ಮಂಗಳವಾರ, ಸೆಪ್ಟೆಂಬರ್ 22, 2020
26 °C
5 ಕೋಟಿ ಗ್ರಾಹಕರ ಗಡಿ ದಾಟಿದ ಐಟೆಲ್ ಮೊಬೈಲ್

₹4,999ಕ್ಕೆ ಐಟೆಲ್‌ ಎ46 ಸ್ಮಾರ್ಟ್‌ಫೋನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಐಟೆಲ್‌ ಮೊಬೈಲ್‌ ತಯಾರಿಕಾ ಕಂಪನಿಯು ಭಾರತಕ್ಕೆ ಪ್ರವೇಶಿಸಿದ ಮೂರು ವರ್ಷಗಳಲ್ಲಿಯೇ 5 ಕೋಟಿಗೂ ಅಧಿಕ ಗ್ರಾಹಕರನ್ನು ಸಂಪಾದಿಸಿಕೊಂಡಿದೆ.

‘ಸದೃಢವಾದ ವಿತರಣಾ ಜಾಲ, ಉತ್ತಮ ಸೇವಾ ಬೆಂಬಲ ಮತ್ತು ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಐಟೆಲ್‌ನ ಮಾತೃಸಂಸ್ಥೆ ಟ್ರಾನ್ಶನ್‌ ಇಂಡಿಯಾದ ಸಿಇಒ ಅರಿಜಿತ್ ತಲಪಾತ್ರ ಅವರು ತಿಳಿಸಿದ್ದಾರೆ.

ಈ ಸಂಭ್ರಮ ಮತ್ತು ಹಬ್ಬದ ಕೊಡುಗೆಯಾಗಿ ಐಟೆಲ್ ಇದೀಗ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದೆ. ಗ್ರಾಹಕರು ಕೇವಲ ₹4,999ಕ್ಕೆ ಹೊಸ ಮತ್ತು 2ಜಿಬಿ+16 ಜಿಬಿಯಿಂದ ‌2ಜಿಬಿ+32ಜಿಬಿಗೆ ಮೇಲ್ದರ್ಜೆಗೇರಿಸಿದ ಐಟೆಲ್‌ ಎ46 ಸ್ಮಾರ್ಟ್‌ಫೋನ್ ಖರೀದಿಸಬಹುದು. ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ ಆಕರ್ಷಕವಾದ ಒರೈಮೊ ಎಚ್‌ಡಿ ಇಯರ್‌ಫೋನ್ ಮತ್ತು ಸಿಲಿಕಾನ್ ಬ್ಯಾಕ್ ಕವರ್ ಉಚಿತವಾಗಿ ಸಿಗಲಿದೆ.

‘ಗ್ರಾಮಾಂತರ ಮತ್ತು ಅರೆ ಪಟ್ಟಣದ ಮಾರುಕಟ್ಟೆಗಳಲ್ಲಿ ಮುಂಚೂಣಿಯಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಐಟೆಲ್‌ ಕೂಡಾ ಒಂದಾಗಿದೆ. ಆಫ್‌ಲೈನ್ ಚಾನೆಲ್‌ಗಳ ಮೂಲಕ ವಿತರಣೆ ಹೆಚ್ಚಿಸಲಾಗುತ್ತಿದೆ. ಹೀಗಾಗಿ ದೇಶದಾದ್ಯಂತ 1 ಲಕ್ಷಕ್ಕೂ ಅಧಿಕ ರಿಟೇಲ್‌ರಗಳನ್ನು ‌ತಲುಪಲು ಸಾಧ್ಯವಾಗಿದೆ. ಒಂದು ಸಾವಿರಕ್ಕೂ ಅಧಿಕ ಪಾಲುದಾರರನ್ಜು ಹೊಂದಿದ್ದು, 950ಕ್ಕೂ ಅಧಿಕ ಸರ್ವೀಸ್ ಸೆಂಟರ್‌ಗಳನ್ನು ಹೊಂದಿದ್ದೇವೆ.

‘ಕರ್ನಾಟಕ ನಮಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನಮ್ಮ ವಿತರಣಾ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡಲು ಗಣನೀಯ ಪ್ರಮಾಣದ ಹೂಡಿಕೆ ಮಾಡುತ್ತಿದ್ದೇವೆ. ಸದ್ಯಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 35 ವಿತರಕರು, 47 ಸರ್ವೀಸ್ ಟಚ್ ಪಾಯಿಂಟ್‌ಗಳು ಮತ್ತು 3,100 ರಿಟೇಲರ್‌ಗಳನ್ನು ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

ಉನ್ನತೀಕರಿಸಲಾಗಿರುವ ಐಟೆಲ್ ಎ46 ಸ್ಮಾರ್ಟ್‌ಫೋನ್‌ನಲ್ಲಿ ಸುಧಾರಿತ ಎಐ ಡ್ಯುಯಲ್ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್, ಡ್ಯುಯಲ್ 4ಜಿ ವೋಲ್ಟ್‌, ಆಂಡ್ರಾಯ್ಡ್‌ 9 ಒಎಸ್ ಮತ್ತು 2ಜಿಬಿ ರ‍್ಯಾಮ್ ಮತ್ತು 32ಜಿಬಿ ಇಂಟರ್‌ನಲ್ ಸ್ಟೊರೇಜ್‌ ಸೌಲಭ್ಯಗಳನ್ನು ಹೊಂದಿದೆ. 128 ಜಿಬಿವರೆಗೆ ವಿಸ್ತರಣೆಗೂ ಅವಕಾಶ ಇದೆ. ದೀಪಾವಳಿ ಹಬ್ಬದ ಕೊಡುಗೆಯಾಗಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು