ಇಂಟರ್ ನೆಟ್ ಇಲ್ಲದೇ ಲೊಕೇಶನ್ ಶೇರ್ ಮಾಡಿ

7
ತಂತ್ರೋಪನಿಷತ್ತು

ಇಂಟರ್ ನೆಟ್ ಇಲ್ಲದೇ ಲೊಕೇಶನ್ ಶೇರ್ ಮಾಡಿ

Published:
Updated:

ಕೊಡಗು, ಕೇರಳ ಪ್ರವಾಹದಿಂದ ತತ್ತರಿಸಿಹೋಗಿದೆ. ಇಂಥಾ ನೆರೆ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರು ರಕ್ಷಣೆಗಾಗಿ ಗೂಗಲ್ ಮ್ಯಾಪ್ ಬಳಸಿ ಲೊಕೇಶನ್ ಶೇರ್ ಮಾಡಿದರೆ ರಕ್ಷಣಾ ಕಾರ್ಯಗಳಿಗೆ ಇದು ಸಹಾಯವಾಗುತ್ತದೆ. ಹೀಗೆ ಲೊಕೇಶನ್ ಶೇರ್ ಮಾಡಲು ಇಂಟರ್‌ನೆಟ್‌ ಬೇಡವೇ? ಎಂದು ನೀವು ಕೇಳಬಹುದು. ಆದರೆ ಇಂಟರ್‌ನೆಟ್‌ ಇಲ್ಲದೆಯೂ ಎಸ್‍ಎಂಎಸ್ ಮೂಲಕ ಲೊಕೇಶನ್ ಶೇರ್ ಮಾಡಬಹುದು.

ಹೀಗೆ ಮಾಡಿ
* ನಿಮ್ಮಲ್ಲಿ ಆ್ಯಂಡ್ರಾಯಿಡ್‌ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ ಇದ್ದರೆ, ಗೂಗಲ್ ಮ್ಯಾಪ್ ಆ್ಯಪ್ ಓಪನ್ ಮಾಡಿ.
* ಲೊಕೇಶನ್ ಆನ್ ಮಾಡಿದ ಕೂಡಲೇ ನೀವಿರುವ ಜಾಗವನ್ನು ಗೂಗಲ್ ಮ್ಯಾಪ್ ತೋರಿಸುತ್ತದೆ.
* ಮ್ಯಾಪ್‍ನಲ್ಲಿ ರೆಡ್ ಪಾಯಿಂಟರ್ ಕಾಣುವ ಜಾಗದಲ್ಲಿ ಒತ್ತಿ.
ಹೀಗೆ ಒತ್ತಿದಾಗ ಮೇಲೆ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಉದಾ: 12.975553.77.607247
* ಸ್ಕ್ರೀನ್ ಕೆಳಗೆ ನೀವಿರುವ ಸ್ಥಳದ ಮಾಹಿತಿಯೂ ಕಾಣಿಸುತ್ತದೆ. ಅಲ್ಲಿಯೇ ಶೇರ್ ಬಟನ್ ಕೂಡಾ ಇದೆ. ಇಲ್ಲವೇ ಕಾಪಿ ಮಾಡಿ ಆ ಸಂಖ್ಯೆಯನ್ನು ರಕ್ಷಣಾ ಕಾರ್ಯಕರ್ತರಿಗೆ ಎಸ್ಎಂಎಸ್ ಮಾಡಿದರೆ ಅವರಿಗೆ ನೀವಿರುವ ಪ್ರದೇಶ ಯಾವುದು ಎಂಬುದು ತಿಳಿಯುತ್ತದೆ.

ಮೊಬೈಲ್ ನೀರಿಗೆ ಬಿದ್ದರೆ ಹೀಗೆ ಮಾಡಿ
ಮಳೆಗಾಲದಲ್ಲಿ ಕೈ ಜಾರಿ ಫೋನ್ ನೀರಿಗೆ ಬಿದ್ದಿದ್ದರೆ ಅಥವಾ ಜೋರು ಮಳೆಯಲ್ಲಿ ಒದ್ದೆಯಾಗಿ ಕಾರ್ಯವೆಸಗದೇ ಇದ್ದರೆ, ಫೋನ್‌ ಮೊದಲಿನಂತಾಗಲು ಕೆಲವೊಂದು ಟಿಪ್ಸ್‌ಗಳು ಇಲ್ಲಿವೆ.
* ನೀರಿಗೆ ಬಿದ್ದ ಫೋನ್ ಹೊರತೆಗೆದ ಕೂಡಲೇ ಆನ್ ಮಾಡಬೇಡಿ. ಅದು ಇನ್ನೂ ಆನ್ ಆಗಿದೆ ಎಂದರೆ ಆಫ್ ಮಾಡಿ
* ಫೋನ್‍ನ ಯಾವುದೇ ಬಟನ್ ಅಥವಾ ಕೀ ಒತ್ತಬೇಡಿ.
* ಫೋನ್ ಅಲುಗಾಡಿಸಿ ನೀರು ಹೊರತೆಗೆಯುವ ಪ್ರಯತ್ನ ಮಾಡಬೇಡಿ
* ಸ್ವಿಚ್ ಆಫ್ ಮಾಡಿದ ನಂತರ ಸಿಮ್, ಎಸ್‍ಡಿ ಕಾರ್ಡ್, ಬ್ಯಾಟರಿಯನ್ನು ಹೊರತೆಗೆದಿಡಿ
* ಫೋನ್‍ ಒಳಗಿರುವ ನೀರು ತೆಗೆಯಲು ಚಾರ್ಜರ್ ಪಾಯಿಂಟ್ ಅಥವಾ ಇನ್ಯಾವುದೇ ಭಾಗಗಳಲ್ಲಿ ಊದಬೇಡಿ.ಇದರಿಂದ ಫೋನ್ ‍ನ ಬೇರೆ ಭಾಗಗಳಿಗೂ ನೀರು ಹರಡುತ್ತದೆ,
* ಒಣ ಬಟ್ಟೆ ಅಥವಾ ಟಿಶ್ಯೂ ಪೇಪರ್‌ನಿಂದ ಫೋನ್ ಒರೆಸಿ
* ಬೇಗನೆ ಒಣಗಲು ಡ್ರೈಯರ್ ಬಳಸಬೇಡಿ
* ಫೋನ್ ಕವರೊಳಗಿಟ್ಟು ಅಕ್ಕಿ ಮೂಟೆಯೊಳಗೆ ಇರಿಸಿದರೆ ಅದರಲ್ಲಿನ ತೇವಾಂಶ ಬೇಗನೆ ಕಡಿಮೆಯಾಗುತ್ತದೆ.
* ಎರಡು ದಿನಗಳ ಕಾಲ ಅಕ್ಕಿ ಮೂಟೆಯೊಳಗೆ ಫೋನ್ ಇರಿಸಿ ಹೊರ ತೆಗೆದ ನಂತರವೇ ಆನ್ ಮಾಡಿ. ಫೋನ್ ಇನ್ನೂ ಸರಿ ಹೋಗಿಲ್ಲ ಎಂದಾದರೆ ರಿಪೇರಿ ಮಾಡಿಸಿ.

ಬರಹ ಇಷ್ಟವಾಯಿತೆ?

 • 13

  Happy
 • 4

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !