ನವದೆಹಲಿ: ಜಗತ್ತಿನಲ್ಲಿ ಅತಿಹೆಚ್ಚು ಸ್ಪ್ಯಾಮ್ ಕಾಲ್ಗಳು ಬರುವ ದೇಶಗಳ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನದಲ್ಲಿದೆ ಎಂದು ಟ್ರೂಕಾಲರ್ ವರದಿ ತಿಳಿಸಿದೆ.

ಜಾಗತಿಕವಾಗಿ ಟ್ರೂಕಾಲರ್ಗೆ 50 ಕೋಟಿ ಬಳಕೆದಾರರಿದ್ದಾರೆ, ಅವರಿಂದ ಮಾಹಿತಿ ಸಂಗ್ರಹಿಸಿ ಈ ವರದಿ ತಯಾರಿಸಲಾಗಿದೆ.

ಈ ಪಟ್ಟಿಯಲ್ಲಿ ಇಂಡೋನೇಷ್ಯಾ ಮೊದಲ ಸ್ಥಾನದಲ್ಲಿದೆ. ಚಿಲಿ, ವಿಯೆಟ್ನಾಂ ಹಾಗೂ ಬ್ರೆಜಿಲ್ ನಂತರದ ಸ್ಥಾನದಲ್ಲಿವೆ.

2025ರಲ್ಲಿ ಟ್ರೂಕಾಲರ್, ಜಾಗತಿಕವಾಗಿ 6,800 ಕೋಟಿ ನಕಲಿ ಮತ್ತು ಸ್ಪ್ಯಾಮ್ ಕಾಲ್ಗಳನ್ನು ಪತ್ತೆಹಚ್ಚಿದೆ. ಅದರಲ್ಲಿ ಹೆಚ್ಚಿನವು ವ್ಯಾಪಾರ, ಮಾರಾಟ ಮತ್ತು ಟೆಲಿ ಮಾರ್ಕೆಟಿಂಗ್ ಕರೆಗಳಾಗಿವೆ ಎಂದು ಹೇಳಿದೆ.

ಭಾರತದಲ್ಲಿ ಶೇ 66ರಷ್ಟು ಸ್ಪ್ಯಾಮ್ ಕರೆಗಳು ವಾಣಿಜ್ಯ ಉದ್ದೇಶವನ್ನು ಹೊಂದಿವೆ. ಶೇ 36ರಷ್ಟು ಟೆಲಿ ಮಾರ್ಕೆಟಿಂಗ್, ಶೇ 18ರಷ್ಟು ಹಣಕಾಸು ಸೇವೆ ಹಾಗೂ ಶೇ 12ರಷ್ಟು ಕಾಲ್ಗಳು ಬೇರೆ ಸ್ಪ್ಯಾಮ್ ಚಟುವಟಿಕೆಗಳಿಗೆ ಸೇರಿವೆ ಎಂದು ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.