ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಡ್ ಇನ್ ಇಂಡಿಯಾ ಶ್ರೇಣಿಯ ಸೌಂಡ್ ಬಾರ್

Last Updated 6 ಆಗಸ್ಟ್ 2022, 3:45 IST
ಅಕ್ಷರ ಗಾತ್ರ

ಭಾರತದ ಪ್ರಮುಖ ಸ್ವದೇಶಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಕಂಪನಿ ಮಿವಿ ಎರಡು ನೂತನ ಸೌಂಡ್‌ ಬಾರ್‌ಗಳನ್ನು ಬಿಡುಗಡೆ ಮಾಡಿದೆ. ಮೇಡ್ ಇನ್ ಇಂಡಿಯಾ ಶ್ರೇಣಿಯಲ್ಲಿ ‘ಎಸ್ 16’ ಮತ್ತು ‘ಎಸ್ 24’ ಎಂಬ 2 ಸೌಂಡ್‌ ಬಾರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿಭಿನ್ನ ಶೈಲಿ ಮತ್ತು ಪರಿಪೂರ್ಣ ಧ್ವನಿಯನ್ನು ಹೊಂದಿರುವ ಈ ಸೌಂಡ್‌ ಬಾರ್‌ಗಳನ್ನು ಆಕರ್ಷಕವಾಗಿವಿನ್ಯಾಸಗೊಳಿಸಲಾಗಿದೆ.

‘ಎಸ್ 16’ ಸರಣಿಯ ಸೌಂಡ್‌ಬಾರ್‌ ₹1,499 ಮತ್ತು ‘ಎಸ್ 24’ ಸರಣಿಯ ಸೌಂಡ್‌ಬಾರ್‌ ₹1,999ಕ್ಕೆ ದೊರೆಯಲಿವೆ.

ಮುಂದಿನ ಪೀಳಿಗೆಯ ಈ ಸೌಂಡ್‌ ಬಾರ್‌ಗಳನ್ನು ವಿಶೇಷ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ಆಡಿಯೊ ಕ್ಷೇತ್ರದಲ್ಲಿ ನಮ್ಮ ಸೌಂಡ್‌ ಬಾರ್‌ಗಳು ಹೊಸ ಸೇರ್ಪಡೆಯಾಗಿವೆ. ಸಂಗೀತಪ್ರಿಯರಿಗೆ ಕಡಿಮೆ ಬೆಲೆಯಲ್ಲಿ ಇವುಗಳನ್ನು ನೀಡಲಾಗುತ್ತಿದೆ. ಈ ಸೌಂಡ್‌ ಬಾರ್‌ಗಳಲ್ಲಿ 6 ಗಂಟೆಗಳ ಕಾಲ ಬ್ಯಾಟರಿ ಬರಲಿದೆ. ಇವುಗಳುಹೆಚ್ಚಿನ ಕಾರ್ಯಕ್ಷಮತೆ, ದೀರ್ಘ ಬಾಳಿಕೆ ಮತ್ತು ಗುಣಮಟ್ಟದಿಂದ ಕೂಡಿವೆ ಎಂದು ಕಂಪನಿಯ ಸಹ ಸಂಸ್ಥಾಪಕ ಮಿದುಲಾ ದೇವಭಕ್ತುನಿ ಹೇಳಿದ್ದಾರೆ.

ಈ ಸೌಂಡ್‌ಬಾರ್‌ಗಳು ಎಯುಎಕ್ಸ್‌, ಬ್ಯೂಟೂಥ್‌, 5.1, ಟಿಎಫ್‌/ ಯುಎಸ್‌ಬಿ ಮತ್ತು ಮೈಕ್ರೊ ಎಸ್‌ಡಿ ಕಾರ್ಡ್‌ಗಳ ಬೆಂಬಲದೊಂದಿಗೂ ಕೆಲಸ ಮಾಡಲಿವೆ. ದೀರ್ಘ ಕಾಲದಲ್ಲಿ ಹಾಡುಗಳನ್ನು ಕೇಳಬಹುದು ಹಾಗೇ ಗ್ರಾಹಕರಿಗಾಗಿ ಗೂಗಲ್ ಅಸಿಸ್ಟೆಂಟ್ ಸಂಯೋಜನೆ ಮಾಡಲಾಗಿದೆ.

2015ರಲ್ಲಿ ಮಿವಿ ಕಂಪನಿಯನ್ನು ವಿಶ್ವನಾಥ ಕಂದುಲಾ ಮತ್ತು ಮಿಧುಲಾ ದೇವಭಕ್ತುನಿ ಪ್ರಾರಂಭ ಮಾಡಿದರು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಇಯರ್ ಫೋನ್‌ಗಳು ಸೇರಿದಂತೆ ಆಡಿಯೊ ವಿಭಾಗದಲ್ಲಿನ ಹಲವಾರು ಸಾಧನಗಳನ್ನು ಈ ಕಂಪನಿ ಉತ್ಪಾದನೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT