ಮೈಸೂರು: ‘ಆಧುನಿಕ ದೂರಸಂಪರ್ಕದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ರಾಂತಿಕಾರಿ ತಂತ್ರಜ್ಞಾನವಾಗಿದೆ’ ಎಂದು ಎಂಜಿನಿಯರ್ ಗ್ಲೋಬಲ್ ಲ್ಯಾಬ್ ಸಲ್ಯೂಷನ್ಸ್ (ಎಪಿಎಸಿ) ನಿರ್ದೇಶಕ ರಾಮಚಂದ್ರ ಗಂಭೀರ್ ಹೇಳಿದರು.

ನಗರದ ಎಂಜಿನಿಯರ್ಗಳ ಸಂಸ್ಥೆಯಿಂದ ಭಾನುವಾರ ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸಮಾಜ ದಿನದ ಅಂಗವಾಗಿ ಆಯೋಜಿಸಿದ್ದ ‘ಆಧುನಿಕ ದೂರಸಂಪರ್ಕದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ’ ವಿಷಯದ ಕುರಿತು ಅವರು ಮಾತನಾಡಿದರು.

‘ನೆಟ್ವರ್ಕ್ ನಿರ್ವಹಣೆ ಸ್ವಯಂಚಾಲಿತಗೊಳಿಸಲು, ಗ್ರಾಹಕರ ಅನುಭವ ಹೆಚ್ಚಿಸಲು, ಭದ್ರತೆ ಬಲಪಡಿಸಲು ಎಐ ನಿರ್ಣಾಯಕ ಪಾತ್ರ ವಹಿಸಿದೆ’ ಎಂದು ತಿಳಿಸಿದರು.

‘ಎಐ ತಂತ್ರಜ್ಞಾನದಲ್ಲಿ ಭಾರತ ಯುವಶಕ್ತಿ ಅದ್ಭುತ ಸಾಧನೆ ಮಾಡಿದೆ. ಜಗತ್ತಿನಲ್ಲಿ ಎಐ ಟೆಕ್ನಾಲಜಿ ವಿಷಯದಲ್ಲಿ ಪರಿಣತಿ ಪಡೆದವರಲ್ಲಿ ಭಾರತೀಯ ಯುವಕರೇ ಹೆಚ್ಚು. ಮುಂದಿನ ದಿನಗಳಲ್ಲಿ ಎಐ ಬಳಸಿ, ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಬಹುದಾಗಿದೆ’ ಎಂದರು.

‘ಜಗತ್ತಿನ ದೂರಸಂಪರ್ಕದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. 1ಜಿ, 2ಜಿ, 3ಜಿ, 4ಜಿ ಹಾಗೂ 5ಜಿ ನೆಟ್ ವರ್ಕಿಂಗ್ ಸಂಶೋಧನೆಯಾಗಿದೆ. ಇದೀಗ 5ಜಿ ಜೊತೆಗೆ ಎಐ ಟೆಕ್ನಾಲಜಿ ಸೇರಿಕೊಂಡಿದೆ. ಇದರಿಂದ ಡಿಜಿಟಲ್ ವ್ಯವಹಾರಕ್ಕೆ ಎಐ ತಂತ್ರಜ್ಞಾನ ಸಾಕಷ್ಟು ಭದ್ರತೆ ಒದಗಿಸುತ್ತದೆ. ಮೊಬೈಲ್ ಫೋನ್ಗೆ ಬೇರೆ ಬೇರೆ ಕಂಪನಿಯ ಪ್ರತಿನಿಧಿಗಳು ಕರೆ ಮಾಡುತ್ತಾರೆ. ಇದು ಗ್ರಾಹಕರಿಗೆ ಅವಶ್ಯವಿರುವುದಿಲ್ಲ ಎಂಬುದನ್ನು ಅರಿಯುವ ಎಐ ಟೆಕ್ನಾಲಜಿ, ಗ್ರಾಹಕರನ್ನು ಈ ಕರೆ ಸ್ವೀಕರಿಸದಂತೆ ಎಚ್ಚರಿಸುತ್ತಿದೆ’ ಎಂದು ತಿಳಿಸಿದರು.

ಐಇಐ ಮೈಸೂರು ಘಟಕದ ಅಧ್ಯಕ್ಷ ಎಚ್.ಎನ್.ಸುರೇಶ್ಬಾಬು, ಕಾರ್ಯದರ್ಶಿ ಎಂ.ಕೆ.ನಂಜಯ್ಯ, ಸಮಿತಿ ಸದಸ್ಯ ಡಾ.ಬಿಂದು ಎ.ಧಾಮಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-39-1796076511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.