ವಾಟ್ಸ್‌ಆ್ಯಪ್‌ನಲ್ಲೂ ಹಣ ಕಳುಹಿಸಿ

7

ವಾಟ್ಸ್‌ಆ್ಯಪ್‌ನಲ್ಲೂ ಹಣ ಕಳುಹಿಸಿ

Published:
Updated:

ಹಣ ವರ್ಗಾವಣೆ ಮಾಡಲು ಹಲವಾರು ಆ್ಯಪ್‌ಗಳಿದ್ದರೂ ವಾಟ್ಸ್‌ಆ್ಯಪ್‌ ಮೂಲಕ ಹಣ ಕಳಿಸುವುದು ಸುಲಭ ವಿಧಾನ. ಈ ರೀತಿ ಹಣ ವರ್ಗಾವಣೆ ಮಾಡಲು ನಿಮ್ಮ ವಾಟ್ಸ್‌ಆ್ಯಪ್‌ ಅಪ್ ಡೇಟ್ ಆಗಿರಬೇಕು. iOS ಆಗಿದ್ದರೆ 2.18.21 ಮತ್ತು ಆ್ಯಂಡ್ರಾಯಿಡ್‌ ಆಗಿದ್ದರೆ 2.18.41 ವರ್ಶನ್ ಅಪ್‌ಡೇಟ್‌ ಆಗಿರಬೇಕು. ಯುಪಿಐ ಇಂಟರ್‌ಫೇಸ್‌ ಮೂಲಕ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಇದಾಗಿದ್ದು ಒಟ್ಟು 71 ಬ್ಯಾಂಕ್‌ಗಳು ಯುಪಿಐನಲ್ಲಿವೆ.

ಹಣ ವರ್ಗಾವಣೆ ಹೇಗೆ?: ವಾಟ್ಸ್ಆ್ಯಪ್‌ನಲ್ಲಿ ಕಳಿಸಿದ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಹೀಗೆ ನೀವು ಯಾರಿಗಾದರೂ ಹಣ ಕಳುಹಿಸಬೇಕಾದರೆ ನೀವು ಬಳಸುವ ಫೋನ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆ ಮತ್ತು ಯುಪಿಐ ಜತೆ ಲಿಂಕ್ ಆಗಿದ್ದರೆ ಸಾಕು. ಹಣ ಕಳುಹಿಸಲು ವಿಪಿಎ (Virtual Payment Address) ಅಥವಾ ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಅಗತ್ಯವಿಲ್ಲ. ಹಣ ವರ್ಗಾವಣೆಗೆ ನಿಮ್ಮಿಂದ ಹಣ ಪಡೆಯುವ ವ್ಯಕ್ತಿಯ ವ್ಯಕ್ತಿ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಆಗಿದ್ದು, ಪೇಮೆಂಟ್ ಆಪ್ಶನ್ ಎನೇಬಲ್ ಆಗಿರಬೇಕು.

ವಾಟ್ಸ್‌ಆ್ಯಪ್‌ ಪೇಮೆಂಟ್ ಎನೇಬಲ್ ಮಾಡಿ ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಹೇಗೆ?: ವಾಟ್ಸ್‌ಆ್ಯಪ್‌ ಓಪನ್ ಮಾಡಿ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ನಿಮಗೆ ನೋಟಿಫಿಕೇಶನ್ ಕೆಳಗೆ ಪೇಮೆಂಟ್ ಎಂಬ ಆಪ್ಶನ್ ಕಾಣಿಸುತ್ತದೆ.

ಅಲ್ಲಿ ಕ್ಲಿಕ್ ಮಾಡಿದಾಗ ಮುಂದಿನ ಆಯ್ಕೆ Accept and continue, ಇದನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು SMS ಮೂಲಕ verify ಮಾಡಿ ಎಂಬ ಆಯ್ಕೆ ಕಾಣುತ್ತದೆ. Verify Via SMS ಕ್ಲಿಕ್ ಮಾಡಿ, ತಕ್ಷಣವೇ ನಿಮಗೆ ಸಂದೇಶವೊಂದು ಬಂದು ನಿಮ್ಮ ಮೊಬೈಲ್ ಸಂಖ್ಯೆ verify ಆಗುತ್ತದೆ.

