ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ವರ್ಷ ಪೂರೈಸಿದ ಜಿಯೊ: ಗ್ರಾಹಕರಿಗಾಗಿ ವಿಶೇಷ ಪ್ಲ್ಯಾನ್‌ಗಳು

Published 5 ಸೆಪ್ಟೆಂಬರ್ 2023, 14:07 IST
Last Updated 5 ಸೆಪ್ಟೆಂಬರ್ 2023, 14:07 IST
ಅಕ್ಷರ ಗಾತ್ರ

ನವದೆಹಲಿ : ಭಾರತದ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೊ ಇಂದಿಗೆ ಏಳು ವರ್ಷಗಳನ್ನು ಪೂರ್ಣಗೊಳಿಸಿದೆ. ಏಳು ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಜಿಯೊ ತನ್ನ ಗ್ರಾಹಕರಿಗಾಗಿ ವಿಶೇಷ ಡೇಟಾ ಪ್ಲ್ಯಾನ್‌ಗಳನ್ನು ಹೊರತಂದಿದೆ.

₹299 ಪ್ರೀಪೇಯ್ಡ್ ಪ್ಲಾನ್

₹299 ಪ್ರೀಪೇಯ್ಡ್ ಪ್ಲಾನ್‌ನಲ್ಲಿ ಪ್ರತಿ ದಿನ 2ಜಿಬಿ ಡೇಟಾ, ಅನಿಯಮಿತ ವಾಯ್ಸ್ ಕಾಲ್ಸ್ (ಧ್ವನಿ ಕರೆಗಳು) ಮತ್ತು ದಿನಕ್ಕೆ 100 ಸಂದೇಶ ಕಳುಹಿಸಬಹುದಾಗಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಸೀಮಿತ ಅವಧಿಯ ಕೊಡುಗೆಯಾಗಿ 7ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ.

₹749 ಪ್ರೀಪೇಯ್ಡ್ ಪ್ಲಾನ್

₹749 ಪ್ರೀಪೇಯ್ಡ್ ಪ್ಲಾನ್‌ನಲ್ಲಿ ಪ್ರತಿ ದಿನ 2ಜಿಬಿ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿ ದಿನ 100 ಸಂದೇಶ ಕಳುಹಿಸಬಹುದಾಗಿದೆ. ಇದು 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಸೀಮಿತ ಅವಧಿಯ ಕೊಡುಗೆಯಾಗಿ 14 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ.

₹2,999 ಪ್ರೀಪೇಯ್ಡ್ ಪ್ಲಾನ್

₹2,999 ಪ್ರೀಪೇಯ್ಡ್ ಪ್ಲಾನ್‌ನಲ್ಲಿ ದಿನಕ್ಕೆ 2.5GB, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಸಂದೇಶ ಕಳುಹಿಸಬಹುದಾಗಿದೆ. ಇದರ ವ್ಯಾಲಿಡಿಟಿ 365 ದಿನಗಳು. ಸೀಮಿತ ಅವಧಿ ಕೊಡುಗೆಯಾಗಿ 21 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ಅಜಿಯೋ ಮೇಲೆ ₹200 ರಿಯಾಯಿತಿ, ನೆಟ್ ಮೆಡ್ಸ್ (Netmeds) ಮೇಲೆ ಶೇ 20ರಷ್ಟು ರಿಯಾಯಿತಿ, ಸ್ವಿಗ್ಗಿ (Swiggy) ಮೇಲೆ ₹100ರಷ್ಟು ರಿಯಾಯಿತಿ,₹149ಕ್ಕಿಂತ ಹೆಚ್ಚಿನ ಖರೀದಿಗೆ ಉಚಿತ ಮೆಕ್‌ಡೊನಾಲ್ಡ್ ಮೀಲ್ಸ್, ರಿಲಯನ್ಸ್ ಡಿಜಿಟಲ್ ಮೇಲೆ ಶೇ 10ರಷ್ಟು ರಿಯಾಯಿತಿ, ಯಾತ್ರಿಗಳಿಗೆ ವಿಮಾನದಲ್ಲಿ ₹1,500 ಮತ್ತು ಹೋಟೆಲ್‌ಗಳಲ್ಲಿ ಶೇ.15ರಷ್ಟು ರಿಯಾಯಿತಿ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT