ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಪಿಯಿಂದ ಆಲ್‌-ಇನ್‌-ಒನ್‌ ಪಿಸಿ

Last Updated 29 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಕಂಪ್ಯೂಟಿಂಗ್‌ ಅನುಭವವನ್ನು ಮರುವ್ಯಾಖ್ಯಾನಿಸುವ ನಿಟ್ಟಿನಲ್ಲಿ ಎಚ್‌ಪಿ ಕಂಪನಿಯು ಆಲ್‌ ಇನ್‌ ಒನ್ ಪಿಸಿಗಳನ್ನು ಬಿಡುಗಡೆ ಮಾಡಿದೆ. ಎಚ್‌ಪಿ ಎಐಒ 24 ಮತ್ತು ಎಚ್‌ಪಿ ಪೆವಿಲಿಯನ್‌ ಎಐಒ 27 ಪಿಸಿಗಳು ವಿಸ್ತಾರವಾದ ಡಿಸ್‌ಪ್ಲೇ ಮತ್ತು ಕಾಂಪ್ಯಾಕ್ಟ್‌ ಡಿಸೈನ್‌ ಹೊಂದಿವೆ.

ಈ ಸಾಧನಗಳು ದೀರ್ಘಾವಧಿಯ ಕೆಲಸ ಮತ್ತು ಕಲಿಕೆಗೆ ಪೂರಕವಾಗಿವೆ. ವಿದ್ಯಾರ್ಥಿಗಳಿಗೆ, ಮನೆಯಿಂದಲೇ ಕೆಲಸ ಮಾಡುತ್ತಿರುವ ವೃತ್ತಿಪರರಿಗೆ ಮತ್ತು ಮನೆಯಲ್ಲಿ ಮನರಂಜನೆಯನ್ನು ಬಯಸುವವರಿಗೆ ಸೂಕ್ತವಾಗಿವೆ. ವೈಫೈ, ಅಲೆಕ್ಸಾ ವಾಯ್ಸ್ ಅಸಿಸ್ಟೆನ್ಸ್‌ಗೆ ಬೆಂಬಲಿಸುತ್ತವೆ. ಎಚ್‌ಡಿ ಪಾಪ್-ಅಪ್ ಕ್ಯಾಮೆರಾ ಅಲ್ಲದೆ, ಡ್ಯುಯೆಲ್ ಮೈಕ್ರೊಫೋನ್‌ ಮತ್ತು ಇನ್-ಬಿಲ್ಟ್ ಸ್ಪೀಕರ್‌ಗಳನ್ನು ಒಳಗೊಂಡಿವೆ.

‘ಹಲವು ಕೆಲಸಗಳನ್ನು ಮಾಡಬಲ್ಲಂತಹ ಸಾಧನಗಳನ್ನು ಗ್ರಾಹಕರು ಬಯಸುತ್ತಿದ್ದಾರೆ. ಸುಲಭವಾಗಿ ಕಚೇರಿ ಕೆಲಸಗಳನ್ನು ಮಾಡುವಂತಹವು, ಮಕ್ಕಳ ಕಲಿಕೆಗೆ ಆರಾಮವಾಗಿರುವಂತಹ ಅಥವಾ ವಾರಾಂತ್ಯದಲ್ಲಿ ಮೂವಿಗಳನ್ನು ನೋಡಲು ಅನುಕೂಲವಾಗುವಂತಹ ಸಾಧನಗಳಿಗೆ ಬೇಡಿಕೆ ಇವೆ. ದೊಡ್ಡ ಸ್ಕ್ರೀನ್‌ಗಳು ಮತ್ತು ಎರ್ಗೋನೊಮಿಕ್ ಕಂಟ್ರೋಲ್‌ಗಳನ್ನು ಹೊಂದಿರುವ ಈ ಪಿಸಿಗಳು ಒಂದು ಕುಟುಂಬಕ್ಕೆ ಹೇಳಿ ಮಾಡಿಸಿದ್ದಾಗಿವೆ. ಹಲವು ಅಪ್‌ಗ್ರೇಡೆಡ್‌ ಆಯ್ಕೆಗಳ ಜತೆಗೆ ಬಳಕೆದಾರರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಗರಿಷ್ಠ ಮಟ್ಟದಲ್ಲಿ ಕಾರ್ಯವನ್ನು ನೀಡುವಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ’ ಎಂದು ಎಚ್‌ಪಿ ಇಂಡಿಯಾದ ಮಾರ್ಕೆಟ್‌ನ ಪರ್ಸನಲ್ ಸಿಸ್ಟಮ್ಸ್‌ ವಿಭಾಗದ ಹಿರಿಯ ನಿರ್ದೇಶಕ ವಿಕ್ರಂ ಬೇಡಿ ತಿಳಿಸಿದ್ದಾರೆ.

ಎಚ್‌ಪಿ ಪವಿಲಿಯನ್‌ 27 ಟಚ್‌ ಬೆಲೆ ₹ 99,999 ರಿಂದ ಆರಂಭವಾಗಲಿದೆ. ಇದರಲ್ಲಿ ಇಂಟೆಲ್‌ ಕೋರ್‌ ಐ5 ಪ್ರೊಸೆಸರ್‌ ಇದೆ. ಎಚ್‌ಪಿ ಎಐಒ 24 ಪಿಸಿಯಲ್ಲಿ ಇಂಟೆಲ್‌ ಕೋರ್‌ ಐ5 ಕ್ವಾಡ್‌ ಕೋರ್‌ ಪ್ರೊಸೆಸರ್‌ ಇದ್ದು ಬೆಲೆ ₹ 64,999ರಿಂದ ಆರಂಭ. ಐ3 ಡ್ಯುಯಲ್‌ ಕೋರ್‌ ಪ್ರೊಸೆಸರ್ ಹೊಂದಿರುವ ಎಚ್‌ಪಿ ಪೆವಿಲಿಯನ್‌ ಪಿಸಿ ಬೆಲೆ ₹ 49,999ರಿಂದ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT