ಮೈಸೂರು: ‘ಕೃತಿಯ ಅನುವಾದಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆ ಹೊಸ ಪ್ರಯೋಗವಾಗಿದ್ದು, ಇದರಿಂದ ಭಾಷೆಯ ಸಂರಕ್ಷಣೆ ಸಾಧ್ಯವಾಗಲಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ಇಲ್ಲಿನ ವಿಜಯನಗರದ ಜಗನ್ನಾಥ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರದ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ, ಬೆಂಗಳೂರಿನ ‘ನಾವ್ ಎಐ’ ತಂಡವು ಎಐ ತಂತ್ರಜ್ಞಾನ ಬಳಸಿ ಅನುವಾದಿಸಿದ ಮೊದಲ ಭಾರತೀಯ ಸಾಹಿತ್ಯ ಕೃತಿಯಾದ ವಿಕ್ರಂ ಸಂಪತ್ ಅವರ`ಮೈ ನೇಮ್ ಇಸ್ ಗೌಹರ್ ಜಾನ್’ ಕೃತಿಯ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಅನುವಾದದಲ್ಲಿ ಎಐ ಬಳಸುವುದರಿಂದ ಯಾವುದೇ ತಪ್ಪಿಲ್ಲ. ಇದರಿಂದ ಭಾಷಾ ಬೆಳವಣಿಗೆ ಆಗುತ್ತದೆ. ಎಐ ಜನರ ಉದ್ಯೋಗ ಕಸಿಯುತ್ತಿದೆ ಎಂಬ ಆರೋಪಗಳಿವೆ. ಆದರೆ, ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಕೃತಕ ಬುದ್ಧಿಮತ್ತೆಯಿಂದ ನಾನಾ ಹೊಸ ಅವಕಾಶಗಳು ದೊರೆಯುತ್ತಿರುವುದು ತಿಳಿಯುತ್ತದೆ’ ಎಂದು ಹೇಳಿದರು.

‘ಈ ಕೃತಿಯು ಭಾರತದ ಮೊದಲ ಗ್ರಾಮಾಫೋನ್ ಕಲಾವಿದೆ ಗೌಹರ್ ಜಾನ್ ಕುರಿತು ವಿಕ್ರಮ್ ಸಂಪತ್ ಬರೆದ ಜೀವನ ಚರಿತ್ರೆಯಾಗಿದೆ. ಹೀಗೆ ಎಐ ತಂತ್ರಜ್ಞಾನ ಬಳಸಿ ಇಂಗ್ಲಿಷ್ನಲ್ಲಿರುವ ಕೃತಿಯನ್ನು ಕನ್ನಡದಲ್ಲಿ ಅನುವಾದಿಸಿದ್ದರಿಂದ ನಾವು ಜಾನ್ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ’ ಎಂದರು.

ಶಿಕ್ಷಣದಲ್ಲಿ ಬದಲಾವಣೆ ಸಾಧ್ಯ: ‘ಹೊಸ ತಂತ್ರಜ್ಞಾನದಿಂದ ಭಾರತೀಯರ ಇತಿಹಾಸವನ್ನು ಭಾರತೀಯರೇ ಬರೆಯುವಂತಾಗಿರುವುದು ಮಹತ್ತರ ಬದಲಾವಣೆಯಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೆಕಾಲೆಯ ಶಿಕ್ಷಣ ಪದ್ಧತಿಯ ಸಂದರ್ಭದಲ್ಲಿ ಶಿಕ್ಷಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು.ಅಲ್ಲಿ ಮಾರ್ಕ್ಸ್ವಾದ ಎದ್ದು ಕಾಣುತ್ತಿತ್ತು. ಆದರೆ ಈಗ ಶಿಕ್ಷಣ ಕ್ರಾಂತಿಯಾಗಿದ್ದು, ಮಹತ್ವದ ಬದಲಾವಣೆಗಳನ್ನು ತರಲು ಸಾಧ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಲೇಖಕ ವಿಕ್ರಂ ಸಂಪತ್, ಗೌರಿ ಎಸ್. ಜೋಶಿ, ಜಿ.ಎಲ್. ಶೇಖರ್, ಪ್ರಕಾಶಕ ಸುಬ್ರಹ್ಮಣ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-39-1683474718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.