ಮಂಗಳೂರು: ತಂತ್ರಜ್ಞಾನದ ಆವಿಷ್ಕಾರದಿಂದ ಎಲ್ಲ ಕ್ಷೇತ್ರಗಳೂ ಬದಲಾವಣೆ ಕಾಣುತ್ತಿವೆ. ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದ್ದು, ಲೆಕ್ಕ ಪರಿಶೋಧನೆಯಲ್ಲೂ ಬಳಕೆಯಾಗುತ್ತಿದೆ. ಆದರೆ, ಇದರಿಂದ ಉದ್ಯೋಗ ನಷ್ಟ ಆಗಲಾರದು ಎಂದು ಜಾಗತಿಕ ಅಧ್ಯಯನಗಳು ತಿಳಿಸಿವೆ ಎಂದು ಎಲುಬು ಮತ್ತು ಕೀಲು ತಜ್ಞ ಡಾ. ಶಾಂತಾರಾಮ ಶೆಟ್ಟಿ ಹೇಳಿದರು.

ಐಸಿಎಐನ ಮಂಗಳೂರು ಶಾಖೆ ನೇತೃತ್ವದಲ್ಲಿ ನಗರದ ಪಾಲೆಮಾರ್ ಕನ್ವೆನ್ಶನ್ ಸೆಂಟರ್ನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಅಧಿಗಮ-ಜ್ಞಾನದ ಬಲವರ್ಧನೆ’ ರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಲೆಕ್ಕ ಪರಿಶೋಧಕರು, ಎಂಜಿನಿಯರ್ಗಳು, ವೈದ್ಯರು, ಎಲ್ಲ ಕ್ಷೇತ್ರಗಳ ವೃತ್ತಿಪರರು ಈ ದೇಶವನ್ನು ಮುನ್ನಡೆಸುವ ಇಚ್ಛಾಶಕ್ತಿ ತೋರಬೇಕು. ಭಾರತದ ಇತಿಹಾಸ ನೋಡಿದರೆ, ದೇಶವು ಆರ್ಥಿಕವಾಗಿ ಸಮೃದ್ಧವಾಗಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿ ಕುಸಿತವಾಗಿದ್ದ ದೇಶದ ಆರ್ಥಿಕತೆ ಮತ್ತೆ ಬಲಿಷ್ಠವಾಗುತ್ತಿದೆ. ಪ್ರಸ್ತುತ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದು, ಶೀಘ್ರ ಬ್ರಿಟನ್ ಅನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಹೋಗಲಿದೆ ಎಂದರು.

ಐಸಿಎಐನ ಕೇಂದ್ರ ಮಂಡಳಿಯ ಸದಸ್ಯ ದಯಾನಿವಾಸ ಶರ್ಮಾ, ಪಂಕಜ್ ಶಾ, ದಕ್ಷಿಣ ಭಾರತ ಪ್ರಾದೇಶಿಕ ಸಮಿತಿ (ಎಸ್ಐಆರ್ಸಿ) ಕಾರ್ಯದರ್ಶಿ ಪ್ರಮೋದ್ ಹೆಗ್ಡೆ ಉಪಸ್ಥಿತರಿದ್ದರು. ಐಸಿಎಐ ಮಂಗಳೂರು ಅಧ್ಯಕ್ಷ ಡ್ಯಾನಿಯಲ್ ಮಾರ್ಷ್ ಪಿರೇರಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಎನ್. ವಂದಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಕಾರ್ತಿಕೇಯ ಶೆಣೈ, ಮಿಥುನ್ ಡಿಸೋಜ, ಉದಯ ಕುಲಕರ್ಣಿ ಭಾಗವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-29-1199328174

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.