ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಸಣ್ಣ ಉದ್ದಿಮೆಗೆ ‘ಎಚ್‌ಪಿ ಸ್ಮಾರ್ಟ್‌ ಟ್ಯಾಂಕ್‌ ಪ್ರಿಂಟರ್ಸ್‌’

Last Updated 14 ಡಿಸೆಂಬರ್ 2022, 14:26 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಪಿ ಇಂಡಿಯಾ ಕಂಪನಿಯು ಮನೆಯಲ್ಲಿ ಬಳಸಬಹುದಾದ ಮತ್ತು ಸಣ್ಣ ಉದ್ದಿಮೆಗಳಿಗೆ ಸೂಕ್ತವಾದ ಸ್ಮಾರ್ಟ್‌ ಟ್ಯಾಂಕ್‌ ಪ್ರಿಂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪ್ರಿಂಟ್‌, ಸ್ಕ್ಯಾನ್‌, ಕಾಪಿ ಮತ್ತು ಫ್ಯಾಕ್ಸ್‌ ಆಯ್ಕೆಗಳನ್ನು ಇದು ಒಳಗೊಂಡಿದೆ. ಐ.ಡಿ. ಕಾರ್ಡ್‌ಗಳನ್ನು ಪ್ರಿಂಟ್‌ ಮಾಡಲು ಪ್ರತ್ಯೇಕವಾದ ಐ.ಡಿ. ಕಾಪಿ ಬಟನ್‌ ಹೊಂದಿದೆ. ಸ್ಮಾರ್ಟ್‌ ಆ್ಯಪ್‌ ಮತ್ತು ಸ್ಮಾರ್ಟ್‌ ಅಡ್ವಾನ್ಸ್‌ ಮೂಲಕ ಪ್ರಿಂಟರ್‌ ಸಂಪರ್ಕಿಸುವುದನ್ನು ಸುಲಭಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಎಚ್‌ಪಿಯ ಹೊಸ ಇಂಕ್‌ ಟ್ಯಾಂಕ್‌ ಪ್ರಿಂಟರ್‌ಗಳಲ್ಲಿ ಭರ್ತಿ ಮಾಡಿರುವ ಇಂಕ್‌ಗಳ ಮೂಲಕ 18 ಸಾವಿರ ಪೇಜ್‌ವರೆಗೆ ಬ್ಲಾಕ್‌ ಮತ್ತು 6 ಸಾವಿರ ಪೇಜ್‌ವರೆಗೆ ಕಲರ್‌ ಪ್ರಿಂಟ್‌ ಮಾಡಬಹುದು. ಈ ಪ್ರಿಂಟರ್‌ಗಳು ಆಟೊ ಆನ್‌/ಆಫ್‌ ವ್ಯವಸ್ಥೆ ಹೊಂದಿರುವುದರಿಂದ ವಿದ್ಯುತ್ ಬಳಕೆ ಕಡಿಮೆ ಆಗಲಿದೆ. ಸೈಬರ್ ದಾಳಿಯನ್ನು ತಡೆಯುವ ಸೆಲ್ಫ್‌ ಹೀಲಿಂಗ್‌ ವೈ–ಫೈ ವ್ಯವಸ್ಥೆಯನ್ನು ಇದು ಹೊಂದಿದೆ ಎಂದು ಕಂಪನಿಯು ಹೇಳಿದೆ.

ಇಂದಿನ ಹೈಬ್ರಿಡ್‌ ಜಗತ್ತಿನಲ್ಲಿ ಭಾರತೀಯರು ಮನೆಗೆ ಮತ್ತು ಸಣ್ಣ ಉದ್ದಿಮೆಗೆ ಬಳಸಲು, ಸುಲಭ ಮತ್ತು ಸ್ಮಾರ್ಟ್‌ ಆಗಿರುವ ಕಡಿಮೆ ಬೆಲೆಯ ಪ್ರಿಂಟರ್‌ಗಳನ್ನು ಬಯಸುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು HP Smart Tank ಪ್ರಿಂಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಸ್ಮಾರ್ಟ್‌ ವೈಶಿಷ್ಟ್ಯಗಳು ಮತ್ತು ಉತ್ತಮ ಸಂಪರ್ಕದೊಂದಿಗೆ ಈ ಸಾಧನಗಳು ಬಳಕೆದಾರರಿಗೆ ಹೆಚ್ಚು ಇಷ್ಟವಾಗಲಿವೆ ಎಂದು ಎಚ್‌ಪಿ ಇಂಡಿಯಾ ಮಾರ್ಕೆಟ್‌ನ ಹಿರಿಯ ನಿರ್ದೇಶಕ ಸುನಿಶ್‌ ರಾಘವನ್‌ ತಿಳಿಸಿದರು.

ಬೆಲೆ: HP Smart Tank 580-₹18,848. HP Smart Tank 520-₹15,980. HP Smart Tank 210-₹13,326

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT