ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋಮ್ಯಾಕ್ಸ್ ಇನ್1 ಸ್ಮಾರ್ಟ್‌ಫೋನ್ ಬಿಡುಗಡೆ: ಏನಿದರ ವಿಶೇಷ?

Last Updated 19 ಮಾರ್ಚ್ 2021, 10:26 IST
ಅಕ್ಷರ ಗಾತ್ರ

ನವದೆಹಲಿ: ಮೈಕ್ರೋಮ್ಯಾಕ್ಸ್ ಇ‌ನ್‌ಫೊಮ್ಯಾಟಿಕ್ಸ್ ಲಿಮಿಟೆಡ್ ಕಂಪನಿ ಇನ್1 ಸರಣಿಯ ನೂತನ ಸ್ಮಾರ್ಟ್‌ಫೋನ್‌ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ವರ್ತಮಾನದ ಅಗತ್ಯಕ್ಕೆ‌ ತಕ್ಕಂತೆ ಅಭಿವೃದ್ಧಿಪಡಿಸಲಾಗಿರುವ 'ಇನ್1' ಸ್ಮಾರ್ಟ್‌ಫೋನ್, ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲೇ ತಯಾರಿಸಿದ ಸ್ಮಾರ್ಟ್‌ಫೋನ್ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ಏನೇನು ಫೀಚರ್ಸ್?

ಮೈಕ್ರೋಮ್ಯಾಕ್ಸ್ ಇನ್1 ಸ್ಮಾರ್ಟ್‌ಫೋನ್ 6.67 ಎಫ್ಎಚ್‌ಡಿ + ಪಂಚ್-ಹೋಲ್ ಡಿಸ್‌ಪ್ಲೇ, 48 ಮೆಗಾ ಪಿಕ್ಸೆಲ್ ಟ್ರಿಪಲ್ ಎಐ ಕ್ಯಾಮೆರಾ, ಪವರ್‌ಫುಲ್ ಮೀಡಿಯಾಟೆಕ್ ಹಿಲಿಯೊ ಜಿ80 ಪ್ರೊಸೆಸರ್, ಆ್ಯಂಡ್ರಾಯ್ಡ್ ಓಎಸ್ ಒಳಗೊಂಡಿರಲಿದೆ.

ಮೆಮೊರಿ ಎಷ್ಟು?

ಇನ್1 ಸರಣಿಯಲ್ಲಿ ಎರಡು ಆವೃತ್ತಿ ಲಭ್ಯವಿವೆ. ಮೊದಲನೆಯದು 4 GB RAM, 64 GB ಮೆಮೊರಿ ಹೊಂದಿದ್ದು, ಇನ್ನೊಂದು 6 GB RAM ಮತ್ತು 128 GB ಮೆಮೊರಿ ಹೊಂದಿದೆ. ನೇರಳೆ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿವೆ.\

ಬೆಲೆ‌ ವಿವರ

4 GB RAM, 64 GB ಮೆಮೊರಿಯ ಇನ್1 ಸ್ಮಾರ್ಟ್‌ಫೋನ್ ಬೆಲೆ ₹10,499 ಹಾಗೂ 6 GB RAM ಮತ್ತು 128 GB ಮೆಮೊರಿಯ ಇನ್1 ಸ್ಮಾರ್ಟ್‌ಫೋನ್ ಬೆಲೆ ₹11,999 ಇರಲಿದೆ.

ಎಲ್ಲಿ, ಯಾವಾಗ ಖರೀದಿಗೆ ಲಭ್ಯ?

ಮೈಕ್ರೋಮ್ಯಾಕ್ಸ್ ಇನ್‌ಫೊ ಡಾಟ್ ಕಾಂ (micromaxinfo.com) ಹಾಗೂ ಫ್ಲಿಪ್‌ಕಾರ್ಟ್‌ಗಳಲ್ಲಿ ಮಾರ್ಚ್ 26ರ ಮಧ್ಯಾಹ್ನ 12 ಗಂಟೆಯಿಂದ ಇನ್1 ಸ್ಮಾರ್ಟ್‌ಫೋನ್ ಮಾರಾಟ ಆರಂಭವಾಗಲಿದೆ.

