ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೊದಿಂದ ಅಗ್ಗದ 5ಜಿ ಸ್ಮಾರ್ಟ್‌ಫೋನ್‌?

Last Updated 18 ಅಕ್ಟೋಬರ್ 2020, 14:12 IST
ಅಕ್ಷರ ಗಾತ್ರ

ನವದೆಹಲಿ: ₹ 5 ಸಾವಿರಕ್ಕಿಂತ ಕಡಿಮೆ ಮೊತ್ತದ, 5ಜಿ ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆ ರಿಲಯನ್ಸ್ ಜಿಯೊ ಕಂಪನಿಗೆ ಇದೆ. ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಂತರದ ದಿನಗಳಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆಯನ್ನು ₹ 2,500ರಿಂದ ₹ 3,000ಕ್ಕೆ ತಗ್ಗಿಸುವ ಆಲೋಚನೆ ಕೂಡ ಕಂಪನಿಗೆ ಇದೆ.

‘ಈ ಸ್ಮಾರ್ಟ್‌ಫೋನ್‌ ಮೂಲಕ, 2ಜಿ ಸೌಲಭ್ಯದ ಫೀಚರ್ ಫೋನ್‌ ಬಳಸುತ್ತಿರುವ 20 ಕೋಟಿಯಿಂದ 30 ಕೋಟಿ ಗ್ರಾಹಕರನ್ನು ನಮ್ಮತ್ತ ಸೆಳೆಯುವ ಉದ್ದೇಶ ಇದೆ’ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಯೋಜನೆಯ ಬಗ್ಗೆ ಜಿಯೊ ಕಂಪನಿಯು ಪ್ರತಿಕ್ರಿಯೆ ನೀಡಿಲ್ಲ. ಈಗ ಭಾರತದಲ್ಲಿ 5ಜಿ ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳ ಬೆಲೆ ₹ 27 ಸಾವಿರದಿಂದ ಆರಂಭವಾಗುತ್ತದೆ. ದೇಶದಲ್ಲಿ ಗ್ರಾಹಕರಿಗೆ ಉಚಿತವಾಗಿ 4ಜಿ ಫೋನ್‌ಗಳನ್ನು ವಿತರಿಸಿದ ಮೊದಲ ಕಂಪನಿ ಜಿಯೊ. ₹ 1,500ರಷ್ಟು ಮೊತ್ತವನ್ನು ಹಿಂಪಡೆಯಬಹುದಾದ ಠೇವಣಿ ರೂಪದಲ್ಲಿ ಇರಿಸಿ 4ಜಿ ಫೋನ್‌ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT