ಕಲಬುರಗಿ: ‘ಡೈರೆಕ್ಟ್-ಟು-ಮೊಬೈಲ್ ಪ್ರಸಾರ ತಂತ್ರಜ್ಞಾನದ ಪ್ರಗತಿಪರ ಅಭಿವೃದ್ಧಿ ಮೊಬೈಲ್ಗಳಿಂದ ಡೇಟಾ ವರ್ಗಾಯಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅಂತರ್ಜಾಲದ ಸಂಪರ್ಕದ ಅಗತ್ಯವಿಲ್ಲದೆ ಲೈವ್ ಟೆಲಿವಿಷನ್ ಕಾರ್ಯಕ್ರಮಗಳು ಮತ್ತು ತುರ್ತು ಪರಿಸ್ಥಿತಿಯ ಎಚ್ಚರಿಕೆಗಳಂತಹ ವಿಷಯಗಳನ್ನು ನೇರವಾಗಿ ಮೊಬೈಲ್ ಸಾಧನಗಳಿಗೆ ಕಳುಹಿಸಿಕೊಡುತ್ತದೆ’ ಎಂದು ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಎಂಜಿನಿಯರಿಂಗ್ ಸಂಸ್ಥೆಯ (ಐಇಟಿಇ) ಅಧ್ಯಕ್ಷ ಪ್ರೊ.ಸುನೀಲ್ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐಇಟಿಇ ದಕ್ಷಿಣ ವಲಯ ಸೆಮಿನಾರ್ ಮತ್ತು ಐಇಟಿಇ ವಿದ್ಯಾರ್ಥಿ ವೇದಿಕೆ (ಐಎಸ್ಎಫ್) ಕಾಂಗ್ರೆಸ್-2026 ಉದ್ಘಾಟಿಸಿ ಅವರು ಮಾತನಾಡಿದರು.

‘ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳ ಅಡೆತಡೆಗಳನ್ನು ನಿವಾರಿಸುತ್ತಿದೆ. ಸಂಶೋಧನೆ, ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಪಡೆಯುತ್ತಿವೆ’ ಎಂದರು.

‘ಡೈರೆಕ್ಟ್-ಟು-ಮೊಬೈಲ್ ತಂತ್ರಜ್ಞಾನ ಐಪಿ-ಆಧಾರಿತ ಮಲ್ಟಿಮೀಡಿಯಾ ವಿಷಯವನ್ನು ರವಾನಿಸಲು ಟಿವಿ ಪ್ರಸಾರದ ಅಲೆಗಳನ್ನು ಬಳಸುತ್ತದೆ. ಸೆಲ್ಯುಲಾರ್ ನೆಟ್ವರ್ಕ್ ಬದಲು ವಿಶೇಷ ರಿಸೀವರ್ ಚಿಪ್ ಹೊಂದಿರುವ ಮೊಬೈಲ್ ಫೋನ್ ಈ ಸಂಕೇತಗಳನ್ನು ತೆಗೆದುಕೊಳ್ಳಬಹುದು. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಾಂಶ ರೇಡಿಯೊ ಚಿಪ್ಸೆಟ್ ಟಾಟಾ ಒಡೆತನದ ತೇಜಸ್ ನೆಟ್ವರ್ಕ್ ಬಳಿ ಇದೆ’ ಎಂದರು.

ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಿಗೆ ನೀಡಲಾಗುವ ಪಿ.ಪಿ.ಮಲ್ಹೋತ್ರ ಸ್ಮಾರಕ ಪ್ರಶಸ್ತಿಯನ್ನು ಶರಣಬಸವ ವಿಶ್ವವಿದ್ಯಾಲಯದ ಪರವಾಗಿ ಕುಲಾಧಿಪತಿ ದಾಕ್ಷಾಯಣಿ ಎಸ್.ಅಪ್ಪ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಕ್ಕೆ ದೊರೆತ ಈ ಮನ್ನಣೆ ಸಂಘದ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶರಣಬಸವ ವಿಶ್ವವಿದ್ಯಾಲಯವನ್ನು ವಿಶ್ವದ ಅತ್ಯುತ್ತಮ 100 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಅಭಿವೃದ್ಧಿಪಡಿಸುವ ಶರಣಬಸವಪ್ಪ ಅವರ ಕನಸು ನನಸಾಗಿಸುವ ಜವಾಬ್ದಾರಿ ಹೆಚ್ಚಾಗಿದೆ’ ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವೆ ಲಕ್ಷ್ಮೀ ಪಾಟೀಲ ಮಾಕಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಎಸ್.ಎಚ್.ಹೊನ್ನಳ್ಳಿ, ಹಣಕಾಸು ಅಧಿಕಾರಿ ಕಿರಣ ಮಾಕಾ, ಡೀನ್ಗಳಾದ ಶಿವಕುಮಾರ ಜವಳಿಗಿ, ಸುಜಾತಾ ಮಲ್ಲಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-34-451315535

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.