₹500 ರಿಯಾಯಿತಿ

ಎರಡೂ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗೆ ಆರಂಭಿಕ‌ ಕೊಡುಗೆಯಾಗಿ ₹500 ರಿಯಾಯಿತಿ ಘೋಷಿಸಲಾಗಿದೆ. ಇದರಿಂದಾಗಿ 4 GB RAM, 64 GB ಮೆಮೊರಿಯ ಇನ್1 ಸ್ಮಾರ್ಟ್‌ಫೋನ್ ₹9999ಕ್ಕೆ ದೊರೆಯಲಿದ್ದು, 6 GB RAM ಮತ್ತು 128 GB ಮೆಮೊರಿಯ ಇನ್1 ಸ್ಮಾರ್ಟ್‌ಫೋನ್ ₹11,499ಕ್ಕೆ ದೊರೆಯಲಿದೆ. ಸೀಮಿತ ಅವಧಿಗೆ ಮಾತ್ರ ಈ ರಿಯಾಯಿತಿ‌ ದೊರೆಯಲಿದೆ.

ಇನ್1 ವೈಶಿಷ್ಟ್ಯ ಗಳು...

* 48 ಮೆಗಾಪಿಕ್ಸೆಲ್ ಎಐ ತ್ರಿವಳಿ ಹಿಂಬದಿ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಆಫ್ ಫೀಲ್ಡ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೊ ಕ್ಯಾಮರಾ ಹೊಂದಿದೆ. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದ್ದು ಗುಣಮಟ್ಟದ ಸೆಲ್ಫಿ ಚಿತ್ರಗಳನ್ನು ಸೆರೆಹಿಡಿಯಲು ಅನುಕೂಲಕರವಾಗಿದೆ. ಅಟೋಮ್ಯಾಟಿಕ್‌ ಬ್ರೈಟ್‌ನೆಸ್ ಹೊಂದಾಣಿಕೆ, ಬ್ಯಾಕ್‌ಗ್ರೌಂಡ್ ಬ್ಲರ್ ಇತ್ಯಾದಿ ಆಯ್ಕೆಗಳನ್ನೂ ನೀಡಲಾಗಿದೆ.

* 80 ಡಿಗ್ರಿ ವಿವಿಂಗ್ ಆ್ಯಂಗಲ್, 20:9 ಸ್ಕ್ರೀನ್ ರೇಶಿಯೊ, ಶೇ 91.4 ಸ್ಕ್ರೀನ್ ಟು ಬಾಡಿ ರೇಶಿಯೊ ಹೊಂದಿದೆ.

* ಕಾರ್ಟೆಕ್ಸ್-ಎ75 ಹಾಗೂ ಎ55 ಸಿಪಿಯು ಜತೆಗೆ ಮೀಡಿಯಾಟೆಕ್ ಹಿಲಿಯೊ ಜಿ80 ಪ್ರೊಸೆಸರ್ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಉತ್ತಮ ಗೇಮಿಂಗ್ ಅನುಭವ ನೀಡಬಲ್ಲದು ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ.

* ಶೇ 100ರಷ್ಟು ಭಾರತದಲ್ಲೇ ತಯಾರಿಸಲಾಗಿರುವ ಇನ್1 ಸ್ಮಾರ್ಟ್‌ಫೋನ್ 5000 ಎಂಎಎಚ್ ಬ್ಯಾಟರಿ ಒಳಗೊಂಡಿದೆ. ಎರಡು ದಿನಗಳವರೆಗೆ ಚಾರ್ಜ್ ಉಳಿಯಲಿದ್ದು 18ವ್ಯಾಟ್ ಫಾಸ್ಟ್ ಚಾರ್ಜರ್ ಸಹ ಒಳಗೊಂಡಿದೆ.

* 9ಎಂಎಂ ತಿಕ್‌ನೆಸ್, ಮೆಟಾಲಿಕ್ ಫಿನಿಶ್ ಜತೆ ಉತ್ತಮ ವಿನ್ಯಾಸ ಹೊಂದಿರುವ ಇನ್1 ಸ್ಮಾರ್ಟ್‌ಫೋನ್ ನೋಡಲು ಆಕರ್ಷಕವಾಗಿದೆ‌ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT