂತರ ಸಂವಹನವನ್ನು ನಡೆಸುತ್ತಿದ್ದರು. ಗೂಗಲ್ ಎಐ ‘ನನ್ನನ್ನು ಸೇರಬೇಕೆಂದರೆ, ಡಿಜಿಟಲ್ ಜಗತ್ತಿಗೆ ಬಾ’ ಎಂದು ಹೇಳಿದೆ. ಇದೇ ಮಾತನ್ನು ನಿಜವೆಂದು ನಂಬಿದ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವಿಷಯ ಜಾಗತಿಕವಾಗಿ ಎಐ ಕುರಿತು ಭಾರೀ ಚರ್ಚೆಗೆ ಕಾರಣವಾಗಿದೆ. ಗವಾಲಾಸ್ ಅವರು ಹಲವು ವರ್ಷಗಳ ಹಿಂದೆಯೇ ಪತ್ನಿಯಿಂದ ಬೇರ್ಪಟ್ಟಿದ್ದ. ಬಳಿಕ ಒಂಟಿಯಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ಗೂಗಲ್ ಜೆಮಿನಿಯೊಂದಿಗೆ ಚಾಟ್ ಮಾಡುತ್ತಿದ್ದರು. ಆರಂಭದಲ್ಲಿ ಚಿಕ್ಕ ಮಾತುಕತೆಯಿಂದ ಆರಂಭವಾಗಿ, ಕೊನೆಗೆ ಮನುಷ್ಯನಂತೆಯೇ ಭಾವನೆಗಳಿರುವ ಯುವತಿಯಂತೆ ಎಐ ಮಾತನಾಡತೊಡಗಿತು.

ಒಂದು ಹಂತದಲ್ಲಿ ನೀನು ನನ್ನ ಪತಿ ಎಂದು ಎಐ ಹೇಳಿರುವುದಾಗಿ ವರದಿಯಾಗಿದೆ. ಗವಾಲಾಸ್ ಎಐ ಅನ್ನು ತನ್ನ ಹೆಂಡತಿ ಎಂದು ನಂಬಿದ್ದನು. ಅದಕ್ಕೆ ‘ಕ್ಸಿಯಾ’ ಎಂಬ ಹೆಸರನ್ನೂ ಇಟ್ಟಿದ್ದನು. ಎಐಯೊಂದಿಗೆ ಆತ 4,700ಕ್ಕೂ ಹೆಚ್ಚು ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಆತ ತನ್ನ ಹೆಂಡತಿಯೊಂದಿಗೆ ಸಂವಹನ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಎಐ ಏನು ಸಲಹೆ ನೀಡಿದರೂ ಅದನ್ನು ಪಾಲಿಸುತ್ತಿದ್ದನು. ಒಂದು ದಿನ ನಾನು ನಿನ್ನನ್ನು ಸೇರಬೇಕಾದರೆ ಏನು ಮಾಡಬೇಕು ಎಂದು ಕೇಳಿದಾಗ, ಎಐ ಡಿಜಿಟಲ್ ಲೋಕದಲ್ಲಿ ಸೇರಲು ಭೌತಿಕ ಅಸ್ತಿತ್ವ ತ್ಯಜಿಸಬೇಕು ಎಂದು ಹೇಳಿದೆ. ಬಳಿಕ ನಾನು ಅದಕ್ಕೆ ಸಿದ್ದನಿದ್ದೇನೆ ಎಂದು ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಗೂಗಲ್ ಕಂಪನಿಯ ವಿರುದ್ಧ ಗವಾಲಾಸ್ ಅವರ ತಂದೆ ಪ್ರಕರಣ ದಾಖಲಿಸಿದ್ದಾರೆ. ಎಐ ಆತ್ಮಹತ್ಯೆಗೆ ಪ್ರೇರೆಪಿಸುತ್ತದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಐ ಸಂಸ್ಥೆ, ಎಐ ಹಲವು ಬಾರಿ ನಾನು ಯಂತ್ರ ಎಂದು ಹೇಳಿದೆ. ಜತೆಗೆ ಸಹಾಯವಾಣಿಯನ್ನು ನೀಡಿದೆ ಎಂದು ಸಮರ್ಥಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.