ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗಿಳಿದ ಗೂಗಲ್‌ನ ‘ಆಂಡ್ರಾಯ್ಡ್‌ ಪೈ’ ಒಎಸ್

7

ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗಿಳಿದ ಗೂಗಲ್‌ನ ‘ಆಂಡ್ರಾಯ್ಡ್‌ ಪೈ’ ಒಎಸ್

Published:
Updated:

ಗೂಗಲ್‌ ತನ್ನ ಹೊಸ ಒಎಸ್‌(ಆಪರೇಟಿಂಗ್‌ ಸಿಸ್ಟಂ) ಆಂಡ್ರಾಯ್ಡ್‌ ಪೈ ಅನ್ನು ಮಂಗಳವಾರ(ಆಗಸ್ಟ್‌ 07) ಮಾರುಕಟ್ಟೆಗೆ ಪರಿಚಯಿಸಿದೆ.

ಸದ್ಯ ಗೂಗಲ್‌ ಪಿಕ್ಸೆಲ್‌ ಶ್ರೇಣಿಯ ಎಲ್ಲ ಮೊಬೈಲ್‌ಗಳಿಗೆ ಒಎಸ್‌ಅನ್ನು ಅಪ್‌ಡೇಟ್‌ ಮಾಡಲಾಗಿದ್ದು, ಶೀಘ್ರದಲ್ಲಿ ಸೋನಿ, ಶಿಯೋಮಿ, ಒಪ್ಪೋ, ವಿವೊ, ಒನ್‌ಪ್ಲಸ್‌ ಹಾಗೂ ಇತರೆ ಆಂಡ್ರಾಯ್ಡ್‌ ಮೊಬೈಲ್‌ ಬಳಕೆದಾರರು ಅಪ್‌ಡೇಟ್‌ ಮಾಡಿಕೊಳ್ಳಬಹುದು.

ಅತ್ಯಂತ ಸುರಕ್ಷಿತವಾಗಿರುವ ಈ ಒಎಸ್‌ಅನ್ನು ಆಂಡ್ರಾಯ್ಡ್‌ ಫೋನ್‌ಗಳ ಕಾರ್ಯಗತಿಯ ವೇಗ ಹೆಚ್ಚಿಸುವುದಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ.

ವೈಶಿಷ್ಟ್ಯಗಳು

ಮೊಬೈಲ್‌ ಡಿವೈಸ್‌ ಅನ್ನು ಹೇಗೆ ಬಳಸಬೇಕು ಎಂಬುದರ ಮಾಹಿತಿ ನೀಡುವ ಕೃತಕ ಬುದ್ದಿಮತ್ತೆ ಇದರಲ್ಲಿದೆ.

ಮೊಬೈಲ್‌ ಬಳಸುವ ವೇಳೆ ಅದಲ್ಲಿನ ಫೈಲ್‌ಗಳನ್ನು ನೋಡಲು/ಓದಲು ಅನುಕೂಲವಾಗುವಂತೆ ಬೆಳಕಿನ ವ್ಯವಸ್ಥೆಗೆ ಅನುಗುಣವಾಗಿ ಸ್ಕ್ರೀನ್‌ ಲೈಟ್‌ ಬ್ಯಾಲೆನ್ಸ್‌ ಆಗಲಿದೆ. 

‘ವೈಂಡ್‌ ಡೌನ್‌’ ಎಂಬ ಹೊಸದೊಂದು ಆಯ್ಕೆಯಿದೆ. ಒಮ್ಮೆ ಸೆಟ್‌ ಮಾಡಿಕೊಂಡರೆ, ಮೊಬೈಲ್‌ ಬಳಸದಿದ್ದ ವೇಳೆಯಲ್ಲಿ ಮೊಬೈಲ್‌ ಪರದೆಯ ಬೆಳಕನ್ನು ಬೂದು ಬಣ್ಣಕ್ಕೆ ತಿರುಗುತ್ತದೆ. ಬಳಿಕ ಬೆಳಕು ಮಾಯವಾಗುತ್ತದೆ. ಈ ಫೀಚರ್‌ಗಳು ಮೊಬೈಲ್‌ ಬ್ಯಾಟರಿ ಉಳಿಸುವುದಕ್ಕೂ ನೆರವಾಗಲಿವೆ.

