ಕೊಪ್ಪಳ: ಇಂದಿನ ಡಿಜಿಟಲ್ ಮತ್ತು ತಂತ್ರಜ್ಞಾನ ಯುಗದಲ್ಲಿ ಸಂಶೋಧಕರು ಆಧುನಿಕ ಎಐ ಪರಿಕರಗಳು ಹಾಗೂ ಸುಧಾರಿತ ಸಾಹಿತ್ಯ ಅವಲೋಕನ ವಿಧಾನಗಳ ಕುರಿತು ಸಮಗ್ರ ಮಾಹಿತಿ ಹೊಂದಿರುವುದು ಅಗತ್ಯ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಗುರುರಾಜ ಹಡಗಲಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಪಿಎಂ-ಉಷಾ ಪ್ರಾಯೋಜಕತ್ವ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶವು ಆಯೋಜಿಸಿದ್ದ ಸುಧಾರಿತ ಸಂಶೋಧನಾ ಪರಿಕರಗಳು ಕುರಿತ ರಾಜ್ಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಎರಡನೇ ದಿನದ ಅಧಿವೇಶನದಲ್ಲಿ ಅವರು ಮಾತನಾಡಿದರು.

ಮೊದಲ ತಾಂತ್ರಿಕ ಅಧಿವೇಶನದಲ್ಲಿ ಸುಧಾರಿತ ಸಾಹಿತ್ಯ ಅವಲೋಕನ ವಿಧಾನಗಳು ಕುರಿತು ಉಪನ್ಯಾಸ ನೀಡಿದ ಅವರು, ಉತ್ತಮ ಸಂಶೋಧನೆಗೆ ಸಮಗ್ರ ಸಾಹಿತ್ಯ ಅವಲೋಕನ ಮುಖ್ಯವಾಗಿದ್ದು, ಸಂಶೋಧನಾ ಅಂತರಗಳನ್ನು ಗುರುತಿಸುವುದು, ಮೂಲಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದು ಹಾಗೂ ಡಿಜಿಟಲ್ ದತ್ತಾಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಮೂರನೇ ತಾಂತ್ರಿಕ ಅಧಿವೇಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಜನಾರ್ದನ ಅವರು ಡಿಜಿಟಲ್ ದತ್ತಾಂಶ ಸಂಗ್ರಹ, ಪರಿಕರಗಳು ಮತ್ತು ತಂತ್ರಗಳು ಕುರಿತು ಉಪನ್ಯಾಸ ನೀಡಿದರು.

ಸಂಶೋಧನೆಯಲ್ಲಿ ಡಿಜಿಟಲ್ ದತ್ತಾಂಶ ಸಂಗ್ರಹಣೆಯ ಮಹತ್ವ, ಆನ್ಲೈನ್ ಸಮೀಕ್ಷಾ ವಿಧಾನಗಳು, ಕ್ಷೇತ್ರ ಅಧ್ಯಯನದಲ್ಲಿ ತಂತ್ರಜ್ಞಾನದ ಬಳಕೆ ಹಾಗೂ ದತ್ತಾಂಶ ನಿರ್ವಹಣೆಯ ಕುರಿತು ಅವರು ಮಾಹಿತಿ ನೀಡಿದರು. ನಾಲ್ಕನೇ ಅಧಿವೇಶನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್ ಕೆ ಅವರು ‘ಉಲ್ಲೇಖ ನಿರ್ವಹಣಾ ಪರಿಕರಗಳು’ ಮಾಹಿತಿ ಒದಗಿಸಿದರು.

ಕಾಲೇಜಿನ ಪ್ರಾಚಾರ್ಯ ವೈ. ಬಿ. ಅಂಗಡಿ, ಕಾರ್ಯಕ್ರಮದ ಸಂಚಾಲಕಿ ಸುಧಾ ಹೆಗಡೆ, ಐಕ್ಯೂಎಸಿ ಸಂಯೋಜಕ ಪ್ರಕಾಶಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-35-1258153341

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.