ಮಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀರಾಮೋತ್ಸವ ಸಮಿತಿ ಆಶ್ರಯದಲ್ಲಿ 25ನೇ ವರ್ಷದ ಶ್ರೀರಾಮೋತ್ಸವವು ಇದೇ 26ರಿಂದ 29ರವರೆಗೆ ನಗರದ ಕದ್ರಿ ಮೈದಾನದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಸಮಿತಿಯ ಗೌರವಾಧ್ಯಕ್ಷ ಎಂ.ಬಿ.ಪುರಾಣಿಕ್, ‘ಶ್ರೀರಾಮಚಂದ್ರ ವಿಶ್ವಕ್ಕೇ ಆದರ್ಶ ಪುರುಷ. ಶ್ರೀರಾಮ ದೇವರ ಜನ್ಮಸ್ಥಾನವಾದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಿಸುವ ಸಂಕಲ್ಪದಿಂದ ನಗರದ ಕೇಂದ್ರ ಮೈದಾನದಲ್ಲಿ ಶ್ರೀರಾಮೋತ್ಸವನ್ನು 25 ವರ್ಷಗಳ ಹಿಂದೆ ವಿಎಚ್ಪಿ ಆರಂಭಿಸಿತ್ತು. ಇದರ ರಜತ ವರ್ಷಾಚರಣೆಗೆ ಮುನ್ನವೇ ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದ್ದು ಹೆಮ್ಮೆಯ ವಿಚಾರ’ ಎಂದರು.

‘ರಜತ ವರ್ಷದ ಶ್ರೀರಾಮೋತ್ಸವ ಪ್ರಯುಕ್ತ ಇದೇ 26ರಿಂದ 29ರವರೆಗೆ ನಿತ್ಯ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ 26 ರಂದು ಕದ್ರಿ ಶ್ರೀಮಂಜುನಾಥ ದೇವಸ್ಥಾನದಿಂದ ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ದೇವರ ರಜತ ಮೂರ್ತಿಗಳನ್ನು ಭವ್ಯ ಶೋಭಾಯಾತ್ರೆಯಲ್ಲಿ ಕದ್ರಿ ಮೈದಾನಕ್ಕೆ ಒಯ್ದು ಪ್ರತಿಷ್ಠಾಪಿಸಲಾಗುತ್ತದೆ. 18 ಅಡಿ ಎತ್ತರದ ರಾವಣದ ಪ್ರತಿಮೆ ದಹನ ಹಾಗೂ ಸುಡುಮದ್ದು ಪ್ರದರ್ಶನ ಇದೇ 29 ರಂದು ರಾತ್ರಿ 8.30ರಿಂದ ನಡೆಯಲಿದೆ’ ಎಂದರು.

ಸಮಿತಿ ಕಾರ್ಯಾಧ್ಯಕ್ಷ ಸುದರ್ಶನ ಮೂಡುಬಿದಿರೆ, ‘ಇದೇ 26ರಂದು ಸಂಜೆ 5ರಿಂದ ವಸುಧೈವ ಭಜನಾ ಕುಟುಂಬದ ಅಖಂಡ ಭಜನೆ, 27ರಂದು ಬೆಳಿಗ್ಗೆ 9.30ರಿಂದ ಶ್ರೀರಾಮತಾರಕ ಮಂತ್ರ ಹೋಮ, ಮಧ್ಯಾಹ್ನ 2ರಿಂದ ಕುಣಿತ ಭಜನೆ ಸ್ಪರ್ಧೆ ನಡೆಯಲಿದೆ. ಅಂದು ರಾತ್ರಿ 8ರಿಂದ ‘ನಿಜ ಮಹಾತ್ಮ ಬಾಬಾ ಸಾಹೇಬ ನಾಟಕ ಆಯೋಜಿಸಲು ನಿರ್ಧರಿಸಿದ್ದೆವು. ಕಾರಣಾಂತರದಿಂದ ಅದರ ಬದಲು ‘ಪರಮಾತ್ಮ ಪಂಜುರ್ಲಿ’ ನಾಟಕ ಆಯೋಜಿಸಿದ್ದೇವೆ. ಇದೇ 28ರಂದು ಬೆಳಿಗ್ಗೆ 9ರಿಂದ ವಿಶ್ವಶಾಂತಿಗಾಗಿ ನರಸಿಂಹ ಹೋಮ, ಸಂಜೆ 4ರಿಂದ ಸನಾತನ ನಾಟ್ಯಾಲಯದವರಿಂದ ನೃತ್ಯ ವೈಭವ, ರಾತ್ರಿ 8ರಿಂದ ‘ಛತ್ರಪತಿ ಶಿವಾಜಿ’ ನಾಟಕ ನಡೆಯಲಿದೆ. ಇದೇ 29ರಂದು ಮಧ್ಯಾಹ್ನ 12.15ರಿಂದ ‘ದೃಢನಾರಿ ಸದೃಢ ಭಾರತ’ ಮಹಿಳಾ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 5ರಿಂದ ಪುತ್ತೂರು ಜಗದೀಶ ಆಚಾರ್ಯ ಬಳಗದವರಿಂದ ಗಾನ ಸಂಭ್ರಮ ನಡೆಯಲಿದೆ’ ಎಂದರು.

ಸಮಿತಿಯ ಸುನೀಲ್ ಆಚಾರ್, ‘ಈ ಕಾರ್ಯಕ್ರಮದಿಂದ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಎಚ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಮುಖಂಡರಾದ ಗೋಪಾಲ ಕುತ್ತಾರ್, ಪೊಳಲಿ ಗಿರಿಪ್ರಕಾಶ ತಂತ್ರಿ, ರವಿ ಅಸೈಗೋಳಿ ಮತ್ತಿತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-29-2113506658

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.