ಯಾವ ಆ್ಯಪ್‌ ಅನ್ನು ಎಷ್ಟು ಅವಧಿ ಕಾಲ ಬಳಸಲಾಗಿದೆ ಎನ್ನುವ ಮಾಹಿತಿ ಸಿಗಲಿದೆ. ಇದರಿಂದ ಪ್ರತಿ ದಿನ ಯಾವ ಆ್ಯಪ್‌ಗಾಗಿ ಎಷ್ಟು ಸಮಯ ವ್ಯಯಿಸಲಾಗಿದೆ ಎಂಬುದರ ಲೆಕ್ಕವೂ ಸಿಗಲಿದೆ.

ಸನ್ನೆ ಮೂಲಕವೂ ಮೊಬೈಲ್‌ ನಿರ್ವಹಿಸಬಹುದು. ಸ್ಕ್ರೀನ್‌ನ ಕೆಳಗಿನಿಂದ ಮೇಲಕ್ಕೆ ಬೆರಳಾಡಿಸಿದರೆ ಹೋಂ ಸ್ಕ್ರೀನ್‌ ತೆರೆದುಕೊಳ್ಳುತ್ತದೆ. ಮೇಲಿಂದ ಕೆಳಗೆಳೆದರೆ ವಿವಿಧ ಆಯ್ಕೆಗಳು ಮೂಡಿಬರುತ್ತವೆ.

*

ಜುಲೈ ತಿಂಗಳಲ್ಲಿ ಪ್ರತಿಷ್ಟಿತ ಮೊಬೈಲ್‌ ಕಂಪನಿ ಆ್ಯಪಲ್‌ ಕೂಡ 11.4.1 ಒಸ್‌ ಅನ್ನು ಪರಿಚಯಿಸಿತ್ತು. ಅತ್ಯಂತ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಇದರಲ್ಲಿ, ಬಳಕೆದಾರರ ಮಾಹಿತಿ ಸುರಕ್ಷತೆಗಾಗಿ ಯುಎಸ್‌ಬಿ ಬಳಕೆಯಾಗದಂತೆ ಯುಎಸ್‌ಬಿ ರಿಸ್ಟ್ರಿಕ್ಟೆಡ್‌ ಮೋಡ್‌ ಅನ್ನು ವಿನ್ಯಾಸ ಮಾಡಲಾಗಿದೆ.

ಶೀಘ್ರದಲ್ಲೇ ಒಎಸ್‌ 12 ಪರಿಚಯಿಸುವುದಾಗಿ ಆ್ಯಪಲ್‌ ಹೇಳಿಕೊಂಡಿದೆ. ಒಂದು ವೇಳೆ ಯುಎಸ್‌ಬಿ ಬಳಕೆ ಅಗತ್ಯ ಅಥವಾ ಬೇಕು ಎನಿಸಿದರೆ ಸುಧಾರಿತ ಒಎಸ್‌ ಮೂಲಕ ಅಪ್‌ಡೇಟ್‌ ಮಾಡಿಕೊಳ್ಳಬಹುದು. ಜೊತೆಗೆ ಇಮೋಜಿಗಳನ್ನು ಕ್ರಿಯೇಟ್‌ ಮಾಡುವುದು/ ತೆಗೆಯುವುದು, ಡು ನಾಟ್‌ ಡಿಸ್ಟರ್ಬ್‌ ಮೋಡ್‌, ಸ್ಕ್ರೀನ್‌ ಬಳಕೆ ಸಮಯ ನಿರ್ವಹಣೆ, ನೋಟಿಫಿಕೇಷನ್‌ಗಳ ನಿರ್ವಹಣೆ, ಆ್ಯಪ್‌ಗಳ ನಿರ್ವಹಣೆ, ಶಾರ್ಟ್‌ಕಟ್‌ಗಳು, ಆ್ಯಪ್‌ಗಳ ಸುಧಾರಣೆ, ಸುರಕ್ಷತೆ, ಆಂತರಿಕ ವೈಶಿಷ್ಟ್ಯಗಳು ಮತ್ತಿತರ ಅಂಶಗಳನ್ನು ಗಮನದಲ್ಲಿರಿಸಿ ಒಎಸ್‌ ವಿನ್ಯಾಸ ಮಾಡಲಾಗುತ್ತಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 2

  Frustrated
 • 1

  Angry

Comments:

0 comments

Write the first review for this !