ಐಫೋನ್, ಆಂಡ್ರಾಯ್ಡ್‌: ಸಂದೇಶಗಳ ಸದ್ದಡಗಿಸಿ!

7

ಐಫೋನ್, ಆಂಡ್ರಾಯ್ಡ್‌: ಸಂದೇಶಗಳ ಸದ್ದಡಗಿಸಿ!

Published:
Updated:

ಇಡೀ ವಿಶ್ವವೇ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಈ ಹೊತ್ತಿನಲ್ಲಿ, ಮೊಬೈಲ್‌ ಪರದೆಗೂ ಕ್ಷಣವೂ ಬಿಡುವಿಲ್ಲದ ಕೆಲಸ. ಹಗಲೂ ರಾತ್ರಿ ಒಂದೇ ಸಮನೆ ಈ ಪರದೆಯಲ್ಲಿ ಪ್ರತ್ಯಕ್ಷವಾಗುವ ಗ್ರೂಪ್‌ ಮೆಸೇಜ್‌ಗಳ ನೋಟಿಫಿಕೇಷನ್‌ಗಳು ಮತ್ತು ಇದರ ಎಚ್ಚರಿಕೆಯ ಸದ್ದು ಕೆಲವರ ನೆಮ್ಮದಿ ಕೆಡಿಸಿರಬಹುದು. ತುರ್ತು ಸಂಭಾಷಣೆಯಲ್ಲಿ ತೊಡಗಿರುವಾಗ, ಅಥವಾ ಕುಟುಂಬ ಸದಸ್ಯರ ಜತೆಗೆ ಮಾತುಕತೆಯಲ್ಲಿ ತೊಡಗಿರುವಾಗ, ನಿದ್ರೆ ಮಾಡುತ್ತಿರುವಾಗ ಈ ಸದ್ದು ಕಿರಿಕಿರಿ ಉಂಟು ಮಾಡಬಹುದು. ಕೆಲವೊಮ್ಮೆ ಮುಜುಗರಕ್ಕೂ ಈಡು ಮಾಡಿರಬಹುದು. ಇಂತಹ ಸಂದೇಶಗಳ ‘ಸದ್ದಡಗಿಸಿಡಲು’ ಇಲ್ಲಿದೆ ಉಪಾಯ.

ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ಬಳಕೆದಾರರು ಗ್ರೂಪ್‌ ಮೆಸೇಜ್‌ಗಳ ನೋಟಿಫಿಕೇಷನ್‌ಗಳನ್ನು ‘ಮ್ಯೂಟ್‌’ ಆಯ್ಕೆಯಲ್ಲಿಡುವ ಮೂಲಕ ಇತರರಿಗೆ ಹಾಗೂ ತಮಗೆ ಆಗುವ ಕಿರಿಕಿರಿ ತಪ್ಪಿಸಬಹುದು. ಈ ಎರಡೂ ಫೋನ್‌ಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಆಯ್ಕೆ ಇದೆ. ಬಳಕೆದಾರ ತನಗೆ ಆಸಕ್ತಿ ಇಲ್ಲದ ಗ್ರೂಪ್‌ಗಳ ಮೆಸೇಜ್‌ಗಳ ‘ಸದ್ದು ಅಡಗಿಸಿ’ ಇಡಬಹುದು. ಇದರಿಂದ ಈ ಸಂದೇಶಗಳು ಬಂದಾಗೊಮ್ಮೆ ಒಂದೇ ಸಮನೆ ಫೋನ್‌ ಸದ್ದು ಮಾಡುವುದು ತಪ್ಪುತ್ತದೆ. ಬಳಕೆದಾರ ತನಗೆ ಬಿಡುವುದಿದ್ದಾಗ ಈ ಮಸೇಜ್‌ಗಳನ್ನು ಓದಿಕೊಳ್ಳಬಹುದು ಅಥವಾ ಓದದೆಯೇ ಡಿಲೀಟ್‌ ಮಾಡಬಹುದು.