ಇದಾದ ನಂತರ UPI Supported Banks ಪಟ್ಟಿ ಕಾಣುತ್ತದೆ. ಇದರಲ್ಲಿ ನೀವು ಖಾತೆ ಹೊಂದಿರುವ ಬ್ಯಾಂಕ್‌ ಅನ್ನು ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಒಂದಕ್ಕಿಂತ ಹೆಚ್ಚು ಖಾತೆ ಲಿಂಕ್ ಆಗಿದ್ದರೆ, ನಿಮಗೆ ಇಷ್ಟವಿರುವ ಖಾತೆಯನ್ನು ಆಯ್ಕೆ ಮಾಡಬಹುದು. ಆಯ್ಕೆ ಮಾಡಿದ ಕೂಡಲೇ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ತೋರಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಆ ಆ್ಯಪ್ ಪಡೆದುಕೊಂಡ ಕೂಡಲೇ ಸೆಟ್ ಅಪ್ ಪೂರ್ಣಗೊಂಡಿದೆ ಎಂಬ ಸಂದೇಶ ಬರುತ್ತದೆ. ಒಂದು ವೇಳೆ ನಿಮಗೆ ಇನ್ನೊಂದು ಬ್ಯಾಂಕ್ ಖಾತೆಯನ್ನು ಸೇರಿಸಬೇಕೆಂದಿದ್ದರೆ Add New account ಅಪ್ಶನ್ ಕ್ಲಿಕ್ ಮಾಡಿ.

ಹಣ ಕಳಿಸುವುದು ಹೇಗೆ?: ಈ ರೀತಿ ಹಣ ಕಳಿಸಬೇಕಾದರೆ ಕಳಿಸಬೇಕಾದ ವ್ಯಕ್ತಿಯ ವಾಟ್ಸ್‌ಆ್ಯಪ್‌ ಸಂಖ್ಯೆ ನಿಮ್ಮಲ್ಲಿರಲೇಬೇಕು. ನಿಮ್ಮ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಓಪನ್ ಮಾಡಿ ಚಾಟ್‌ಬಾಕ್ಸ್‌ನಲ್ಲಿ ಅಟ್ಯಾಚ್‌ಮೆಂಟ್‌ ಕಳಿಸುವ ಚಿಹ್ನೆ ಮೇಲೆ ಕ್ಲಿಕ್ ಮಾಡಿದರೆ ಡಾಕ್ಯುಮೆಂಟ್ ಪಕ್ಕ ಪೇಮೆಂಟ್ ಎಂಬ ಅಪ್ಶನ್ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದ ಕೂಡಲೇ ಮುಂದಿನ ಸ್ಕ್ರೀನ್ ನಲ್ಲಿ ನೀವು ಹಣ ಕಳಿಸಲಿಚ್ಛಿಸುತ್ತಿರುವ ವ್ಯಕ್ತಿಯ ಹೆಸರು, ಅದರ ಕೆಳಗೆ ನಿಮ್ಮ ಬ್ಯಾಂಕ್ ಖಾತೆಯ ಹೆಸರು ಕಾಣಿಸುತ್ತದೆ.
ಅದರ ಕೆಳಗೆ ಎಷ್ಟು ಹಣ ಕಳಿಸುತ್ತೀರಿ ಎಂಬುದನ್ನು ನಮೂದಿಸಿ, Send ಬಟನ್ ಕ್ಲಿಕ್ ಮಾಡಿ ಮುಂದಿನ ಸ್ಕ್ರೀನ್‌ನಲ್ಲಿ ನಿಮ್ಮ UPI PIN ನಮೂದಿಸಿ ನಿಮ್ಮ ಖಾತೆಯಿಂದ ನೀವು ನಮೂದಿಸಿರುವ ದುಡ್ಡು ಅವರ ಖಾತೆಗೆ ವರ್ಗಾವಣೆ ಆಗಿರುತ್ತದೆ. ಚಾಟ್‌ಬಾಕ್ಸ್‌ನಲ್ಲಿ ನೀವು ಇಂತಿಷ್ಟು ಹಣ ಕಳಿಸಿದ್ದೀರಿ, complete ಎಂಬ ಸಂದೇಶ ಲಭಿಸುತ್ತದೆ.

ಒಂದು ವೇಳೆ ನೀವು ಹಣ ವರ್ಗಾವಣೆ ಮಾಡಲಿಚ್ಛಿಸಿರುವ ವ್ಯಕ್ತಿ ವಾಟ್ಸ್‌ಆ್ಯಪ್‌ ಪೇಮೆಂಟ್ ಎನೇಬಲ್ ಮಾಡಿಲ್ಲ ಎಂದಾದರೆ ನೀವು ಚಾಟ್ ಬಾಕ್ಸ್‌ನಲ್ಲಿ ಪೇಮೆಂಟ್ ಎಂದು ಕ್ಲಿಕ್ ಮಾಡಿದ ಕೂಡಲೇ ಅವರು ವಾಟ್ಸ್‌ಆ್ಯಪ್‌ ಪೇಮೆಂಟ್ ಎನೇಬಲ್ ಮಾಡಿಲ್ಲ, Notify ಎಂಬ ಸಂದೇಶ ಕಾಣಿಸುತ್ತದೆ. ಆ ಸಂದೇಶ ಕಳುಹಿಸಿದರೆ ಮೇಲೆ ತಿಳಿಸಿದ ವಿಧಾನ ಮೂಲಕ ಅವರೂ ಪೇಮೆಂಟ್ ಎನೇಬಲ್ ಮಾಡಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !