’ನಾನು ಏನನ್ನು ವೀಕ್ಷಿಸಬೇಕು? ಯಾವುದು ಈಗ ಟ್ರೆಂಡಿಂಗ್ನಲ್ಲಿದೆ’ ಇಂತಹ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಸುಳಿಯುತ್ತಲೇ ಇರುತ್ತವೆ. ವೀಕ್ಷಕರು ವಾಸ್ತವವಾಗಿ ಏನನ್ನು ಹುಡುಕಲು ಉದ್ದೇಶಿಸಿದ್ದಾರೆ ಎಂಬುದನ್ನು ಸರ್ಚ್ ಬಾರ್ ಇನ್ನೂ ಅರ್ಥಮಾಡಿಕೊಳ್ಳುತ್ತಿಲ್ಲ. ಯೂಸರ್ ಟೆಸ್ಟಿಂಗ್ ನಡೆಸಿದ ಸಮೀಕ್ಷೆಯ ಪ್ರಕಾರ, ಏನನ್ನು ನೋಡಬೇಕೆಂದು ನಿರ್ಧರಿಸಲು ವೀಕ್ಷಕರು ವರ್ಷಕ್ಕೆ 110 ಗಂಟೆಗಳನ್ನು ವ್ಯಯಿಸುತ್ತಾರಂತೆ. ಅಂದರೆ ಕೇವಲ ಸ್ಕ್ರೋಲಿಂಗ್ ಮಾಡುವುದರಲ್ಲೇ ಸುಮಾರು ಐದು ದಿನಗಳು ವ್ಯರ್ಥವಾಗುತ್ತಿವೆ.

ಕಂಟೆಂಟ್ ಲೈಬ್ರರಿಗಳು ವಿಸ್ತರಿಸಿದಂತೆ ಈ ’ಸರ್ಚ್’ ಗೊಂದಲವು ಹೆಚ್ಚಾಗುತ್ತಲೇ ಇರುತ್ತವೆ. ಜನ ವಿಶ್ರಾಂತಿಗಾಗಿ ಮೀಸಲಿಟ್ಟ ಸಮಯವನ್ನು ಈ ಸರ್ಚ್ ಬಾರ್ ತಿನ್ನುತ್ತಿದೆ. ಒಂದು ಕಾಲದಲ್ಲಿ ಆರಾಮವಾಗಿ ಕಳೆಯಲು ಮೀಸಲಾಗಿದ್ದ ವಾರಾಂತ್ಯದ ರಾತ್ರಿಗಳು ಈಗ ‘ಸರ್ಚ್ ಬಾರ್’ನಲ್ಲಿ ವಿಹರಿಸುವ ಸಮಯವಾಗಿ ಮಾರ್ಪಟ್ಟಿದೆ. ಕ್ಷಣಮಾತ್ರದಲ್ಲಿ ಮಾಡಬೇಕಾದ ಆಯ್ಕೆಯು ಅರ್ಧ ಗಂಟೆಯ ಬೇಟೆಯಾಗಿ ಬದಲಾಗುತ್ತದೆ.

‘ಇಂದು ರಾತ್ರಿ ನಾನು ಏನನ್ನು ವೀಕ್ಷಿಸಲಿ?’ ಎನ್ನುವ ಮೀಮ್ ಇಂದು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತದೆ. ‘ವೀಕ್ಷಿಸಲು ಏನನ್ನಾದರೂ ಆರಿಸುವುದು ಏಕೆ ಇಷ್ಟು ಕಷ್ಟ?’ ಎಂದು ಕೇಳುವ ಕೋರಾ (Quora) ಚರ್ಚೆಗಳು ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆಯುತ್ತಿವೆ. ದಂಪತಿ ಸಿನಿಮಾ ಆಯ್ಕೆ ಮಾಡಲು ನಲವತ್ತೈದು ನಿಮಿಷ ವ್ಯಯಿಸಿ ಕೊನೆಗೆ ತಮಗೆ ಈಗಾಗಲೇ ನೋಡಿರುವ ಯಾವುದನ್ನೋ ಮರು-ವೀಕ್ಷಣೆ ಮಾಡುತ್ತಾರೆ.

ಇದನ್ನು ಎ.ಐ ಹೇಗೆ ಬಗೆಹರಿಸುತ್ತದೆ?

ಜಿಯೋಹಾಟ್ಸ್ಟಾರ್ (JioHotstar) ನಂತಹ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು ಈಗ ಈ ದೀರ್ಘಕಾಲದ ಈ ಅಂತರವನ್ನು ತುಂಬಲು ಕೆಲಸ ಮಾಡುತ್ತಿವೆ. ಓಪನ್ ಎಐ ಸಹಭಾಗಿತ್ವದಲ್ಲಿ, ಜಿಯೋಹಾಟ್ಸ್ಟಾರ್ ಈಗ ಚಾಟ್ಜಿಪಿಟಿ ಆಧಾರಿತ ಧ್ವನಿ ಅನ್ವೇಷಣೆಯನ್ನು ಪರಿಚಯಿಸಿದೆ ಇದು ಭಾರತೀಯ ಪ್ರೇಕ್ಷಕರು ಕಂಟೆಂಟ್ ಹುಡುಕುವ ವಿಧಾನವನ್ನು ಬದಲಿಸುವ ಗುರಿ ಹೊಂದಿದೆ.

ಈ ಸಂಯೋಜನೆಯು ಕಠಿಣವಾದ ಕೀವರ್ಡ್ ಇನ್ಪುಟ್ಗಳ ಬದಲಿಗೆ ಸ್ವಾಭಾವಿಕ ಮತ್ತು ಸಂಭಾಷಣೆಯ ರೂಪದ ಹುಡುಕಾಟವನ್ನು ಸಾಧ್ಯವಾಗಿಸುತ್ತದೆ. ವೀಕ್ಷಕರು ಸರಳವಾಗಿ ಪ್ಲಾಟ್ಫಾರ್ಮ್ಗೆ ಹೀಗೆ ಹೇಳಬಹುದು -

‘ನನಗೆ ತಮಾಷೆಯಾಗಿರುವುದನ್ನು ಹುಡುಕಿ’

’ಕನ್ನಡದಲ್ಲಿ ಇತ್ತೀಚಿನ ಥ್ರಿಲ್ಲರ್ಗಳನ್ನು ತೋರಿಸಿ’

ಬಳಕೆದಾರನ ಮನಸ್ಥಿತಿ, ಉದ್ದೇಶ ಮತ್ತು ಸಂದರ್ಭವನ್ನು ಅರ್ಥೈಸಿ ಕೆಲವೇ ಸೆಕೆಂಡುಗಳಲ್ಲಿ ಸೂಕ್ತವಾದವುಗಳನ್ನು ಹೆಕ್ಕಿ, ಬಳಕೆದಾರ ಮುಂದೆ ಪ್ರಸ್ತುತಪಡಿಸುತ್ತದೆ.

‘ಈದಿನ ಕಠಿಣವಾಗಿತ್ತು. ನನಗೆ ಹೆಚ್ಚು ತಮಾಷೆಯಾದ ಯಾವುದನ್ನಾದರೂ ನೀಡು, ನಾಟಕೀಯವಾಗಿರಲಿ ಆದರೆ ಭಾವನಾತ್ಮಕವಾಗಿ ಅತಿಯಾಗದಿರಲಿ’ ಹೀಗೆ ಕಮಾಂಡ್ ನೀಡಿದರೆ ಅಂತಹ ಕಂಟೆಂಟ್ಗಳು ಬಳಕೆದಾರರ ಸ್ಕ್ರೀನ್ ಮೇಲೆ ಮೂಡುತ್ತದೆ. ವಿವಿಧ ಭಾಷೆಗಳನ್ನೂ ಇದು ಅರ್ಥೈಸಿಕೊಳ್ಳಬಲ್ಲದು.

ಪಂದ್ಯಗಳ ನೇರ ಪ್ರಸಾರದ ವೇಳೆ

‘ಈಗ ಏನಾಯಿತು?’

‘ಆ ಕೊನೆಯ ವಿಕೆಟ್ ಅನ್ನು ಮತ್ತೊಮ್ಮೆ ತೋರಿಸಿ’

‘ಈಗ ಅತಿ ಹೆಚ್ಚು ರನ್ ಗಳಿಸಿದವರು ಯಾರು?

ಮುಂತಾದ ಪ್ರಶ್ನೆಗಳಿಗೂ ಇದು ಉತ್ತರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.