ಐಫೋನ್‌ ಬಳಸುತ್ತಿದ್ದರೆ, ಗ್ರೂಪ್‌ ಮೆಸೇಜ್‌ ಆಯ್ಕೆಗೆ ಹೋಗಿ, ಸ್ಕ್ರೀನ್‌ನ ಬಲತುದಿಯಲ್ಲಿರುವ ‘ಐ’ ಐಕಾನ್‌ ಮೇಲೆ ಕ್ಲಿಕ್‌ ಮಾಡಿ, ಅದರಲ್ಲಿನ ‘ಹೈಡ್‌ ಆಲರ್ಟ್ಸ್‌’ ಗುಂಡಿ ಒತ್ತಿದರೆ ಮತ್ತೆ ನಿಮಗೆ ನೋಟಿಫಿಕೇಷನ್‌ ಸದ್ದಿನ ಕಿರಿಕಿರಿ ಇರುವುದಿಲ್ಲ. ಐಫೋನ್‌ ಬಳಕೆದಾರರಿಗೆ ಇನ್ನೊಂದು ಆಯ್ಕೆಯೂ ಇದೆ. ಅಂದರೆ ಐಫೋನ್‌ನಿಂದ ಬರುವ ಗ್ರೂಪ್‌ ಮೆಸೇಜಸ್‌ಗಳನ್ನು (ಐ ಮಸೇಜಸ್‌–- ಬ್ಲೂ ಬಬಲ್‌) ಸಂಪೂರ್ಣವಾಗಿ ರದ್ದುಪಡಿಸಲು ಆಯ್ಕೆಯೊಂದಿದೆ. ಸಾಮಾನ್ಯವಾಗಿ ಐ ಸಂದೇಶಗಳು ಮೂರು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳ ಗ್ರೂಪ್‌ಗಳ ನಡುವೆ ರವಾನೆಯಾಗುತ್ತವೆ. ಐಫೋನ್‌ನ ‘ಐ’ ಐಕಾನ್‌ ಮೇಲೆ ಕ್ಲಿಕ್‌ ಮಾಡಿ, ಬಲ ತುದಿಯಲ್ಲಿರುವ ಆಯ್ಕೆಗೆ ಹೋಗಿ, ‘ Leave This Conversation’ ಆಯ್ಕೆಯನ್ನು ಚಾಲನೆಯಲ್ಲಿಟ್ಟರೆ ಇದನ್ನು ತಪ್ಪಿಸಬಹುದು.

ಆಂಡ್ರಾಯ್ಡ್‌ ಫೋನ್‌ ಬಳಸುತ್ತಿದ್ದರೆ, ಈ ಆಯ್ಕೆ ಸ್ಥಗಿತಗೊಳಿಸುವುದು ಸ್ವಲ್ಪ ವ್ಯತ್ಯಾಸವಿದೆ. ಗ್ರೂಪ್‌ ಮೆಸೇಜಸ್‌ ಆಯ್ಕೆಗೆ ಹೋಗಿ, ಸ್ಕ್ರೀನ್‌ನ ಬಲತುದಿಯಲ್ಲಿರುವ ‘ಪೀಪಲ್‌ ಆ್ಯಂಡ್‌ ಆಪ್ಶನ್ಸ್‌’ (People & Options) ಆಯ್ಕೆಯನ್ನು ಒತ್ತಿ, ಅದರಲ್ಲಿ ‘ನೋಟಿಫಿಕೇಷನ್‌’ ಅನ್ನು ಸ್ಥಗಿತಗೊಳಿಸಬೇಕು.

ವಾಟ್ಸ್‌ಆ್ಯಪ್‌ನಲ್ಲಿ ಸಂಬಂಧಿಸಿದ ಸಂದೇಶ ಅಥವಾ ಗ್ರೂಪ್‌ಗೆ ಹೋಗಿ, ಮೆನು ಬಟ್‌ನಲ್ಲಿ ‘ಗ್ರೂಪ್‌ ಇನ್ಫೊ’ ಆಯ್ಕೆಗೆ ಹೋಗಿ, ನೋಟಿಫಿಕೇಷನ್‌ಗಳನ್ನು ‘ಟರ್ನ್‌ ಆಫ್‌’ ಮಾಡಿ ಇಡಬಹುದು. ಅಥವಾ ಸಂಬಂಧಿಸಿದ ಗ್ರೂಪ್‌ನಿಂದಲೇ ಹೊರಬರಬಹುದು.

ಫೇಸ್‌ಬುಕ್‌ ಮೆಸೆಂಜರ್‌ ಸೇವೆ ಬಳಸುತ್ತಿದ್ದರೆ, ಸಂದೇಶಗಳ ಸೆಟ್ಟಿಂಗ್ಸ್‌ಗೆ ಹೋಗಿ ನೋಟಿಫಿಕೇಷನ್‌ ಸ್ಥಗಿತ ಮಾಡಬಹುದು. ಅಥವಾ ಈ ಗ್ರೂಪ್‌ನಿಂದ ಶಾಶ್ವತವಾಗಿ ಹೊರಬರಬಹುದು. ‘ಮೆಸೇಜ್‌ ರಿಕ್ವೆಸ್ಟ್ ಕಳುಹಿಸುವ ಗ್ರೂಪ್‌ಗಳನ್ನು ನಿರ್ಲಕ್ಷ್ಯ ಮಾಡಲೂ ಇದರಲ್ಲಿ ಅವಕಾಶ ಇದೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !