ಭಾನುವಾರ, ಡಿಸೆಂಬರ್ 15, 2019
26 °C

ಆನ್‌ಲೈನ್‌ನಲ್ಲಿ ನೌಕರಿ ಹುಡುಕುವವರಿಗೆ...

-ರಶ್ಮಿ ಕೆ. Updated:

ಅಕ್ಷರ ಗಾತ್ರ : | |

ಆನ್‌ಲೈನ್‌ನಲ್ಲಿ ನೌಕರಿ ಹುಡುಕುವವರಿಗೆ...

ಶಿಕ್ಷಣ ಮುಗಿಸಿದ ನಂತರ ಉದ್ಯೋಗವೊಂದು ಬೇಕೇ ಬೇಕು. ಉದ್ಯೋಗವಕಾಶ ಎಂಬ ಪದ ಕಂಡರೆ ಸಾಕು, ಒಂದು ಬಾರಿ ಟ್ರೈ ಮಾಡಿ ನೋಡೋಣ ಎಂದು ಮನಸ್ಸು ಹಂಬಲಿಸುತ್ತದೆ. ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುವಾಗಲೂ ಅಷ್ಟೇ, ಸಿಕ್ಕ ಸಿಕ್ಕ ಲಿಂಕ್‌ಗಳನ್ನು ಕ್ಲಿಕ್ ಮಾಡಿ ರೆಸ್ಯೂಮೆ ಕಳಿಸುವುದು ಒಳ್ಳೆಯದಲ್ಲ. ಆನ್‌ಲೈನ್ ನಲ್ಲಿ ಉದ್ಯೋಗ ಹುಡುಕುವಾಗ ಗಮನಿಸಬೇಕಾದ ಅಂಶಗಳು ಇಲ್ಲಿವೆ.

ನೀವು ಬಯಸುವ ಉದ್ಯೋಗ

ನೀವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೀರಿ. ಆ ಕ್ಷೇತ್ರದಲ್ಲಿ ಮಾತ್ರ ಉದ್ಯೋಗ ಹುಡುಕಿ. ಅದೇ ಕ್ಷೇತ್ರದಲ್ಲಿ ಬೇರೆ ಬೇರೆ ರೀತಿಯ ಕೆಲಸಗಳು ಇರಬಹುದು. ನಿಮ್ಮ ಕಲಿಕೆ ಮತ್ತು ಜ್ಞಾನ ಯಾವ ವಿಷಯದಲ್ಲಿ ಇದೆಯೋ, ನಿಮ್ಮ ಆಸಕ್ತಿ ಯಾವುದರಲ್ಲಿದೆಯೋ ಅದನ್ನು ಪರಿಗಣಿಸಿ ಕೆಲಸ ಹುಡುಕಿ. ಇಲ್ಲಿ ಕೆಲಸ ಹುಡುಕುವಾಗ ಕೀ ವರ್ಡ್ ತುಂಬಾ ಮುಖ್ಯ.

ರೆಸ್ಯೂಮೆ ಅಪ್ ಲೋಡ್ ಮಾಡಿ

Naukri, monster, Indeed ಮೊದಲಾದ ಜಾಬ್‌ವೆಬ್ ಸೈಟ್‌ಗಳಿಗೆ ಲಾಗಿನ್ ಆಗಿ ರೆಸ್ಯೂಮೆ ಅಪ್‌ಲೋಡ್‌ ಮಾಡಿ. ಗಮನಿಸಿ ಜಾಬ್ ವೆಬ್‌ಸೈಟ್‌ಗಳಲ್ಲಿ ನಿಮ್ಮ ರೆಸ್ಯೂಮೆ ಅಪ್‌ಲೋಡ್ ಮಾಡುವ ಮುನ್ನ ಆ ವೆಬ್‌ಸೈಟ್‌ ಬಗ್ಗೆಯೂ ತಿಳಿದುಕೊಳ್ಳಿ. ಸಿಕ್ಕ ಸಿಕ್ಕ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಿ ರೆಸ್ಯೂಮ್ ಅಪ್‌ಲೋಡ್ ಮಾಡಬೇಡಿ.

ರೆಸ್ಯೂಮೆ ಉತ್ತಮವಾಗಿರಲಿ

ಜಾಬ್ ವೆಬ್‌ಸೈಟ್‌ನಲ್ಲಿ ನೀವು ಅಪ್‌ಲೋಡ್ ಮಾಡುವ ರೆಸ್ಯೂಮೆ ಉತ್ತಮವಾಗಿರಲಿ. ರೆಸ್ಯೂಮೆ ಹೇಗೆ ಬರೆಯಬೇಕು, ಯಾವ ಉದ್ಯೋಗಕ್ಕೆ ಯಾವ ರೀತಿಯ ರೆಸ್ಯೂಮೆ ಇರಬೇಕು ಎಂಬುದರ ಬಗ್ಗೆ ಗೂಗಲಿಸಿದರೆ ಮಾಹಿತಿ ಸಿಗುತ್ತದೆ. ಈ ರೀತಿ ರೆಸ್ಯೂಮೆ ತಯಾರಿಸಿ ಅಪ್‌ಲೋಡ್ ಮಾಡಿ. ನಿಮಗೆ ಈಗಾಗಲೇ ಕೆಲಸ ಮಾಡಿ ಅನುಭವವಿದ್ದರೆ ಅದನ್ನು ರೆಸ್ಯೂಮೆಯಲ್ಲಿ ಬರೆಯುವುದನ್ನು ಮರೆಯಬೇಡಿ.

ಸಾಮಾಜಿಕ ಮಾಧ್ಯಮ ಬಳಸಿಕೊಳ್ಳಿ

ಜಾಬ್ ವೆಬ್‌ಸೈಟ್‌ಗಳಲ್ಲಿ ಮಾತ್ರ ಅಲ್ಲ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್‌ನಲ್ಲಿಯೂ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡುವವರಿದ್ದಾರೆ. ನಿಮ್ಮ ಸ್ನೇಹಿತರ ಬಳಗದಲ್ಲಿರುವವರೇ ಇಂಥಾ ಉದ್ಯೋಗವಕಾಶಗಳಿದ್ದರೆ ಮಾಹಿತಿ ನೀಡಿದಾಗ, ಈ ಸಂಸ್ಥೆ, ಉದ್ಯೋಗದ ರೀತಿ ಬಗ್ಗೆ ತಿಳಿದುಕೊಳ್ಳುವುದು ಸುಲಭವಾಗುತ್ತದೆ. Linkedin ವೆಬ್‌ಸೈಟ್‌ಗೆ ಲಾಗಿನ್ ಆಗಿ ಅಲ್ಲಿಯೂ ನೀವು ಸಂಪರ್ಕ ಬೆಳೆಸಿಕೊಂಡರೆ ಇನ್ನೂ ಉತ್ತಮ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು