ಮುಧೋಳ: ‘ಅನಿಮೇಷನ್., ಕೃತಕ ಬುದ್ಧಿಮತ್ತೆ, ಲಾರ್ಜ್ ಲ್ಯಾಂಗ್ವೆಜ್ ಮಾಡೆಲ್ಸ್ ಟೆಕ್ನಾಲಜಿಗಳಂತಹ ಕ್ಷೇತ್ರಗಳಲ್ಲಿ ಅಪಾರ ಉದ್ಯೋಗವಕಾಶಗಳಿವೆ’ ಭಾರತೀಯ ಚಲನಚಿತ್ರರಂಗದ ಅನಿಮೇಷನ್. ಕ್ಷೇತ್ರದ ತಜ್ಞ ಹಾಗೂ ಕೆ.ಸೇರಾ ಸೇರಾ ವರ್ಚುವಲ್ ಪ್ರೊಡಕ್ಷನ್ಸ್ ಸಂಸ್ಥೆಯ ಸಿಇಒ ಯುನುಸ್ ಬುಖಾರಿ ಹೇಳಿದರು.

ನಗರದ ಬಿಳೂರು ಗುರುಬಸವ ಮಹಾಸ್ವಾಮೀಜಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ತಾಂತ್ರಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ಸಿದ್ದಿ ಸೋಪಾನಮ್-2026 ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

‘ಈಗ ಅನಿಮೇಷನ್ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲದೆ ಎಂಜಿನಿಯರಿಂಗ್ ವಿನ್ಯಾಸ ಮತ್ತು ವರ್ಚುವಲ್ ರಿಯಾಲಿಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ತಾಂತ್ರಿಕ ಜ್ಞಾನ ಮತ್ತು ಸೃಜನಶೀಲತೆಯನ್ನು ಸಂಯೋಜಿಸುವ ವಿದ್ಯಾರ್ಥಿಗಳೇ ಭವಿಷ್ಯದಲ್ಲಿ ಯಶಸ್ವಿಯಾಗುತ್ತಾರೆ’ ಎಂದು ತಿಳಿಸಿದರು.

ಮಾಧ್ಯಮ ಪ್ರತಿನಿಧಿ ವಿನಯ ಶೆಟ್ಟರ್, ವಿಧ್ಯಾರ್ಥಿ ಪ್ರತಿನಿಧಿ ಮಹಾದೇವ ಪಟೊಲಿ, ಬಸಮ್ಮ ಕರಿಗೌಡರ ಜಿಮಖಾನ್ ಚೆರಮನ್ ಮಲ್ಲು ಹುಣಶಿಕಟ್ಟಿ ಮೌನೇಶ ಯಂಡಿಗೇರಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅನಗಾ ಕುಲಕರ್ಣಿ ಮತ್ತು ಹರ್ಷ ಶಹಾ ನಿರೂಪಿಸಿದರು. ಪ್ರಾಚಿ ಪ್ರಸಾದ ಸ್ವಾಗತಿಸಿದರು ಮತ್ತು ಪ್ರೊ. ಗೀತಾ ಜಿರಲಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-19-92126568

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.